ನಟೋರಿಯಸ್‌ ರೌಡಿ ಜತೆ ವಿಗ್‌ ಇಲ್ಲದ ದರ್ಶನ್‌ ಜೈಲಲ್ಲಿ ಧಮ್ ಹೊಡೆಯೋ ಫೋಟೋ ಲೀಕ್‌ ಆಗಿದ್ದೇಗೆ?

By Suvarna News  |  First Published Aug 25, 2024, 5:45 PM IST

ಜೈಲಿನಲ್ಲಿ ದರ್ಶನ್‌ ರೌಡಿಗಳ ಜೊತೆ ಸಿಗರೇಟ್ ಸೇದುತ್ತಾ, ಟೀ ಕುಡಿಯುತ್ತಿರುವ ಫೋಟೋ ವೈರಲ್ ಆಗಿದೆ. ಈ ಫೋಟೋ ಜೈಲಿನ ಒಳಗಿನಿಂದಲೇ ಲೀಕ್ ಆಗಿದ್ದು, ಜೈಲಾಧಿಕಾರಿಗಳಿಗೆ ಆತಂಕ ಶುರುವಾಗಿದೆ.


ಬೆಂಗಳೂರು (ಆ.25): ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಸೇರಿಸುವ ವಿಚಾರಣಾಧೀನ ಖೈದಿ ದರ್ಶನ್‌ ನನಗೆ ಆರೋಗ್ಯ ಹದಗೆಡುತ್ತಿದೆ. ಮನೆ ಊಟ ಬೇಕು, ಬೆಚ್ಚನೆಯ ಹಾಸಿಗೆ ಬೇಕು, ಬಟ್ಟೆ ಬೇಕು ಅದು ಬೇಕು ಇದು ಬೇಕು ಎಂದೆಲ್ಲ ಬೇಡಿಕೆ ಇಟ್ಟು ನ್ಯಾಯಾಲಯದಲ್ಲಿ ಬೇಡಿಕೆ ಇಟ್ಟಿದ್ದನು. ಇದೀಗ ಇವೆಲ್ಲ ಜನರ ಕಣ್ಣಿಗೆ ಮಣ್ಣೆರಚಲು, ನ್ಯಾಯಾಲಯಕ್ಕೆ ಮಣ್ಣೆರಚಲು ತೋರಿಕೆಯ ಅರ್ಜಿಯೇ ಎಂದು ಪ್ರಶ್ನೆ ಹುಟ್ಟಿಕೊಂಡಿದೆ. ಜೈಲಲ್ಲಿ ದರ್ಶನ್‌ ಗೆ ರಾಜಾತಿಥ್ಯವೇ ಸಿಗುತ್ತಿದೆ ಎಂಬುದು ಸ್ಪಷ್ಟವಾಗಿ ಮೇಲ್ಮೋಟಕ್ಕೆ ಕಾಣುತ್ತಿದೆ.

ಇದಕ್ಕೆ ಕಾರಣ ಜೈಲಿನಲ್ಲಿರುವ ಕುಖ್ಯಾತ ರೌಡಿ ವಿಲ್ಸನ್ ಗಾರ್ಡನ್ ಜೊತೆಗೆ ಚಯರ್‌ ನಲ್ಲಿ ಕುಳಿತು, ಟಿಪಾಯಿ ಹಾಕಿ, ಮನೆಯಲ್ಲೇ ಇರುವಂತೆ   ಆರಾಮವಾಗಿ ಸಿಗರೇಟ್‌ ಸೇದುತ್ತಾ ಟೀ ಕುಡಿಯುತ್ತಾ ದರ್ಶನ್‌ ತನ್ನ  ಮ್ಯಾನೇಜರ್‌ ನಾಗರಾಜ್‌ (11 ನೇ ಆರೋಪಿ) ಮತ್ತೋರ್ವ ರೌಡಿ ಕುಳ್ಳ ಸೀನನ ಜೊತೆಗೆ ಕುಳಿತು ನಗುತ್ತಾ ಹರಟೆ ಹೊಡೆಯುತ್ತಿರುವ   ಪೋಟೋವೇ ಹಲವು ಸಾಕ್ಷಿ ಹೇಳುತ್ತಿದೆ.

