ಕಳ್ಳರು ಬೀಗ ಹಾಕಿದ ಮನೆಗಳಲ್ಲೇ ಟಾರ್ಗೆಟ್ ಮಾಡಿಕೊಂಡಿದ್ದು, ರಾತ್ರಿ ವೇಳೆ ಎಲ್ಲರೂ ಮಲಗಿದ ಮೇಲೆ ತಡರಾತ್ರಿ ವೇಳೆ ಮನೆಗಳ ಬೀಗ ಒಡೆದು ತಮ್ಮ ಕಾರ್ಯ ಸಾಧಿಸಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಸುತ್ತಮುತ್ತಲ ಪ್ರದೇಶಗಳಲ್ಲಿ ಸಾರ್ವಜನಿಕರು ಮನೆಗೆ ಬೀಗ ಹಾಕಿ ಎಲ್ಲೂ ತೆರಳದ ಪರಿಸ್ಥಿತಿ ಎದುರಾಗಿದೆ.
ರಬಕವಿ-ಬನಹಟ್ಟಿ(ಜು.18): ರಬಕವಿ-ಬನಹಟ್ಟಿ ಮತ್ತು ಬೀಳಗಿ ಸೇರಿದಂತೆ ವಿವಿಧೆಡೆ ಈಗ ಮನೆಗಳ ಸರಣಿ ಕಳ್ಳತನ ಪ್ರಕರಣಗಳು ಹೆಚ್ಚುತ್ತಿವೆ. ಬೀಗ ಹಾಕಿದ ಮನೆಗಳಲ್ಲಿ ರಾತ್ರಿ ಹೊತ್ತು ಕಳ್ಳರು ಕೈಚಳಕ ತೋರಿ ನಗದು, ಚಿನ್ನಾಭರಣ ದೋಚಿ ಪರಾರಿಯಾಗುತ್ತಿದ್ದಾರೆ.
ಕಳ್ಳರು ಬೀಗ ಹಾಕಿದ ಮನೆಗಳಲ್ಲೇ ಟಾರ್ಗೆಟ್ ಮಾಡಿಕೊಂಡಿದ್ದು, ರಾತ್ರಿ ವೇಳೆ ಎಲ್ಲರೂ ಮಲಗಿದ ಮೇಲೆ ತಡರಾತ್ರಿ ವೇಳೆ ಮನೆಗಳ ಬೀಗ ಒಡೆದು ತಮ್ಮ ಕಾರ್ಯ ಸಾಧಿಸಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಸುತ್ತಮುತ್ತಲ ಪ್ರದೇಶಗಳಲ್ಲಿ ಸಾರ್ವಜನಿಕರು ಮನೆಗೆ ಬೀಗ ಹಾಕಿ ಎಲ್ಲೂ ತೆರಳದ ಪರಿಸ್ಥಿತಿ ಎದುರಾಗಿದೆ.
undefined
ಗಂಡನ ಪೂಜೆ ಮಾಡುವ ಭೀಮನ ಅಮವಾಸ್ಯೆಯಂದೇ ಪತಿ ಹತ್ಯೆ!
ಮನೆಗಳ ಸರಣಿ ಕಳ್ಳತನ ಪ್ರಕರಣ ಜನರನ್ನು ಬೆಚ್ಚಿ ಬೀಳಿಸಿದ್ದು, ಪೊಲೀಸರಿಗೂ ತಲೆನೋವಾಗಿ ಪರಿಣಮಿಸಿದೆ. ಹೀಗಾಗಿ ನಾಗರಿಕರು ಮನೆಗೆ ಬೀಗ ಹಾಕಿ ಪರಸ್ಥಳಗಳಿಗೆ ತೆರಳುವಾಗ ಸಮೀಪದ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡಿ ಹೋಗಿ ಎಂದು ಪೊಲೀಸರು ಮನವಿ ಮಾಡುತ್ತಿದ್ದಾರೆ.
