ಮದುವೆಗೆ ಒಪ್ಪದ್ದಕ್ಕೆ ಅತ್ತೆ ಮಗಳನ್ನೇ ಅಪಹರಿಸಿದ್ದ ಕಿರಾತಕ; ಘಟನೆ ನಡೆದ ಏಳು ಗಂಟೆಯಲ್ಲೇ ಆರೋಪಿ ಬಂಧನ

By Ravi Janekal  |  First Published Dec 1, 2023, 10:30 AM IST

ಮದುವೆಗೆ ಒಪ್ಪದ್ದಕ್ಕೆ ದುರುಳರು ಶಾಲಾ ಶಿಕ್ಷಕಿಯನ್ನು ಅಪಹರಿಸಿದ್ದ ಪ್ರಕರಣದಲ್ಲಿ ಘಟನೆ ನಡೆದ ಏಳು ಗಂಟೆಯಲ್ಲಿ ಶಿಕ್ಷಕಿಯನ್ನ ರಕ್ಷಣೆ ಮಾಡಿ, ಅಪಹರಣ ಮಾಡಿದ್ದ ಅರೋಪಿಯನ್ನು ಬಂಧಿಸಿದ ಪೊಲೀಸರು.


ಹಾಸನ (ಡಿ.1): ಮದುವೆಗೆ ಒಪ್ಪದ್ದಕ್ಕೆ ದುರುಳರು ಶಾಲಾ ಶಿಕ್ಷಕಿಯನ್ನು ಅಪಹರಿಸಿದ್ದ ಪ್ರಕರಣದಲ್ಲಿ ಘಟನೆ ನಡೆದ ಏಳು ಗಂಟೆಯಲ್ಲಿ ಶಿಕ್ಷಕಿಯನ್ನ ರಕ್ಷಣೆ ಮಾಡಿ, ಅಪಹರಣ ಮಾಡಿದ್ದ ಅರೋಪಿಯನ್ನು ಬಂಧಿಸಿದ ಪೊಲೀಸರು.

ಹಾಸನದ ಹೊರವಲಯದಲ್ಲಿ ನಡೆದಿದ್ದ ಘಟನೆ. ರಕ್ಷಣೆ ಬಳಿಕ ಹೆತ್ತವರ ಜೊತೆ ಮನೆಗೆ ಹೋದ ಶಿಕ್ಷಕಿ ಅರ್ಪಿತಾ. ಸಹಚರರೊಂದಿಗೆ ಇನ್ನೋವಾ ಕಾರಿನಲ್ಲಿ ಬಂದು, ಶಿಕ್ಷಕಿ ಶಾಲೆಗೆ ಹೋಗುವ ಸಮಯ ಹೊಂಚು ಹಾಕಿ ಅಪಹರಿಸಲಾಗಿತ್ತು. ಘಟನೆ ಬಳಿಕ ಮಿಂಚಿನ ಕಾರ್ಯಾಚರಣೆ ನಡೆಸಿದ್ದ ಪೊಲೀಸರು. ಮದುವೆಯಾಗಲು ಕರೆದೊಯ್ಯುವ ವೇಳೆಯೇ ಮಾರ್ಗಮಧ್ಯೆ ಆರೋಪಿಯನ್ನು ಬಂಧಿಸಿದ ಪೊಲೀಸರು. ಕಾರಿನೊಳಗೆ ಇದ್ದ ಶಿಕ್ಷಕಿ ಅರ್ಪಿತಾರನ್ನು ರಕ್ಷಣೆ ಮಾಡಿ ಕರೆತಂದ ಪೊಲೀಸರು. ನಿನ್ನೆ ತಡರಾತ್ರಿ ಶಿಕ್ಷಕಿಯನ್ನು ಸುರಕ್ಷಿತವಾಗಿ ಪೋಷಕರಿಗೆ ಒಪ್ಪಿಸಿದ್ದಾರೆ.

