ಪ್ರೀತಿಸಿದ ಯುವಕನಿಂದ ಮೋಸ.. ಮನನೊಂದ ಯುವತಿ ಆ*ಹತ್ಯೆಗೆ ಶರಣು: ಪೋಷಕರ ಆಕ್ರಂದನ

Published : Nov 07, 2025, 10:15 PM IST
Sindhu

ಸಾರಾಂಶ

ಪ್ರೀತಿಸಿದ ಯುವಕ ಮೋಸ ಮಾಡಿದ ಎಂದು ಮನನೊಂದು ಯುವತಿ ಆ*ಹತ್ಯೆಗೆ ಶರಣಾದ ಘಟನೆ ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ಕುದರಿಹಾಳ ಗ್ರಾಮದಲ್ಲಿ ನಡೆದಿದೆ. ಸಿಂಧು ಪರಣ್ಣನವರ್ ಆ*ಹತ್ಯೆಗೆ ಮಾಡಿಕೊಂಡ ಯುವತಿ.

ಹಾವೇರಿ (ನ.07): ಪ್ರೀತಿಸಿದ ಯುವಕ ಮೋಸ ಮಾಡಿದ ಎಂದು ಮನನೊಂದು ಮನೆಯಲ್ಲಿದ್ದ ಫ್ಯಾನ್‌ಗೆ ನೇಣುಬಿಗಿದುಕೊಂಡು ಯುವತಿ ಆ*ಹತ್ಯೆಗೆ ಶರಣಾದ ಘಟನೆ ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ಕುದರಿಹಾಳ ಗ್ರಾಮದಲ್ಲಿ ನಡೆದಿದೆ. ಸಿಂಧು ಪರಣ್ಣನವರ್ (25 ವರ್ಷ) ಆ*ಹತ್ಯೆಗೆ ಮಾಡಿಕೊಂಡ ಯುವತಿ. ಬಾಯ್ ಫ್ರೆಂಡ್ ಮನೆ ಮುಂದೆ ಶವ ಇಟ್ಟು ಮೃತ ಯುವತಿ ಕುಟುಂಬದವರು ಪ್ರತಿಭಟನೆ ನಡೆಸಿದ್ದಾರೆ.

ಬ್ಯಾಡಗಿ ತಾಲೂಕು ಶಂಕ್ರಿಕೊಪ್ಪ ಗ್ರಾಮದ ಯುವತಿ ಸಿಂಧು, ರಾಣೆಬೆನ್ನೂರು ತಾಲೂಕು ಕುದರಿಹಾಳ ಗ್ರಾಮದ ಯುವಕ ಶರತ್ ನೀಲಪ್ಪನವರ್ ಎಂಬ ಯುವಕನ ಜೊತೆ ಹಲವು ತಿಂಗಳುಗಳಿಂದ ಪ್ರೀತಿ ಮಾಡುತ್ತಿದ್ದರು. ಪ್ರೀತಿಯ ಸಲುಗೆಯಿಂದ ಸಿಂಧು ಜೊತೆ ಶರತ್ ಲೈಂಗಿಕ ಸಂಪರ್ಕ ಬೆಳೆಸಿದ್ದನಂತೆ. ಈ ಹಿನ್ನೆಲೆಯಲ್ಲಿ ಮೃತ ಸಿಂಧು ಮೂರು ತಿಂಗಳ ಗರ್ಭಿಣಿಯಾಗಿದ್ದಳು. ಗರ್ಭಿಣಿಯಾದ ವಿಚಾರ ತಿಳಿದು ಶರತ್ ಮದುವೆಗೆ ನಿರಾಕರಿಸಿದ್ದ. ಕೆಲ ದಿನಗಳಿಂದ ರಾಜಿ ಪಂಚಾಯತ್ ಮಾಡಿದ್ರೂ ಶರತ್ ಒಪ್ಪದ ಕಾರಣಕ್ಕೆ ಮನನೊಂದಿದ್ದ ಸಿಂಧು ನೇಣಿಗೆ ಶರಣಾಗಿದ್ದಾಳೆ.

ಮಗಳ ಸಾವಿನಿಂದ ಮನನೊಂದು ಪೋಷಕರು ಹಾಗೂ ಕುಟುಂಬಸ್ಥರು ಕುದುರಿಹಾಳ ಗ್ರಾಮದ ಶರತ್ ಮನೆಯ ಮುಂದೆ ಯುವತಿಯ ಶವವಿಟ್ಟು ಪ್ರತಿಭಟನೆ ಮಾಡುತ್ತಿದ್ದಾರೆ. ಶರತ್ ಸಹೋದರಿಯಿಂದ ಸಿಂಧು ಪರಿಚಯವಾಗಿದ್ದಳಂತೆ. ಬಳಿಕ ಶರತ್ ಹಾಗೂ ಸಿಂಧು ನಡುವೆ ಪ್ರೇಮ ಬೆಳೆದಿತ್ತು ಸ್ಥಳಕ್ಕೆ ರಾಣೇಬೆನ್ನೂರು ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮನೆಯ ಮುಂದೆ ಶವವಿಟ್ಟು ಪ್ರತಿಭಟನೆ ಮಾಡಿದ ಹಿನ್ನಲೆಯಲ್ಲಿ ಶರತ್ ಮನೆಯ ಸದಸ್ಯರು ಮನೆಗೆ ಬೀಗಹಾಕಿ ಪರಾರಿಯಾಗಿದ್ದಾರೆ.

ಮದುವೆ ಮಾಡಿಸುವಂತೆ ಸಿಂಧು ಹಠ ಹಿಡಿದಿದ್ಲು

ಸದ್ಯ ಯುವತಿಯ ಕುಟುಂಬ ಸದಸ್ಯರ ಆಕ್ರಂದನ‌ ಮುಗಿಲು ಮುಟ್ಟಿದೆ. ಇನ್ನು ಹಲವು ದಿನಗಳಿಂದ ಶರತ್ ಜೊತೆ ಮದುವೆ ಮಾಡಿಸುವಂತೆ ಸಿಂಧು ಹಠ ಹಿಡಿದಿದ್ಲು. ಇದಕ್ಕೆ ಶರತ್ ಕುಟುಂಬ ಸದಸ್ಯರು ಒಪ್ಪಿರಲಿಲ್ಲ ಎನ್ನಲಾಗಿದೆ. ಇದರಿಂದ ಮನನೊಂದ ಯುವತಿ ನೇಣಿಗೆ ಶರಣಾಗಿದ್ದಾಳೆ. ನಮ್ಮ ಮಗಳ ಸಾವಿಗೆ ನ್ಯಾಯ ಬೇಕು, ನ್ಯಾಯ... ಎಂದು ಕುಟುಂಬ ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರು ಅಪಾರ್ಟ್‌ಮೆಂಟ್‌ನ 16 ಕುಟುಂಬಗಳಿಗೆ ರೌಡಿಸಂ ದರ್ಶನ; ಮಾಟ-ಮಂತ್ರ ಮಾಡಿಸಿ ಕಿರುಕುಳ!
ಕೆಲಸ ಇಲ್ಲದ ಗಂಡನಿಗೆ ಪತ್ನಿ ಶೀಲದ ಮೇಲೆ ಶಂಕೆ: ನಿದ್ರೆಯಲ್ಲಿದ್ದ ಮಗಳ ಕತ್ತು ಸೀಳಿದ ಪತಿ