ಕೊಲೆ ಮಾಡುವ ಉದ್ದೇಶದಿಂದ ಪತ್ನಿಯ ಕುತ್ತಿಗೆ ಇರಿದು ಹುಚ್ಚರಂತೆ ಕೈಯಲ್ಲಿ ಕತ್ತಿ ಹಿಡಿದು ಕುಣಿದು ಕುಪ್ಪಳಿಸಿದ ಪತಿಯನ್ನು ಪೊಲೀಸರು ಬಂಧಿಸಿದ್ದು, ಹಲ್ಲೆಗೆ ಒಳಗಾದ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕುಂದಾಪುರ (ಆ.5): ಕೊಲೆ ಮಾಡುವ ಉದ್ದೇಶದಿಂದ ಪತ್ನಿಯ ಕುತ್ತಿಗೆ ಇರಿದು ಹುಚ್ಚರಂತೆ ಕೈಯಲ್ಲಿ ಕತ್ತಿ ಹಿಡಿದು ಕುಣಿದು ಕುಪ್ಪಳಿಸಿದ ಪತಿಯನ್ನು ಪೊಲೀಸರು ಬಂಧಿಸಿದ್ದು, ಹಲ್ಲೆಗೆ ಒಳಗಾದ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಶಿವಮೊಗ್ಗ ಜಿಲ್ಲೆಯ ಸಾಗರ ನಿವಾಸಿ ಲಕ್ಷ್ಮಣ (40) ಬಂಧಿತ ಆರೋಪಿ. ಈತನ ಪತ್ನಿ ಅನಿತಾ (38) ಹಲ್ಲೆಗೊಳಗಾದ ಮಹಿಳೆ. ಈ ದಂಪತಿ ಕುಂದಾಪುರ ತಾಲೂಕಿನ ಬಸ್ರೂರಲ್ಲಿರುವ ವೃದ್ಧಾಶ್ರಮವೊಂದರ ತೋಟದಲ್ಲಿ ಕೆಲಸ ಮಾಡಲು ಬಂದಿದ್ದರು. ಅಲ್ಲಿನ ಕ್ವಾರ್ಟ್ರಸ್‌ನಲ್ಲಿದ್ದ ಮನೆಯಲ್ಲಿ ವಾಸ್ತವ್ಯ ಹೂಡಿದ್ದರು. ಕೌಟುಂಬಿಕ ಕಲಹಕ್ಕೆ ಸಂಬಂಧಿಸಿದಂತೆ ಶನಿವಾರ ರಾತ್ರಿ ಇಬ್ಬರ ನಡುವೆ ಜಗಳವಾಗಿದ್ದು, ಪತ್ನಿಯ ಕುತ್ತಿಗೆಗೆ ಲಕ್ಷ್ಮಣ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ಗಂಭೀರಗಾಯಗೊಂಡ ಅನಿತಾ ಅಡುಗೆ ಕೋಣೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಇತ್ತ ಲಕ್ಷ್ಮಣ ಮನೆಯ ಬಾಗಿಲು ಮುಚ್ಚಿಕೊಂಡು ಹಾಲ್‌ನಲ್ಲಿ ಕತ್ತಿ ಹಿಡಿದು ಹುಚ್ಚರಂತೆ ಕುಣಿಯುತ್ತಿದ್ದ. ಕಿಟಕಿಯ ಮೂಲಕ ಹೇಯ ಕೃತ್ಯವನ್ನು ಗಮಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಆಸ್ತಿ ವಿಚಾರಕ್ಕೆ ಗಲಾಟೆ: ಹೆತ್ತ ತಾಯಿಯನ್ನೇ ಕಟ್ಟಿಗೆಯಿಂದ ಹೊಡೆದು ಕೊಂದ ಪಾಪಿ!
ಸೆರೆ ಹಿಡಿಯಲು ಹರಸಾಹಸ: ಕತ್ತಿ ಹಿಡಿದು ಮನೆಯೊಳಗೆ ಕುಣಿಯುತ್ತಿದ್ದ ಆರೋಪಿ ಲಕ್ಷ್ಮಣನನ್ನು ಬಂಧಿಸಲು ಹರಸಾಹಸ ಪಡಬೇಕಾಯಿತು. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಪೊಲೀಸರು ಮನೆಯೊಳಗೆ ಅಶ್ರುವಾಯು ಪ್ರಯೋಗಿಸಿದರು. ಆರೋಪಿ ಮನೆಯೊಳಗೆ ಕತ್ತಿ ಬೀಸುತ್ತಿದ್ದರಿಂದ ಬಾಗಿಲು ಒಡೆದು ಹೋಗಲು ಸುಲಭವಾಗಿರಲಿಲ್ಲ. ಹಲವು ಗಂಟೆಗಳ ಬಳಿಕ ಸ್ಥಳೀಯ ಯುವಕರ ಸಹಾಯದಿಂದ ಲಕ್ಷ್ಮಣನ ಚಿತ್ತವನ್ನು ಬೇರೆಡೆ ಸೆಳೆದು ಮನೆಯ ಕಿಟಕಿ ಒಡೆದು ಅನಿತಾಳನ್ನು ಹೊರಗಡೆ ಕರೆತರಲಾಯಿತು. ಬಳಿಕ ಆರೋಪಿಯನ್ನು ಪೊಲೀಸರು ಬಂಧಿಸಿದರು.
ಕೊಡಲಿಯಿಂದ ತಾಯಿ ಮೇಲೆಯೇ ಮಗನಿಂದ ಹಲ್ಲೆ! ಮಾನಸಿಕ ಅಸ್ವಸ್ಥನ ಹಿಡಿಯಲು ಪೊಲೀಸರು ಹರಸಾಹಸ!
ಗಂಭೀರವಾಗಿ ಗಾಯೊಗೊಂಡಿದ್ದ ಅನಿತಾಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಂಡ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.