Kempegowda Park: ಹೆಬ್ಬಾಳ ಪಾರ್ಕ್ ಈಗ ಡ್ರಗ್ಸ್ ಸೇವನೆ, ಅಕ್ರಮಗಳ ತಾಣ!

Published : Jul 17, 2023, 07:20 AM IST
Kempegowda Park: ಹೆಬ್ಬಾಳ ಪಾರ್ಕ್ ಈಗ ಡ್ರಗ್ಸ್ ಸೇವನೆ, ಅಕ್ರಮಗಳ ತಾಣ!

ಸಾರಾಂಶ

 ನಾಡಪ್ರಭು ಕೆಂಪೇಗೌಡ ಪ್ರತಿಮೆ ಇರುವ ಉದ್ಯಾನವನ ಅಕ್ರಮ ಚಟುವಟಿಕೆಗಳ ತಾಣ..! ಪುಂಡ-ಪುಡಾರಿಗಳಿಗೆ ಆಶ್ರಯ..! ಹೌದು... ಹೆಬ್ಬಾಳ ಮೇಲ್ಸೇತುವೆ ಕೆಳಗೆ ಇರುವ ಕಿರು ಅರಣ್ಯ ಪ್ರದೇಶದಲ್ಲಿ ಕಂಡು ಬರುವ ದೃಶ್ಯವಿದು.

ಬೆಂಗಳೂರು (ಜು.17) :  ನಾಡಪ್ರಭು ಕೆಂಪೇಗೌಡ ಪ್ರತಿಮೆ ಇರುವ ಉದ್ಯಾನವನ ಅಕ್ರಮ ಚಟುವಟಿಕೆಗಳ ತಾಣ..! ಪುಂಡ-ಪುಡಾರಿಗಳಿಗೆ ಆಶ್ರಯ..! ಹೌದು... ಹೆಬ್ಬಾಳ ಮೇಲ್ಸೇತುವೆ ಕೆಳಗೆ ಇರುವ ಕಿರು ಅರಣ್ಯ ಪ್ರದೇಶದಲ್ಲಿ ಕಂಡು ಬರುವ ದೃಶ್ಯವಿದು.

ಐದು ವರ್ಷಗಳ ಹಿಂದೆ ಅದ್ಧೂರಿಯಾಗಿ ಉದ್ಘಾಟನೆಗೊಂಡ ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಬಳಿಯೇ ಹಲವಾರು ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ. ಪರಿಸ್ಥಿತಿ ಎಷ್ಟುಕೆಟ್ಟಿದೆಯೆಂದರೆ ಸಂಚರಿಸುವ ಪ್ರಯಾಣಿಕರು ಮುಜುಗರಕ್ಕೆ ಒಳಗಾಗುವುದರ ಜತೆಗೆ ಆತಂಕ ಪಡುವ ಪರಿಸ್ಥಿತಿಯೂ ಇದೆ. ಯಾವ ಉದ್ದೇಶಕ್ಕಾಗಿ ಕೆಂಪೇಗೌಡ ಪ್ರತಿಮೆ ನಿರ್ಮಾಣ ಮಾಡಲಾಗಿದೆಯೋ, ಅದು ಖಂಡಿತವಾಗಿಯೂ ಈಡೇರಿಲ್ಲ. ಆಶ್ಚರ್ಯವೆಂದರೆ, ಮೇಲ್ಸೇತುವೆಯ ಕೆಳಗೆ ಕೆಂಪೇಗೌಡ ಪ್ರತಿಮೆ ಇದೆ ಎನ್ನುವುದೇ ಜನತೆಗೆ ಗೊತ್ತಿಲ್ಲ. ಕುರುಚಲು ಗಿಡಗಳು, ಮರಗಳಿಂದ ಪ್ರತಿಮೆ ಮುಚ್ಚಿ ಹೋಗಿದೆ. ಹೀಗಾಗಿ, ಅನೈತಿಕ ಚಟುವಟಿಕೆ ನಡೆಸುವವರಿಗೆ ಹೇಳಿ ಮಾಡಿಸಿದಂತಾಗಿದೆ.

 

ಸೊರಬ: 16 ವರ್ಷಗಳಿಂದ ಪಾಳುಬಿದ್ದಿರೋ ಶೌಚಾಲಯ ಅಕ್ರಮ ಚಟುವಟಿಕೆಗಳ ತಾಣ!

