ಕಾಲೇಜಿಗೆ ಹಿಂದೂ ವಿದ್ಯಾರ್ಥಿ ತಿಲಕ ಇಟ್ಕೊಂಡು ಬಂದಿದ್ದಕ್ಕೆ ಆಕ್ಷೇಪ: ತಿಲಕ ಅಳಿಸಿ ಇಸ್ಲಾಂಗೆ ಮತಾಂತರವಾಗಲು ಬೆದರಿಕೆ

By Kannadaprabha News  |  First Published Jul 29, 2023, 6:59 AM IST

ಜುಲೈ 25ರಂದು ಅಲ್ವಾರ್‌ ಜಿಲ್ಲೆಯ ಚೋಮಾ ಗ್ರಾಮದ ಶುಭಂ ಎಂಬಾತ ಕಾಲೇಜಿಗೆ ಹೋಗುವಾಗ ಹಣೆಗೆ ತಿಲಕ ಇಟ್ಟುಕೊಂಡಿದ್ದ. ಇದಕ್ಕೆ ಕಾಲೇಜಿನ ಕೆಲ ಮುಸ್ಲಿಂ ವಿದ್ಯಾರ್ಥಿಗಳು ಆಕ್ಷೇಪ ವ್ಯಕ್ತಪಡಿಸಿ, ಅದನ್ನು ತೆಗೆಯುವಂತೆ ಬೆದರಿಕೆ ಹಾಕಿದ್ದರು


ಜೈಪುರ (ಜುಲೈ 29, 2023): ಹಣೆಗೆ ತಿಲಕ ಇಟ್ಟುಕೊಂಡು ಕಾಲೇಜಿಗೆ ಬಂದಿದ್ದ ವಿದ್ಯಾರ್ಥಿಯೊಬ್ಬನ ಮೇಲೆ ಮುಸ್ಲಿಂ ವಿದ್ಯಾರ್ಥಿಗಳ ಗುಂಪೊಂದು ಹಲ್ಲೆ ನಡೆಸಿ ತಿಲಕ ಅಳಿಸಿದ ಘಟನೆ ರಾಜಸ್ಥಾನದ ಅಲ್ವಾರ್‌ನಲ್ಲಿ ನಡೆದಿದೆ. ಅಲ್ಲದೆ ದಾಳಿಗೊಳಗಾದ ವಿದ್ಯಾರ್ಥಿಗೆ ಇಸ್ಲಾಂಗೆ ಮತಾಂತರ ಆಗುವಂತೆಯೂ ಬೆದರಿಕೆ ಹಾಕಲಾಗಿದೆ.

ಈ ಪ್ರಕರಣ ಎರಡು ಕೋಮುಗಳ ನಡುವೆ ಮಾರಾಮಾರಿಗೂ ಕಾರಣವಾಗಿದೆ. ಸದ್ಯ ಘಟನೆ ನಡೆದ ಚೋಮಾ ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ನೆಲೆಸಿದ್ದು, ಯಾವುದೇ ಅಹಿತಕರ ಘಟನೆ ತಡೆಯುವ ನಿಟ್ಟಿನಲ್ಲಿ ಗ್ರಾಮದಲ್ಲಿ ಹೆಚ್ಚಿನ ಸಂಖ್ಯೆಯ ಪೊಲೀಸರನ್ನು ನಿಯೋಜಿಸಿ ಬಿಗಿ ಬಂದೋಬಸ್ತ್‌ ಮಾಡಲಾಗಿದೆ.

Tap to resize

Latest Videos

ಇದನ್ನು ಓದಿ: ಹೆದ್ದಾರಿಯಲ್ಲಿ ಸಿಕ್ಕ ಸಿಕ್ಕ ಕಾರುಗಳ ಮೇಲೆ ಶೂಟ್‌ ಮಾಡಿದ ಬೆತ್ತಲೆ ಮಹಿಳೆ: ವಿಡಿಯೋ ವೈರಲ್‌

ಏನಾಯ್ತು?: ಜುಲೈ 25ರಂದು ಅಲ್ವಾರ್‌ ಜಿಲ್ಲೆಯ ಚೋಮಾ ಗ್ರಾಮದ ಶುಭಂ ಎಂಬಾತ ಕಾಲೇಜಿಗೆ ಹೋಗುವಾಗ ಹಣೆಗೆ ತಿಲಕ ಇಟ್ಟುಕೊಂಡಿದ್ದ. ಇದಕ್ಕೆ ಕಾಲೇಜಿನ ಒಂದು ಸಮುದಾಯದ (ಮುಸ್ಲಿಂ) ಕೆಲ ವಿದ್ಯಾರ್ಥಿಗಳು ಆಕ್ಷೇಪ ವ್ಯಕ್ತಪಡಿಸಿ, ಅದನ್ನು ತೆಗೆಯುವಂತೆ ಬೆದರಿಕೆ ಹಾಕಿದ್ದರು. ಈ ಹಿನ್ನೆಲೆಯಲ್ಲಿ ಮಾರನೇ ದಿನ ಇನ್ನಷ್ಟು ಹಿಂದೂ ವಿದ್ಯಾರ್ಥಿಗಳು ತಿಲಕ ಇಟ್ಟು ಶಾಲೆಗೆ ಬಂದಿದ್ದರು.

