ಮತದಾನ ಮಾಡಿ ಬೈಕ್‌ನಲ್ಲಿ ಮನೆಗೆ ಮರಳುವಾಗ ಭೀಕರ ರಸ್ತೆ ಅಪಘಾತವಾಗಿ ಬಿಎಸ್‌ಸಿ ನರ್ಸಿಂಗ್ ವಿದ್ಯಾರ್ಥಿನಿಯೊಬ್ಬಳು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ದುರಂತ ಘಟನೆ ರಾಯಚೂರಿನಲ್ಲಿ ನಡೆದಿದೆ.
ರಾಯಚೂರು (ಮೇ.16): ಮೇ.10ರಂದು ಮತದಾನ ಮಾಡಿ ಬೈಕ್‌ನಲ್ಲಿ ಮನೆಗೆ ಮರಳುವಾಗ ಭೀಕರ ರಸ್ತೆ ಅಪಘಾತವಾಗಿ ವಿದ್ಯಾರ್ಥಿನಿಯೊಬ್ಬಳು ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ರಾಯಚೂರಿನ ಲಿಂಗಸುಗೂರಿನ ಮುದಗಲ್ ಬಳಿ ಈ ಘಟನೆ ನಡೆದಿದ್ದು, 20 ವರ್ಷದ ಸನಾ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿದ್ದಾಳೆ.
ವಿದ್ಯಾರ್ಥಿನಿ ಸನಾ ಮೊದಲ ಬಾರಿಗೆ ಮತದಾನ ಮಾಡಲು ಧಾರವಾಡದಿಂದ ಹಟ್ಟಿಗೆ ಬಂದಿದ್ದಳು. ಮತದಾನ ಮಾಡಿ ಮುದಗಲ್‌ನಿಂದ ಹಟ್ಟಿಗೆ ಮರಳುವಾಗ ಬೈಕ್ ಕಾರು ನಡುವೆ ಭೀಕರ ಅಪಘಾತ ಸಂಭವಿಸಿ ಈ ದುರಂತ ನಡೆದಿದೆ. ವಿದ್ಯಾರ್ಥಿನಿ ಸನಾ ಧಾರವಾಡದಲ್ಲಿ ಬಿಎಸ್‌ಸಿ ನರ್ಸಿಂಗ್ ಓದುತ್ತಿದ್ದಾಳೆ. ಅಫಘಾತದ ಪರಿಣಾಮ ವಿದ್ಯಾರ್ಥಿನಿಯ ಕೈ, ಕಾಲು ಮುರಿದಿದೆ ಜೊತೆಗೆ ಕಿಡ್ನಿ ಭಾಗದಲ್ಲಿ ಗಂಭೀರಗಾಯವಾಗಿದೆ.
undefined
ಮದುವೆಗೆ ಒಪ್ಪದ ಹೆಣ್ಣಿನ ತಲೆ ಬೋಳಿಸಿ ಚಪ್ಪಲಿ ಹಾರ ಹಾಕಿ ಮೆರವಣಿಗೆ ನಡೆಸಿದ ಜನ
ವಿದ್ಯಾರ್ಥಿನಿಯನ್ನು ಧಾರವಾಡದ ಖಾಸಗಿ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ. ವಿದ್ಯಾರ್ಥಿನಿಯ ಪೋಷಕರು ಬಡವರಾಗಿದ್ದು, ಮಗಳ ಚಿಕಿತ್ಸೆಗೆ ಪರದಾಡುತ್ತಿದ್ದಾರೆ. ಮನೆಗೆ ಆಧಾರವಾಗಬೇಕಿದ್ದ ಮಗಳ ಚಿಕಿತ್ಸಾ ವೆಚ್ಚ ಭರಿಸಲಾಗದೆ ಪೊಷಕರು ಕಂಗಾಲಾಗಿದ್ದಾರೆ.
ಎರಡು ಬೈಕ್‌ಗಳಿಗೆ ಡಿಕ್ಕಿ ಹೊಡೆದ ಕಾರು: ಮದುವೆ ತಯಾರಿಯಲ್ಲಿದ್ದ ಯುವಕರ ದುರ್ಮರಣ
ತಿರುಪತಿಯಿಂದ ವಾಪಸಾಗುತ್ತಿದ್ದ ವಾಹನ ಅಪಘಾತ: ಮಹಿಳೆ ಸಾವು
ಕಂಪ್ಲಿ: ಕ್ರೂಸರ್-ಲಾರಿ ಮಧ್ಯೆ ನಡೆದ ಅಪಘಾತದಲ್ಲಿ ಇಲ್ಲಿನ ಮಹಿಳೆಯೊಬ್ಬರು ಮೃತಪಟ್ಟಘಟನೆ ಆಂಧ್ರಪ್ರದೇಶದ ವೈಎಸ್‌ಆರ್ ಜಿಲ್ಲೆಯ ಕೊಂಡಾಪುರ ಮಂಡಲದ ಏಟೂರು ಬಳಿ ಸೋಮವಾರ ಬೆಳಿಗ್ಗೆ ಸಂಭವಿಸಿದೆ. ಮಹಿಳೆ ತಿರುಪತಿಯಿಂದ ವಾಪಸಾಗುತ್ತಿದ್ದರು ಎನ್ನಲಾಗಿದೆ.
ಇಲ್ಲಿಯ ಗುತ್ತಿಗೆದಾರ ಜಿ.ಭಾಸ್ಕರರೆಡ್ಡಿ ಪತ್ನಿ ಲಕ್ಷ್ಮೇದೇವಿ (40) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಪುತ್ರಿಯರಾದ ಮೇಘನಾ ರೆಡ್ಡಿ (19), ಶಿಲ್ಪಾ ರೆಡ್ಡಿ (17) ಗಂಭೀರವಾಗಿ ಗಾಯಗೊಂಡಿದ್ದಾರೆ.
ಕ್ರೂಸರ್ ತಿರುಪತಿಗೆ ತೆರಳಿತ್ತು. ದೇವರ ದರ್ಶನ ಪಡೆದು ವಾಪಸಾಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಘಟನೆಯಲ್ಲಿ ಮಹಿಳೆ ಮೃತಪಟ್ಟು, ಅವರ ಇಬ್ಬರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಇವರು ಅನಂತಪುರದ ಕೀಮ್ಸ್ ಸವೇರಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತಳ ಅಂತ್ಯಕ್ರಿಯೆ ವೈಎಸ್‌ಆರ್ ಜಿಲ್ಲೆಯ ಜಮ್ಮಲಮಡುಗು ಪಟ್ಟಣದಲ್ಲಿ ಜರುಗಿದೆ. ರಸ್ತೆ ಅಪಘಾತ ವಿಷಯ ತಿಳಿದು ಗುತ್ತಿಗೆದಾರ ಜಿ.ಭಾಸ್ಕರರೆಡ್ಡಿ ಘಟನಾ ಸ್ಥಳಕ್ಕೆ ತೆರಳಲು ಬೈಕ್‌ನಲ್ಲಿ ಸಾಗಿದ್ದಾಗ ಬಳ್ಳಾರಿ ಬಳಿಯ ಶ್ರೀನಿವಾಸ್ ಕ್ಯಾಂಪ್ ಹೊರವಲಯದಲ್ಲಿ ಆಯತಪ್ಪಿ ಬಿದ್ದು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.