Tap to resize

Latest Videos

ರೌಡಿ ವಿಲ್ಸನ್‌ ಗಾರ್ಡನ್ ನಾಗನ ಜತೆ ಜೈಲಲ್ಲಿ ದರ್ಶನ್‌ ಸಿಗರೇಟ್‌ ಸೇದುವ ಫೋಟೋ ವೈರಲ್!

ಅಷ್ಟಕ್ಕೂ ಈ ಫೋಟೋ ಹೊರಬಂದಿರುವುದು ಹೇಗೆ ಗೊತ್ತಾ? ಓರ್ವ ಖೈದಿಯಿಂದ, ಆತನೂ ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರದಲ್ಲಿದ್ದು,  ವೇಲು ಅನ್ನುವ ಖೈದಿ ಈ ಫೋಟೋವನ್ನು  ತೆಗೆದಿದ್ದಾನೆ. ಬಳಿಕ ತನ್ನ ಮೊಬೈಲ್‌ ನಿಂದ ಹೆಂಡತಿಗೆ ಕಳುಹಿಸಿದ್ದಾನೆ. ಅಲ್ಲಿಂದ ಇದು ವೈರಲ್‌ ಆಗಿದೆ. ಇಲ್ಲಿ ಮೂಡಿರುವ ಪ್ರಶ್ನೆ ಕೈದಿಯಾಗಿರುವ ವೇಲುಗೆ ಮೊಬೈಲ್ ಕೊಟ್ಟಿದ್ಯಾರು? ಇಂಟರ್‌ ನೆಟ್‌ ಸಿಕ್ಕಿರುವುದು ಹೇಗೆ? ಈ ವೇಲು ಯಾವ ಕೇಸ್‌ ನಲ್ಲಿ ಒಳಗಿದ್ದಾನೆ ಎಂಬುದು ಇನ್ನೂ ತಿಳಿದುಬಂದಿಲ್ಲ. ಆದರೆ ಈ ಫೋಟೋ ಲೀಕ್ ಬಳಿಕ ಜೈಲಾಧಿಕಾರಿಗಳಿಗೆ ಕೆಲಸಕ್ಕೆ ಕುತ್ತು ಬರುವ ಭಯ, ಆತಂಕ ಶುರುವಾಗಿರುವುದು ಸುಳ್ಳಲ್ಲ.

ಇನ್ನು ಕೊಲೆ ಆರೋಪಿ ದರ್ಶನ್​ಗೆ ಜೈಲಲ್ಲಿ ಅನುಕೂಲಕರ ವ್ಯವಸ್ಥೆ ಇದೆ. ವಿಐಪಿ ದರ್ಶನ್ ಗೆ ಮಾತ್ರವಲ್ಲ ಕುಖ್ಯಾತ ರೌಡಿ ವಿಲ್ಸನ್ ಗಾರ್ಡನ್ ನಾಗನಿಗೂ ಆರಾಮ ವ್ಯವಸ್ಥೆ ಇದೆ ಎನ್ನುವುದು ಈ ಫೋಟೋದಿಂದ ಸ್ಪಷ್ಟ. ದರ್ಶನ್ ಮತ್ತು ವಿಲ್ಸನ್‌ ನಾಗ ಚಯರ್, ಟೇಬಲ್‌ ಹಾಕಿ ಹರಟೆ ಹೊಡೆಯುತ್ತಿರುವ ಜಾಗ ಜೈಲಲ್ಲಿರುವ ವಿಡಿಯೋ ಕಾನ್ಫರೆನ್ಸ್ ಹಾಲ್​ನ ಹಿಂಭಾಗದ ಸ್ಥಳ ಎನ್ನಲಾಗಿದೆ. ಜೈಲಿನ ಗೋಡೆ ಫೋಟೋದಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ. ಇದು ವಿಲ್ಸನ್ ಗಾರ್ಡನ್ ನಾಗನ ಸೆಲ್ ಮುಂಬಾಗದ ಜಾಗ ಎನ್ನಲಾಗಿದೆ. ಹೀಗಾಗಿ ಜೈಲಲ್ಲಿ ದರ್ಶನ್‌ ಗೆ ನಾಗನ ಸಾಥ್ ಸಿಕ್ಕಿದ್ಯಾ ಎಂಬ ಪ್ರಶ್ನೆ ಮೂಡಿದೆ.