ಜುಲೈ 27ರಂದು ಶುಭಂ ಮತ್ತೆ ಶಾಲೆಗೆ ತಿಲಕ ಇಟ್ಟುಕೊಂಡು ಬಂದ ವೇಳೆ ಮತ್ತೆ ವಿದ್ಯಾರ್ಥಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆತ ಪ್ರಾಂಶುಪಾಲರಿಗೆ ದೂರು ನೀಡಲು ಮುಂದಾದ ವೇಳೆ ಆತನ ತಿಲಕ ಅಳಿಸಿದ ಮತ್ತೊಂದು ಕೋಮಿನ ವಿದ್ಯಾರ್ಥಿಗಳು ಆತನ ಮೇಲೆ ಹಲ್ಲೆ ನಡೆಸಿದ್ದೂ ಅಲ್ಲದೆ, ಇಸ್ಲಾಂ ಮತಾಂತರ ಆಗದೇ ಇದ್ದರೆ ಪರಿಸ್ಥಿತಿ ನೆಟ್ಟಗಿರದು ಎಂದು ಎಚ್ಚರಿಸಿದ್ದಾರೆ.

ಇದನ್ನೂ ಓದಿ; ಡೇಟಿಂಗ್ ಆ್ಯಪ್‌ನಲ್ಲಿ ಸ್ನೇಹ: ಮಹಿಳೆಗೆ ಮತ್ತು ಬರಿಸಿ ಗ್ಯಾಂಗ್‌ರೇಪ್‌; ಕೃತ್ಯ ಸೆರೆ ಹಿಡಿದ ಪಾಪಿಗಳು

ಈ ವಿಷಯ ಶುಭಂನ ಪೋಷಕರಿಗೆ ತಿಳಿದು ಅವರು ಶಾಲೆಗೆ ಆಗಮಿಸಿದ್ದಾರೆ. ಆಗ ವಿದ್ಯಾರ್ಥಿಯ ಪೋಷಕರಿಗೂ ಆ ಗುಂಪು ಮತಾಂತರ ಆಗುವಂತೆ ಬೆದರಿಕೆ ಹಾಕಿದೆ. ಈ ವಿಷಯ ಬಾಯಿಯಿಂದ ಬಾಯಿಗೆ ಹರಡಿ ಶಾಲೆಯ ಬಳಿ ಎರಡೂ ಸಮುದಾಯದ 500ಕ್ಕೂ ಹೆಚ್ಚು ಜನ ನೆರೆದು ಸಣ್ಣ ಪ್ರಮಾಣದಲ್ಲಿ ಮಾರಾಮಾರಿ ಸಂಭವಿಸಿದೆ. ಈ ವೇಳೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ. ಇದಾದ ಬಳಿಕ ಶುಭಂನ ಪೋಷಕರು ನೀಡಿದ ದೂರಿನ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತಿಲಕ ವಿವಾದವಾಗಿದ್ದು ಹೇಗೆ?
- ರಾಜಸ್ಥಾನದ ಅಲ್ವಾರ್‌ ಜಿಲ್ಲೆ ಸರ್ಕಾರಿ ಪಿಯು ಕಾಲೇಜಿಗೆ ತಿಲಕ ಇಟ್ಟುಕೊಂಡು ಬಂದ ವಿದ್ಯಾರ್ಥಿ
- ಇನ್ನೊಂದು ಧರ್ಮದ ವಿದ್ಯಾರ್ಥಿಗಳಿಂದ ಆಕ್ಷೇಪ, ಮತ್ತೆ ತಿಲಕ ಇಟ್ಟುಕೊಂಡು ಬರದಂತೆ ಸೂಚನೆ
- ಮರುದಿನ ಸಡ್ಡು ಹೊಡೆಯಲು ತಿಲಕ ಇಟ್ಟುಕೊಂಡು ಬಂದ ಇನ್ನಷ್ಟು ಹಿಂದೂ ವಿದ್ಯಾರ್ಥಿಗಳು
- ಮರುದಿನ ಮತ್ತೆ ತಿಲಕಕ್ಕೆ ಕೆಲವರ ಆಕ್ಷೇಪ: ಪ್ರಿನ್ಸಿಪಾಲ್‌ಗೆ ದೂರು ನೀಡಲು ಹೋದ ವಿದ್ಯಾರ್ಥಿ
- ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿ, ತಿಲಕ ಅಳಿಸಿಹಾಕಿ, ಮತಾಂತರ ಆಗುವಂತೆ ಬೆದರಿಸಿದ ಗುಂಪು
- ವಿಷಯ ತಿಳಿದು ಕಾಲೇಜಿಗೆ ಆಗಮಿಸಿದ ಎರಡೂ ಕೋಮಿನ 500ಕ್ಕೂ ಹೆಚ್ಚು ಜನ, ಮಾರಾಮಾರಿ
- ಪರಿಸ್ಥಿತಿ ನಿಯಂತ್ರಿಸಿ, ಕೇಸು ದಾಖಲಿಸಿಕೊಂಡ ಪೊಲೀಸರು: ಊರಲ್ಲಿ ಕಟ್ಟೆಚ್ಚರ, ಪೊಲೀಸ್‌ ಪಹರೆ

ಇದನ್ನೂ ಓದಿ: Manipur: ಬಿಎಸ್‌ಎಫ್‌ ಯೋಧನಿಂದ ಮಹಿಳೆಗೆ ಲೈಂಗಿಕ ಕಿರುಕುಳ ; ಸಿಸಿ ಕ್ಯಾಮರಾದಲ್ಲಿ ಸೆರೆ

click me!