ಮೇಲ್ಸೇತುವೆ ಕೆಳಗೆ ಸುಂದರವಾದ ಗಿಡಗಳನ್ನು ನೆಡಲಾಗಿದ್ದು, ಪ್ರವಾಸಿಗರನ್ನು, ಜನತೆಯನ್ನು ಆಕರ್ಷಿಸುತ್ತದೆ. ಆದರೆ, ಅದರ ಮತ್ತೊಂದು ಬದಿಯಲ್ಲಿರುವ ಕಿರು ಅರಣ್ಯ ಪ್ರದೇಶವನ್ನು ನಿರ್ಲಕ್ಷ್ಯ ಮಾಡಿರುವುದು ಖೇದಕರ ಸಂಗತಿಯಾಗಿದೆ. ಕಿರು ಅರಣ್ಯ ಪ್ರದೇಶದಲ್ಲಿ ಪ್ರತಿನಿತ್ಯ ಅಕ್ರಮ ಚಟುವಟಿಕೆಗಳು ನಡೆಯುತ್ತವೆ. ಕೇವಲ ರಾತ್ರಿ ಸಮಯದಲ್ಲಿ ಮಾತ್ರವಲ್ಲ, ಬೆಳಗ್ಗೆಯ ಹೊತ್ತಿನಲ್ಲಿಯೂ ಅಕ್ರಮ ಚಟುವಟಿಕೆಗಳು ನಡೆಯುತ್ತದೆ. ಗಿಡ-ಮರಗಳಿಂದ ಆವೃತ್ತ ಆಗಿರುವುದರಿಂದ ಇದು ಯಾರ ಕಣ್ಣಿಗೂ ಬೀಳುವುದಿಲ್ಲ. ಇದು ಅಕ್ರಮ ಚಟುವಟಿಕೆ ನಡೆಸುವವರಿಗೆ ಶ್ರೀರಕ್ಷೆಯಾಗಿದೆ. ಜನಸಾಮಾನ್ಯರು ಅಲ್ಲಿ ಹೋಗುವುದಕ್ಕೂ ಭಯ ಪಡುವ ವಾತಾವರಣವಿದೆ.

ಇಲ್ಲಿ ಅಕ್ರಮ ಚಟುವಟಿಕೆಗಳನ್ನು ತಡೆಯುವ ಉದ್ದೇಶದಿಂದಲೇ ಹಿಂದೆ ಇದೇ ಸ್ಥಳದಲ್ಲಿ ಉದ್ಯಾನವನ ನಿರ್ಮಿಸಲು ಸರ್ಕಾರ ಮುಂದಾಗಿತ್ತು. ಆದರೆ ಅದು ಇನ್ನೂ ಮರೀಚಿಕೆಯಾಗಿಯೇ ಉಳಿದಿದೆ. ಉದ್ಯಾನವನವನ್ನು ಅಭಿವೃದ್ಧಿಗೊಳಿಸಿದರೆ ಸಹಜವಾಗಿಯೇ ಜನರು ಆಗಮಿಸುವುದರಿಂದ ಅಕ್ರಮ ಚಟುವಟಿಕೆಗಳು ನಿಲ್ಲಲಿವೆ ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ.

ಕದ್ದ ವಸ್ತುಗಳ ಮಾರಾಟದಿಂದ ಬಂದ ಹಣಕ್ಕೆ ಜಗಳ; ಗೆಳೆಯನ ಹತ್ಯೆ!

ಅಕ್ರಮ ಚಟುವಟಿಕೆ ಮಾತ್ರವಲ್ಲದೇ, ಪುಂಡರಿಗೆ ಆಶ್ರಯ ತಾಣವೂ ಆಗಿದೆ. ಹೊರ ರಾಜ್ಯದ ಹಲವು ಮಂದಿ ಅಲ್ಲಿ ಶೆಡ್‌ಗಳನ್ನು ಹಾಕಿಕೊಂಡು ನೆಲೆಸಿದ್ದಾರೆ. ಈ ಪ್ರದೇಶದಲ್ಲಿ ಮಾದಕ ವಸ್ತುಗಳ ಸೇವನೆ, ಮಾರಾಟಗಳು ಸಹ ನಡೆಯುತ್ತವೆ ಎಂದು ಸ್ಥಳೀಯರು ದೂರಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವೃದ್ಧೆಯ ಕೇರ್ ಟೇಕರ್‌ನಿಂದಲೇ ₹31 ಲಕ್ಷ ಮೌಲ್ಯದ ಚಿನ್ನಾಭರಣ ಕಳವು: ಬಿಹಾರ ಮೂಲದ ಚಾಂದಿನಿ ಬಂಧನ!
ಈ ವರ್ತನೆ ಸರಿಯಲ್ಲ, ಹೈಕೋರ್ಟ್ ಪರಿಗಣಿಸುವ ಮೊದಲು ಕ್ಷಮೆ ಮುಖ್ಯ, ಪ್ರಜ್ವಲ್ ರೇವಣ್ಣ ಅರ್ಜಿಗೆ ಸುಪ್ರೀಂ ಕೆಂಡ!