
ಹೊಸದಿಲ್ಲಿ (ಜುಲೈ 25, 2023): ಮಾಜಿ ಗಗನಸಖಿ ಗೀತಿಕಾ ಶರ್ಮಾ ಆತ್ಮಹತ್ಯೆ ಕೇಸ್‌ನಲ್ಲಿ ಹರ್ಯಾಣದ ವಿವಾದಿತ ಶಾಸಕ ಗೋಪಾಲ್ ಕಾಂಡಾ ಅವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. 2012ರಲ್ಲಿ ಈ ಪ್ರಕರಣ ನಡೆದಿದ್ದು, ಆತ್ಮಹತ್ಯೆ ನಡೆದು 13 ವರ್ಷಗಳ ಬಳಿಕ ಹರಿಯಾಣದ ವಿವಾದಿತ ಶಾಸಕ ಗೋಪಾಲ್ ಕಾಂಡಾ ಅವರನ್ನು ಖುಲಾಸೆಗೊಳಿಸಿದೆ.
ದೆಹಲಿಯ ರೋಸ್ ಅವೆನ್ಯೂ ನ್ಯಾಯಾಲಯದ ವಿಶೇಷ ನ್ಯಾಯಾಧೀಶ ವಿಕಾಸ್ ಧುಲ್ ಅವರು ಪ್ರಕರಣದಲ್ಲಿ ಸಹ-ಆರೋಪಿ ಅರುಣಾ ಚಡ್ಡಾ ಅವರನ್ನು ಸಹ ಖುಲಾಸೆಗೊಳಿಸಿದ್ದಾರೆ. ಆರೋಪಿಗಳ ವಿರುದ್ದ ಸಮಂಜಸವಾದ ಅನುಮಾನಗಳಿದ್ದರೂ, ಆರೋಪಗಳನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ನ್ಯಾಯಾಧೀಶ ಅಭಿಪ್ರಾಯಪಟ್ಟಿದ್ದಾರೆ.
ಇದನ್ನು ಓದಿ: ಎಂಗೇಜ್‌ಮೆಂಟ್ ಬಳಿಕ ಭಾವಿ ಪತಿ ಜತೆ ಪಾರ್ಟಿ: 100 ಅಡಿ ಕಡಿದಾದ ಪ್ರಪಾತಕ್ಕೆ ಜಾರಿಬಿದ್ದು ಮಹಿಳೆ ಸಾವು
ಗೋಪಾಲ್ ಕಾಂಡಾ ಅವರ ಎಂಎಲ್‌ಡಿಆರ್ ಏರ್‌ಲೈನ್ಸ್‌ನ ಮಾಜಿ ಗಗನಸಖಿಯಾಗಿದ್ದ ಗೀತಿಕಾ ಶರ್ಮಾ ಅವರನ್ನು ಅವರ ಕಂಪನಿಯೊಂದರ ನಿರ್ದೇಶಕರಾಗಿ ಸಹ ಪ್ರಮೋಷನ್ ನೀಡಲಾಗಿತ್ತು. ಆದರೆ, ಆಗಸ್ಟ್ 5, 2012 ರಂದು ದೆಹಲಿಯ ಅವರ ನಿವಾಸದಲ್ಲಿ ಗೀತಿಕಾ ಶರ್ಮಾ ಶವವಾಗಿ ಪತ್ತೆಯಾಗಿದ್ದರು.
