
ಬೆಳಗಾವಿ (ಆಗಸ್ಟ್ 4): ಸಾಧಾರಣವಾಗಿ ಲಿಂಬೆ ಹಣ್ಣು, ಅರಿಶಿಣ ಕುಂಕುಮ ಇಟ್ಟು ವಾಮಾಚಾರ ಮಾಡೋದು ಸಾಮಾನ್ಯ. ಆದರೆ ಬೆಳಗಾವಿಯಲ್ಲೊಂದು ಹೈಟೆಕ್ ವಾಮಾಚಾರ ಪ್ರಕರಣ ಬೆಳಕಿಗೆ ಬಂದಿದೆ.
ಬೆಳಗಾವಿ ಜಿಲ್ಲೆಯ ಯಳ್ಳೂರು ಗ್ರಾಮದ ಹೊರವಲಯದಲ್ಲಿ ಅಪರೂಪದ ಮತ್ತು ಆಧುನಿಕ ತಂತ್ರದ ವಾಮಾಚಾರ ನಡೆಸಲಾಗಿದೆ. ಲಿಂಬೆಹಣ್ಣು, ಅರಿಶಿಣ, ಕುಂಕುಮದಂತಹ ವಸ್ತುಗಳನ್ನು ಬಳಸಿ ವಾಮಾಚಾರ ನಡೆಸುವುದು ಸಾಮಾನ್ಯವಾದರೂ, ಈ ಬಾರಿ ರೈತ ಸದಾನಂದ ದೇಸಾಯಿ ಅವರ ಜಮೀನಿನಲ್ಲಿ ಸ್ಮಾರ್ಟ್‌ಫೋನ್ ಸೇರಿದಂತೆ ವಾಮಾಚಾರದ ವಸ್ತುಗಳು ಪತ್ತೆಯಾಗಿವೆ.
ಈ ಘಟನೆಯನ್ನು ಹೈಟೆಕ್ ವಾಮಾಚಾರವಾಗಿದೆ. ಗ್ರಾಮಸ್ಥರು ಈ ವಿಚಿತ್ರ ಘಟನೆಯನ್ನು ಗಮನಿಸಿ, ರೈತ ಮುಖಂಡ ರಾಜು ಮರವೆ ಅವರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ರಾಜು, ಲಿಂಬೆಹಣ್ಣು, ಮೊಸರು, ತೆಂಗಿನಕಾಯಿ, ಎಲೆ-ಅಡಿಕೆ, ಕ್ಯಾರ್ ಬೀಜಗಳ ಜೊತೆಗೆ ಒಂದು ಸ್ಮಾರ್ಟ್‌ಫೋನ್ ಕಂಡು ದಿಗ್ಭ್ರಮೆಗೊಂಡಿದ್ದಾರೆ.
ಈ ವಸ್ತುಗಳನ್ನು ಗಿಡಕ್ಕೆ ಗಂಟು ಕಟ್ಟಿ ಜಮೀನಿನಲ್ಲಿ ಇರಿಸಲಾಗಿತ್ತು. ಕಳೆದ ಕೆಲವು ತಿಂಗಳಿಂದ ಈ ಜಮೀನಿನಲ್ಲಿ ವಾಮಾಚಾರಕ್ಕೆ ಸಂಬಂಧಿಸಿದ ವಸ್ತುಗಳು ಸತತವಾಗಿ ಕಾಣಿಸಿಕೊಳ್ಳುತ್ತಿರುವುದು ಗ್ರಾಮಸ್ಥರಲ್ಲಿ ಆತಂಕವನ್ನುಂಟುಮಾಡಿದೆ. ಸ್ಥಳೀಯರು ಈ ಘಟನೆಯಿಂದ ಆಘಾತಕ್ಕೊಳಗಾಗಿದ್ದು, ಇದರ ಹಿಂದಿನ ಉದ್ದೇಶವೇನು ಎಂಬುದರ ಬಗ್ಗೆ ಚರ್ಚೆಗಳು ಆರಂಭವಾಗಿವೆ.
ಸಾಂಪ್ರದಾಯಿಕ ವಾಮಾಚಾರಕ್ಕೆ ಆಧುನಿಕ ತಂತ್ರಜ್ಞಾನವನ್ನು ಬಳಸಿರುವುದು ಆಶ್ಚರ್ಯಕರವಾಗಿದೆ. ಇದರ ಹಿಂದಿನ ಉದ್ದೇಶವನ್ನು ಕಂಡುಹಿಡಿಯಬೇಕು ಎಂದು ರಾಜು ಮರವೆ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