'BSY ಕುಟುಂಬ ಫುಲ್ ಕ್ಲೋಸ್' ಕೆಲಸ ಕೊಡಿಸುವ ಹಾವೇರಿ ವಂಚಕ ಬಲೆಗೆ!

By Suvarna News  |  First Published Jul 2, 2020, 3:15 PM IST

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಅವರ ಕುಟುಂಬದವರು ತನಗೆ ಪರಿಚಯ/ ಕೆಲಸ ಕೊಡಿಸುತ್ತೇನೆ ಎಂದು ನಂಬಿಸಿ ಯುವಕರಿಗೆ ವಂಚನೆ/ ಸಿಸಿಬಿ ಬಲೆಗೆ ಬಿದ್ದ ಹಾವೇರಿಯ ವ್ಯಕ್ತಿ


ಬೆಂಗಳೂರು(ಜು.  02) ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಅವರ ಕುಟುಂಬದವರು ತನಗೆ ಪರಿಚಯವಿದ್ದಾರೆ ಎಂದು ಹೇಳಿಕೊಂಡು ಕೆಲಸ ಕೊಡಿಸುವುದಾಗಿ ವಂಚಿಸುತ್ತಿದ್ದ ವ್ಯಕ್ತಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಹಾವೇರಿ ಮೂಲದ ಶಿವಕುಮಾರ್ ಹೊಸಳ್ಳಿ  ಬಂಧಿತ ಆರೋಪಿ.

ಯಾವ ಕೆಲಸ ಬೇಕಿದ್ದರೂ ಮಾಡಿಕೊಡುತ್ತೇನೆ ಎಂದು ಹಲವಾರು ಮಂದಿಗೆ ವಂಚಿಸಿದ್ದ. ಅದರಲ್ಲೂ ಉತ್ತರ ಕರ್ನಾಟಕ ಮೂಲದ ಯುವಕರಿಗೆ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕೆಲಸ ಕೊಡಿಸುತ್ತೇನೆ ಎಂಬ ಅಮಿಷವೊಡ್ಡಿ ಹಣ ಪಡೆದಿದ್ದ. ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ನಿಮಗೆ ಕೆಲಸ ಕೊಡಿಸುತ್ತೇನೆ ಎಂದು ನಿರಂತರ ವಂಚನೆ ಮಾಡುತ್ತಿದ್ದವ ಅಂದರ್ ಆಗಿದ್ದಾನೆ.

Tap to resize

Latest Videos

ಬೆಂಗಳೂರು; ಅಡ್ರೆಸ್ ಕೇಳುವ ನೆಪದಲ್ಲಿ ಪತ್ರಕರ್ತೆ ಮುಂದೆಯೇ ಹಸ್ತಮೈಥುನ

ವಂಚನೆ ಮಾಡುತ್ತಿರುವ ಬಗ್ಗೆ ಸಿಸಿಬಿಗೆ ದೂರುಗಳು ಬಂದಿದ್ದವು.  ಸಿಸಿಬಿ ಪೊಲೀಸರ ತನಿಖೆ ವೇಳೆ ಮತ್ತಷ್ಟು ಶಾಕಿಂಗ್ ಮಾಹಿತಿ ಬಯಲಾಗಿದೆ. ಗುತ್ತಿಗೆದಾರರಿಗೆ ಬಾಕಿ ಬಿಲ್ ಕ್ಲಿಯರ್ ಮಾಡಿಸುವುದಾಗಿ ಹಣ ಪಡೆದಿದ್ದಾನೆ ಚಾಲಾಕಿ.  PWD ಸೇರಿ ಹಲವು ಇಲಾಖೆಗಳಲ್ಲಿ ಗುತ್ತಿಗೆದಾರರಿಗೆ ಬರಬೇಕಿದ್ದ ಬಾಕಿ ಬಿಲ್ ಮೊತ್ತ ತಕ್ಷಣ ಸೆಟಲ್ ಮಾಡಿಸುತ್ತೇನೆ ಎಂದು ಹಣ ಪಡೆದಿದ್ದ.

#NewsIn100Seconds | ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್

"

click me!