
ಹುಬ್ಬಳ್ಳಿ(ಜೂ. 23) ಬ್ರಾ-ಪ್ಯಾಂಟಿ ಕದಿಯುವ ಸಿಂಗಪುರ ಕಳ್ಳನಿಗೆ ಘೋರ ಶಿಕ್ಷೆಯಾಗಿದೆ ಎಂಬ ಸುದ್ದಿಯನ್ನು ಓದಿ ಅರಗಿಸಿಕೊಳ್ಳಲಾಗಿತ್ತು. ಈಗ ಹುಬ್ಬಳ್ಳಿಯಿಂದ ಅಂಥದ್ದೋ ಒಂದು ಪ್ರಕರಣ ಬಂದಿದೆ.
ಮಹಿಳೆಯರ ಬಟ್ಟೆ ಕದಿಯುತ್ತಿದ್ದ ವಿಕೃತ ಮನಸ್ಸಿನ ಯುವಕನೊಬ್ಬನ ಹಿಡಿದು ಸಾರ್ವಜನಿಕರೇ ಗೂಸಾ ನೀಡಿದ್ದಾರೆ. ಕಳೆದ ಕೆಲ ದಿನಗಳಿಂದ ನಗರದ ಹಲವು ಬಡಾವಣೆಗಳಲ್ಲಿ ಮಹಿಳೆಯರ ಬಟ್ಟೆ ಕಳ್ಳತನ ಮಾಡುತ್ತಿದ್ದ ಯುವಕ ಮಂಗಳವಾರ ಸಿಕ್ಕಿಬಿದ್ದಾನೆ. ಸಿಕ್ಕ ಮೇಲೆ ನಮ್ಮ ಜನ ಬಿಡ್ತಾರ..! ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿ ಮನಸೋ ಇಚ್ಛೆ ಬಾರಿಸಿದ್ದಾರೆ.
ಎಲ್ಲ ಕಾಣುವಂತೆ ಬಟ್ಟೆ ಧರಿಸಿ ಕೋವಿಡ್ ವಾರ್ಡ್ ಗೆ ಬಂದ ನರ್ಸ್
ಸಿಂಗಪುರದ ಬಟ್ಟೆ ಕಳ್ಳನೊಬ್ಬನ ಮನೆ ರೇಡ್ ಮಾಡಿದಾಗ ಮನೆಯಲ್ಲಿ 106 ಬ್ರಾ ಮತ್ತು 41 ಪ್ಯಾಂಟಿಗಳು ಸಿಕ್ಕಿದ್ದವು. ಮನೆಯೊಂದಕ್ಕೆ ನುಗ್ಗಿ ತಲಾ ಹನ್ನೆರಡು ಬ್ರಾ ಮತ್ತು ಪ್ಯಾಂಟಿ ಹೊತ್ತುಕೊಂಡು ಹಿಂದಿನ ಬಾಗಿಲಲ್ಲಿ ಹಾರಿಬಂದಿದ್ದು ಇಲ್ಲಿಯವರೆಗಿನ ದಾಖಲೆ ಸಹ ಆತ ಹೊಂದಿದ್ದ. ಬೆಂಗಳೂರಿನ ಮಹಾರಾಣಿ ಕಾಲೇಜಿನ ಹಾಸ್ಟೇಲ್ ಗೆ ನುಗ್ಗಿದ್ದ ಸೈಕೋ ಒಣಗಿಸಿದ್ದ ಹೆಣ್ಣು ಮಕ್ಕಳ ಒಳುಡುಪು ಕದ್ದಿದ್ದು ಕಳೆದ ವರ್ಷ ವರದಿಯಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