ಪವಿತ್ರಾ ಸಹವಾಸ ಬಿಟ್ಟರೆ ಮಾತ್ರ ಸಪೋರ್ಟ್ ಎಂದ ಫ್ರೆಂಡ್ಸ್, ಸಂಧಾನಕ್ಕೆ ದರ್ಶನ್ ಒಪ್ಪಿದ್ರಾ?

ದರ್ಶನ್ ಜೈಲಿಗೆ ಹೋದ ಒಂದು ವಾರದೊಳಗೆ ಏಷ್ಯಾನೆಟ್‌ ಸುವರ್ಣನ್ಯೂಸ್‌ ಸುದ್ದಿಯೊಂದನ್ನು ಬ್ರೇಕ್ ಮಾಡಿತ್ತು. ದರ್ಶನ್  ವಿಲ್ಸನ್ ಗಾರ್ಡನ್ ನಾಗನನ್ನು ಭೇಟಿಯಾಗಲು ಜೈಲಾಧಿಕಾರಿಗಳ ಬೆನ್ನುಬಿದ್ದಿದ್ದ ಎಂಬುದು. ಈ ವಿಚಾರ ಪ್ರಸ್ತುತ ಲಿಂಕ್ ಆಗುತ್ತಿದೆ. ವಿಲ್ಸನ್‌ ಗಾರ್ಡನ್‌ ನಾಗನಿಗೆ ಸಿಗುತ್ತಿರುವ ಸೌಲಭ್ಯಗಳನ್ನು ತನಗೂ ಕೊಡುವಂತೆ ಬೇಡಿ ದರ್ಶನ್ ಶೇರ್ ಮಾಡಿಕೊಂಡಿರುವಂತೆ ಕಾಣುತ್ತಿದೆ.  ನಾಗನಿಂದಲೇ ದರ್ಶನ್‌ ಗೆ ಎಲ್ಲಾ ಸೌಲಭ್ಯಗಳು ಲಭ್ಯವಾಗುತ್ತಿದೆ ಎನ್ನಲಾಗುತ್ತಿದೆ. ಅದಕ್ಕೋಸ್ಕರವೇ ದರ್ಶನ್‌ ನಾಗನ ಭೇಟಿಗೆ ಮುಂದಾಗಿದ್ದ ಎನ್ನುವ ಮಾಹಿತಿ ಲಭ್ಯವಾಗಿದೆ.

ಪ್ರತೀ ದಿನ  ನಾಗ ಮತ್ತು ದರ್ಶನ್‌ ಈ ಜಾಗದಲ್ಲಿ ಸೇರುತ್ತಿದ್ದು, ಹರಟೆ ಹೊಡೆದು ನಾಗನಿಗೆ ಬಂದಿರುವ ವಸ್ತುಗಳು ದರ್ಶನ್ ಗೆ ಶೇರ್‌ ಆಗುತ್ತಿದೆ ಎನ್ನುವುದು ಲಭ್ಯವಾಗಿರುವ ಮಾಹಿತಿ. ಹಣಬಲ ಇದ್ದರೆ ಮದ್ಯ, ಸಿಗರೇಟ್‌ , ಗಾಂಜಾ ಏನು ಬೇಕಾದರೂ ಜೈಲಿನಲ್ಲಿ ಸಿಗುತ್ತೆ ಎನ್ನುವ ಮಾಹಿತಿ ಇತ್ತು. ಇದಕ್ಕೆ ಪುಷ್ಟಿ ನೀಡುವ ಫೋಟೋ ಇದಾಗಿದೆ. 

