ಆಸ್ಪತ್ರೆಗೆ ಹೋದ ಯುವತಿಗೆ ಇಂಜೆಕ್ಷನ್ ನೀಡೋ ನೆಪದಲ್ಲಿ ಖಾಸಗಿ ಅಂಗ ಸ್ಪರ್ಶಿಸಿದ ಶುಶ್ರೂಷಕ

Published : Oct 18, 2020, 03:51 PM ISTUpdated : Oct 21, 2020, 02:04 PM IST
ಆಸ್ಪತ್ರೆಗೆ ಹೋದ ಯುವತಿಗೆ ಇಂಜೆಕ್ಷನ್ ನೀಡೋ ನೆಪದಲ್ಲಿ ಖಾಸಗಿ ಅಂಗ ಸ್ಪರ್ಶಿಸಿದ ಶುಶ್ರೂಷಕ

ಸಾರಾಂಶ

ಕೊರೋನಾ ಕಾಲದಲ್ಲಿ ವೈದ್ಯರನ್ನ ವೈದ್ಯಕೀಯ ಸಿಬ್ಬಂದಿಯನ್ನ ಕೊರೋನಾ ವಾರಿಯರ್ ಅಂತ ಸನ್ಮಾನಿಸುತ್ತಿದ್ದೇವೆ. ಆದ್ರೆ, ವಾರಿಯರ್ಸ್‌ ನಡುವೆ ಇದ್ದಾನೆ ಒಬ್ಬ ಕಾಮುಕ‌ ಶುಶ್ರೂಷಕ. ನೈಟ್  ಟೈಮ್ ನಲ್ಲಿ ಟೈಟ್ ಆಗೋ ಈ ಮೇಲ್‌ ಶುಶ್ರೂಷಕ ಕೈಗೆ ಹೆಣ್ಣುಮಕ್ಳು ಸಿಕ್ರೆ ಅಷ್ಟೇ. 

ಬೆಂಗಳೂರು, (ಅ.18): ನಗರದ ಪ್ರತಿಷ್ಠಿತ ನರ್ಸಿಂಗ್​ ಹೋಂ ಒಂದರ ಶುಶ್ರೂಷಕ, ಚಿಕಿತ್ಸೆಗೆ ಹೋದ ಯುವತಿ ಜೊತೆ ಅನುಚಿತ ವರ್ತನೆ ಮಾಡಿ ಸಿಕ್ಕಿಬಿದ್ದಿದ್ದಾನೆ.

"

ವಿಪರೀತ ಕಾಲು ನೋವು ಎಂದು ಮಧ್ಯರಾತ್ರಿಯಲ್ಲಿ ಯುವತಿಯೋರ್ವಳು ಕನಕಪುರ ರಸ್ತೆಯಲ್ಲಿ ಕ್ಯೂರ್​ ಆಸ್ಪತ್ರೆಗೆ ತೆರಳಿದ್ದರು. ಆಗ ಡ್ಯೂಟಿ ಡಾಕ್ಟರ್​ ಇರದ ಕಾರಣ ಐಸಿಯುನಲ್ಲಿ ಚಿಕಿತ್ಸೆ ನೀಡಲಾಯಿತು. 

ಟ್ಯೂಷನ್ ಕ್ಲಾಸ್; 14  ವರ್ಷವಿದ್ದಾಗ ನಡೆದ ದೌರ್ಜನ್ಯಕ್ಕೆ  36 ಆದಾಗ ದೂರು ಕೊಟ್ಟಳು!

ಬಳಿಕ ಯುವತಿಗೆ ಇಂಜೆಕ್ಷನ್​ ನೀಡುವಂತೆ ಐಸಿಯು ವೈದ್ಯ ಈ ಕಾಮುಕ ಶುಶ್ರೂಷಕನಿಗೆ ಹೇಳಿದ್ದ. ಆದರೆ ರಾಮಕೃಷ್ಣ ಇಂಜೆಕ್ಷನ್​ ನೀಡುವಾಗ ಯುವತಿಯ ಖಾಸಗಿ ಅಂಗ ಸ್ಪರ್ಶಿಸಿ, ವಿಕೃತಿ ಮೆರೆದಿದ್ದಾನೆ.

ಯುವತಿ ಇದನ್ನು ವಿರೋಧಿಸಿ, ಆಸ್ಪತ್ರೆಯವರ ಬಳಿ ಪ್ರಶ್ನೆ ಮಾಡಿದಾರೆ ಅವರೇನೂ ಪ್ರತಿಕ್ರಿಯೆ ನೀಡಲಿಲ್ಲ. ಇದೀಗ ಆಕೆ ಸುಬ್ರಹ್ಮಣ್ಯಪುರ ಠಾಣೆಯಲ್ಲಿ ದೂರು ನೀಡಿದ್ದಾರೆ.

ಆಸ್ಪತ್ರೆ ನಂಬಿ ರೋಗಿಗಳು ಬರ್ತಾರೆ. ನನಗಾದ ಸ್ಥಿತಿ ಯಾರಿಗೂ ಬರಬಾರದು. ಆಸ್ಪತ್ರೆಯವರಿಗೆ ಮತ್ತು ಆ ಕಾಮುಕನಿಗೆ ಶಿಕ್ಷೆಯಾಗಬೇಕು ಎಂದು ಯುವತಿ ಆಗ್ರಹಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು
ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