Tap to resize

Latest Videos

ಹಾಸನದಲ್ಲಿ ಶಿಕ್ಷಕಿ ಅಪಹರಣ ಪ್ರಕರಣ ಸುಖಾಂತ್ಯ: ಬೆಳಗ್ಗೆ ಕಿಡ್ನಾಪ್, ರಾತ್ರಿ ಹೊತ್ತಿಗೆ ಆರೋಪಿಗಳು ಅಂದರ್

ಘಟನೆ ನಡೆದ ಏಳು ಗಂಟೆಯೊಳಗೆ ಆರೋಪಿ ಬಂಧನ:

ಪೊಲೀಸರು ಬೆನ್ನಟ್ಟುತ್ತಲೆ ಕಾರಿನಲ್ಲಿ ರಾಮು ಮಾತ್ರ ಬಿಟ್ಟು ಉಳಿದವರು ಎಸ್ಕೇಪ್.  ದಕ್ಷಿಣ ಕನ್ನಡದ ನೆಲ್ಯಾಡಿ ಬಳಿ ಸಿಕ್ಕಿಬಿದ್ದ ಕಿಡ್ನಾಪರ್ ರಾಮು. ನೆನ್ನೆ ಬೆಳಿಗ್ಗೆ 8 ಗಂಟೆ5 ನಿಮಿಷಕ್ಕೆ ಶಿಕ್ಷಕಿ ಅಪಹರಣವಾಗಿತ್ತು. ಸಂಜೆ  ಮೂರುಗಂಟೆ ವೇಳೆಗೆ ಆರೋಪಿಗಳನ್ನ ಬಂಧಿಸಿದ ಪೊಲೀಸರು. ಅತ್ತೆ ಮಗಳನ್ನ ಮದುವೆಯಾಗಲು ಮದುವೆ ಪ್ರಸ್ತಾಪ ಮಾಡಿದ್ದ ರಾಮು. ತನ್ನ ಪೋಷಕರ‌ ಮೂಲಕ ಮದುವೆ ಪ್ರಸ್ತಾಪ ಮಾಡಿದ್ದ. ಆದರೆ ಯುವತಿ ಹಾಗು ಆಕೆಯ ಪೋಷಕರು ಮದುವೆಗೆ ಒಪ್ಪದ ಕಾರಣ ಕಿಡ್ನಾಪ್ ಮಾಡಿ‌ ಮದುವೆಯಾಗಲು ಯತ್ನ ನಡೆಸಿದ್ದ ಆರೋಪಿ ಕಾರಿನಲ್ಲೇ ಯುವತಿ ಮನವೊಲಿಸಿ ತಾಳಿಕಟ್ಟಲು ಯತ್ನಿಸಿದ್ದ  

ಹಾಸನದಲ್ಲಿ ಬೆಳ್ಳಂಬೆಳಗ್ಗೆ ಸಿನಿಮೀಯ ರೀತಿಯಲ್ಲಿ ಶಾಲಾ ಶಿಕ್ಷಕಿ ಅಪಹರಣ! ಪ್ರತಿರೋಧಿಸಿದ್ರೂ ಬಿಡದ ದುರುಳರು!

ಆದರೆ ಯುವತಿ ಒಪ್ಪಿಗೆ ನೀಡದ ಕಾರಣ ಮದುವೆಯಾಗಲು ಹಿಂದೇಟು ಹಾಕಿದ್ದ. ಇತ್ತ ಪೊಲೀಸರು ಕೂಡ ಬೆನ್ನಟ್ಟಿದ ಕಾರಣ ತನ್ನ ಪ್ಲಾನ್‌ಪ್ಲಾಪ್ ಆಗಿ ಸಿಕ್ಕಿಬಿದ್ದಿರುವ ಆರೋಪಿ ರಾಮು. ಹಾಸನ ನಗರ ಪೊಲೀಸರ ಕಾರ್ಯಾಚರಣೆಗೆ ಕುಟುಂಬ ಸದಸ್ಯರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸೇಫಾಗಿ ಮಗಳು ಮನೆ‌ಸೇರಿದ್ದಕ್ಕೆ ನಿಟ್ಟುಸಿರು ಬಿಟ್ಟ ಪೋಷಕರು ಅಪಹರಣ ಪ್ರಕರಣ ಸಂಬಂಧ ಹಾಸನ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿಕೊಂಡ ಪೊಲೀಸರು.

click me!