ಓರ್ವ ಸಿನೆಮಾ ಸ್ಟಾರ್ ತನ್ನನ್ನು ಭೇಟಿಯಾಗುತ್ತಿದ್ದಾನೆ ಎಂದಾಗ ರೌಡಿ ಮಾತ್ರವಲ್ಲ ಯಾರೇ ಜನ ಸಾಮಾನ್ಯರಾದ್ರೂ ಬಹಳ ಉತ್ಸಾಹದಿಂದ ಸ್ಟಾರ್‌ ಜೊತೆಗೆ ಸೇರುತ್ತಾರೆ. ದರ್ಶನ್‌ ಇದನ್ನೇ ಇಲ್ಲಿ ಬಂಡವಾಳ ಮಾಡಿಕೊಂಡಿದ್ದಾನೆ. ಈಗ ಪ್ರಶ್ನೆ ಅದಲ್ಲ, ತಪ್ಪು ಮಾಡಿದವನನ್ನು ಜೈಲಿಗೆ ಹಾಕುವುದು ಆತನ ಹಕ್ಕುಗಳನ್ನು ಮೊಟಕುಗೊಳಿಸಿ, ಮನ ಪರಿವರ್ತನೆಯಾಗಲಿ, ತಪ್ಪಿನ ಅರಿವಾಗಲಿ ಎಂಬ ಕಾರಣಕ್ಕೆ. ಆದರೆ ಜೈಲಿನಲ್ಲಿ ಇಂತಹ ಐಶಾರಾಮಿ ಜೀವನ ಸಿಗುತ್ತೆ ಎಂಬುದಾದರೆ ಜೈಲು ಯಾಕೆ ಬೇಕು? ಕಾನೂನು ಎಲ್ಲಿದೆ? ಎಂಬುದು ಬಹು ಚರ್ಚಿತ ವಿಚಾರ. ಸರ್ಕಾರ ಆಗಲಿ, ಹೈಕೋರ್ಟ್ ಆಗಲಿ ಅವ್ಯವಸ್ಥೆಯ ಬಗ್ಗೆ ಜೈಲಾಧಿಕಾರಿಗಳಿಗೆ ಆಗಾಗ ಚಾಟಿ ಬೀಸುತ್ತಲೇ ಇದೆ.  ಜೈಲಿನ ಅವ್ಯವಸ್ಥೆಯಲ್ಲಿ ಜೈಲಾಧಿಕಾರಿಗಳ ಪಾತ್ರವೆಷ್ಟಿದೆ ಎಂಬುದು ಈಗ ಸದ್ಯದ ಪ್ರಶ್ನೆಯಾಗಿದೆ.

13 ವರ್ಷಗಳ ನಂತರ ಮತ್ತೆ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ದರ್ಶನ್‌ಗೆ ಅತಿಥ್ಯ ನೀಡಲು ರೌಡಿಗಳ ಪಡೆ ನಾ ಮುಂದು ತಾ ಮುಂದು ಎಂದು ಬಂದಿದೆ ಎಂದು ಕಳೆದ ಜೂನ್‌ ನಲ್ಲಿ ಸುದ್ದಿಯಾಗಿತ್ತು. ಈ ವಿಚಾರವನ್ನು ಕೂಡ ಸುವರ್ಣನ್ಯೂಸ್‌ ಬ್ರೇಕ್ ಮಾಡಿತ್ತು. ಕುಖ್ಯಾತ ವಿಲ್ಸನ್ ಗಾರ್ಡನ್ ನಾಗ ಹಾಗೂ ಸೈಕಲ್ ರವಿ ಕಡೆಯಿಂದ ದರ್ಶನ್ ನೋಡಿಕೊಳ್ಳಲು ಪೈಪೋಟಿ ಇತ್ತು. 2011ರಲ್ಲಿ ದರ್ಶನ್ ಜೈಲಲ್ಲಿದ್ದಾಗ ಸೈಕಲ್ ರವಿ ಅತಿಥ್ಯ ನೀಡಿದ್ದ ಎನ್ನಲಾಗಿದೆ.  ಸೈಕಲ್ ರವಿ ಈಗ ಹೊರಗಡೆ ಇದ್ದಾನೆ.

click me!