ಜು.13ರಂದು ರಾತ್ರಿ ರಬಕವಿಯ ವಿದ್ಯಾನಗರ ಬಡಾವಣೆಯ ವಿವಿಧೆಡೆ ಕಳ್ಳರು ಸರಣಿಗಳ್ಳತನ ನಡೆಸಿ ಪರಾರಿಯಾಗಿದ್ದಾರೆ. ಒಂದೇ ದಿನ ಸುಮಾರು ಏಳೆಂಟು ಮನೆಗಳಲ್ಲಿ ಕಳ್ಳತನ ನಡೆಸಿರುವ ಬಗ್ಗೆ ವರದಿಯಾಗಿದೆ. ಕಳ್ಳರು ನಗದು, ಬಂಗಾರ ಒಡವೆ ದೋಚಿ ಪರಾರಿಯಾಗಿದ್ದಾರೆ. ವಿದ್ಯಾನಗರದ 8ನೇ ಕ್ರಾಸ್‌ನಲ್ಲಿನ ಚನ್ನಪ್ಪ ಮುಂಡಗನೂರ ಹಾಗೂ ಚಿದಾನಂದ ಉಪ್ಪಾರ ಎಂಬುವರು ಪೊಲೀಸ್ ಠಾಣೆಗೆ ದೂರು ನೀಡಿದ್ದು, . 50 ಸಾವಿರ ನಗದು ಹಾಗೂ 7.5 ಗ್ರಾಂ. ಬಂಗಾರ ಕಳ್ಳತನವಾಗಿದೆ ಎಂದು ದೂರು ದಾಖಲಿಸಿದ್ದಾರೆ. ಜು.13ರ ಗುರುವಾರ ರಾತ್ರಿ 10 ಗಂಟೆ ಬಳಿಕ ನಡೆದಿದ್ದು, ಇದೀಗ ತಡವಾಗಿ ಬೆಳಕಿಗೆ ಬಂದಿದೆ. ಇಬ್ಬರು ಯುವಕರು ಸರಣಿ ಕಳ್ಳತನ ನಡೆಸಿರಬಹುದು ಎಂದು ಸ್ಥಳೀಯರು ಶಂಕಿಸಿದ್ದಾರೆ.
ಕೀಲಿ ಹಾಕಿದ ಮನೆಗಳೇ ಟಾರ್ಗೆಟ್:
ವಿದ್ಯಾನಗರ ಬಡಾವಣೆ ಸ್ಥಿತಿವಂತರೇ ಹೆಚ್ಚು ವಾಸಿಸುವ ಪ್ರದೇಶವಾಗಿದ್ದು, ಹೆಚ್ಚಿನ ಕುಟುಂಬಗಳು ರಬಕವಿ ಊರಿನೊಳಗೂ ನೆಲೆಸಿವೆ. ಈ ಭಾಗದಲ್ಲಿ ಹೆಚ್ಚಿನ ಮನೆಗಳು ಕೀಲಿ ಹಾಕಿರುತ್ತವೆ. ಹಗಲು ಹೊತ್ತು ಸಂಚರಿಸಿ ಬೀಗ ಹಾಕಿದ ಮನೆಗಳು ಮತ್ತು ಸುಮುತ್ತಲ ವಾತಾವರಣವನ್ನು ಗಮನಿಸುವ ಕಳ್ಳರು ರಾತ್ರಿ ವೇಳೆ ಕಳ್ಳತನಕ್ಕೆ ಇಳಿಯುತ್ತಿದ್ದಾರೆ. ಮಧ್ಯರಾತ್ರಿ, ನಸುಕಿನ ಜಾವ ಕೈ ಚಳಕ ತೋರುತ್ತಿದ್ದಾರೆ.
ಇನ್ನೂ ಕೆಲ ಮನೆಗಳ ಮಾಲೀಕರು ಊರಲ್ಲಿ ಇಲ್ಲ. ಹೀಗಾಗಿ ಎಷ್ಟುಮನೆಗಳಲ್ಲಿ ಕಳ್ಳತನವಾಗಿದೆ ಎಂಬುದರ ಬಗ್ಗೆ ಇನ್ನೂ ಖಚಿತ ಮಾಹಿತಿ ಲಭ್ಯವಾಗಿಲ್ಲ. ವಿಷಯ ತಿಳಿದು ತೇರದಾಳ ಪಿಎಸ್‌ಐ ಅಪ್ಪಣ್ಣ ಐಗಳಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಶ್ವಾನದಳ ಮತ್ತು ಬೆರಳಚ್ಚು ತಜ್ಞರನ್ನು ಕರೆಸಿ ತಪಾಸಣೆ ನಡೆಸಿದರು. ಕಳ್ಳರ ಪತ್ತೆಗಾಗಿ ಪ್ರತ್ಯೇಕ ತಂಡ ರಚಿಸಲಾಗಿದೆ ಎಂದು ತಿಳಿಸಿದರು. ಸಂಶಯಾಸ್ಪದ ವ್ಯಕ್ತಿಗಳು ಕಂಡು ಬಂದರೆ ಕೂಡಲೇ ಪೊಲೀಸ್ ಠಾಣೆಗೆ ತಿಳಿಸುವಂತೆ ಪೊಲೀಸ್ ಅಧಿಕಾರಿಗಳು ಸಾರ್ವಜನಿಕರಲ್ಲಿ ಕೋರಿದ್ದಾರೆ.
Belagavi Crime: 6ನೇ ತರಗತಿಯಿಂದಲೇ ಲವ್, ಪ್ರಿಯಕರನ ಜತೆ ಸೇರಿ ಭೀಮನ ಅಮವಾಸ್ಯೆ ದಿನ ಗಂಡನ ಕೊಂದ ಪತ್ನಿ!
ರಾತ್ರಿ ಪೊಲೀಸ್ ಗಸ್ತು ಇರಲಿ
ರಬಕವಿ-ಬನಹಟ್ಟಿ, ಬೀಳಗಿ ಸೇರಿದಂತೆ ವಿವಿಧೆಡೆ ಬೀಗ ಹಾಕಿದ ಮನೆಗಳಲ್ಲಿ ಸರಣಿ ಕಳ್ಳತನ ಪ್ರಕರಣ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ರಾತ್ರಿ ಹೊತ್ತು ಭದ್ರತಾ ವ್ಯವಸ್ಥೆ ಬಿಗಿಪಡಿಸಬೇಕಿದೆ. ಸಿಬ್ಬಂದಿಯನ್ನು ರಾತ್ರಿ ಗಸ್ತು ತಿರುಗಲು ನೇಮಿಸಬೇಕು. ಅನುಮಾನ ಬಂದವರ ವಿಚಾರಣೆ ನಡೆಸಿ ಕಳ್ಳತನ ಕೃತ್ಯಗಳಿಗೆ ಕಡಿವಾಣ ಹಾಕಬೇಕು. ಕೆಲ ಪ್ರಮುಖ ಕಡೆ ಸಿಸಿ ಕ್ಯಾಮೆರಾ ಅಳವಡಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ ಸಾರ್ವಜನಿಕರು.
ಇಂಥದ್ದೇ ಪ್ರಕರಣ ಬೀಳಗಿಯಲ್ಲಿಯೂ ನಡೆದಿದೆ. ಜಂಟಿ ಕಾರ್ಯಾಚರಣೆ ನಡೆಸುತ್ತಿದ್ದು, ಆರೋಪಿಗಳ ಸುಳಿವು ದೊರೆತಿದೆ. ಶೀಘ್ರವೇ ಬಂಧಿಸಲಾಗುವುದು. ಸಾರ್ವಜನಿಕರು ಊರಿಗೆ ತೆರಳುವಾಗ ಪೊಲೀಸ್ ಠಾಣೆ ಗಮನಕ್ಕೆ ತನ್ನಿ. ಗಲ್ಲಿ ಅಥವಾ ಮನೆ ಮುಂದೆ ಸಿಸಿ ಕ್ಯಾಮೆರಾ ಅಳವಡಿಕೆ ಮಾಡಿಕೊಂಡರೆ ಸೂಕ್ತ ಅಂತ ಸಿಪಿಐ ಈರಯ್ಯಾ ಮಠಪತಿ ತಿಳಿಸಿದ್ದಾರೆ.