ಅಲ್ಲದೆ, ಆಗಸ್ಟ್ 4 ರಂದು ಡೆತ್‌ನೋಟ್ ಬರೆದಿದ್ದ ಗೀತಿಕಾ ಶರ್ಮಾ, 46 ವರ್ಷ ವಯಸ್ಸಿನ ಗೋಪಾಲ್ ಕಾಂಡಾ ಮತ್ತು ಇನ್ನೊಬ್ಬ ವ್ಯಕ್ತಿಯಿಂದ "ಕಿರುಕುಳ" ನೀಡಲಾಗಿತ್ತು ಎಂದು ಆರೋಪಿಸಿದ್ದರು ಎಂದು ತಿಳಿದುಬಂದಿತ್ತು. ಅಲ್ಲದೆ, ಮಾಜಿ ಗಗನಸಖಿ ಮರಣದ 6 ತಿಂಗಳ ನಂತರ, ಗೀತಿಕಾ ಶರ್ಮಾ ಅವರ ತಾಯಿ ವಾಯುವ್ಯ ದೆಹಲಿಯಲ್ಲಿರುವ ಕುಟುಂಬದ ಡಬಲ್ ಬೆಡ್‌ರೂಂ ಅಪಾರ್ಟ್‌ಮೆಂಟ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ಇದನ್ನೂ ಓದಿ: ಯಮುನಾ ನದಿಯಲ್ಲಿ ಸಿಕ್ಕ ಡಾಲ್ಫಿನ್ ಹಿಡಿದು ತಿಂದ ಮೀನುಗಾರರು: ನಾಲ್ವರ ವಿರುದ್ಧ ಕೇಸ್
ಗೋಪಾಲ್ ಕಾಂಡಾ, ಪ್ರಭಾವಿ ರಾಜಕಾರಣಿ ಮತ್ತು ಉದ್ಯಮಿಯಾಗಿದ್ದು, ಭೂಪಿಂದರ್ ಸಿಂಗ್ ಹೂಡಾ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾಗಿದ್ದರು. ಪ್ರಕರಣ ದಾಖಲಾದ ನಂತರ ಅವರು ಗೃಹ ಖಾತೆ ರಾಜ್ಯ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. 46 ವರ್ಷದ ಗೋಪಾಲ್ ಕಾಂಡಾ ಅವರು ಕ್ರಿಮಿನಲ್ ಬೆದರಿಕೆ, ಸಾಕ್ಷ್ಯ ನಾಶ, ಫೋರ್ಜರಿ ಸೇರಿದಂತೆ ಇತರ ಆರೋಪಗಳ ನಡುವೆ ಐಪಿಸಿಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಆರೋಪಗಳನ್ನು ಎದುರಿಸುತ್ತಿದ್ದರು.
ವಿಚಾರಣಾ ನ್ಯಾಯಾಲಯವು ಅವರ ವಿರುದ್ಧ ಅತ್ಯಾಚಾರ ಮತ್ತು ಅಸ್ವಾಭಾವಿಕ ಲೈಂಗಿಕತೆಯ ಆರೋಪಗಳನ್ನು ಸಹ ರೂಪಿಸಿತ್ತು ಆದರೆ ದೆಹಲಿ ಹೈಕೋರ್ಟ್ ಇದನ್ನು ರದ್ದುಗೊಳಿಸಿತು. ಗೀತಿಕಾ ಶರ್ಮಾ 2006 ರಲ್ಲಿ ಗೋಪಾಲ್ ಕಾಂಡಾ ಅವರ MDLR ಗೆ ಸೇರಿದ್ದರು. ಬಳಿಕ ಆ ಏರ್‌ಲೈನ್ಸ್ ಮುಚ್ಚಿದ ನಂತರ, ಅವರು ಎಮಿರೇಟ್ಸ್ ಏರ್‌ಲೈನ್ಸ್‌ನೊಂದಿಗೆ ಕೆಲಸ ಮಾಡಲು 2010 ರಲ್ಲಿ ದುಬೈಗೆ ತೆರಳಿದರು.
ಇದನ್ನೂ ಓದಿ: ಸೈಬರ್‌ಕ್ರೈಂ ಮೂಲಕ 700 ಕೋಟಿ ವಂಚನೆ ಪತ್ತೆಹಚ್ಚಿದ ಪೊಲೀಸರು: ಉಗ್ರರು, ಚೀನಾ ಪಾಲಾಗ್ತಿದ್ದ ಹಣ
ಆದರೆ ಗೋಪಾಲ್ ಕಾಂಡಾ ಅವರು ಫೋರ್ಜರಿ ಮಾಡುವ ಮೂಲಕ ಕೇವಲ 5 ತಿಂಗಳಿಗೆ ಗೀತಿಕಾ ಶರ್ಮಾ ಅವರನ್ನು ಭಾರತಕ್ಕೆ ಮರಳುವಂತೆ ಮಾಡಲಾಯಿತು ಎಂಬ ಆರೋಪವೂ ಕೇಳಿಬಂದಿತ್ತು. ನಂತರ ಮತ್ತೊಮ್ಮೆ ತನ್ನ ಬಳಿ ಕೆಲಸ ಮಾಡುವಂತೆ ಶಾಸಕರು ಬ್ಲ್ಯಾಕ್‌ಮೇಲ್ ಮಾಡಿದ್ದಾರೆ ಎಂದು ಆಕೆಯ ಕುಟುಂಬದವರು ಆರೋಪಿಸಿದ್ದರು.
ಆದರೀಗ, ದೆಹಲಿಯ ಕೋರ್ಟ್ ಗೊಪಾಲ್ ಕಾಂಡಾ ಹಾಗೂ ಮತ್ತೊಬ್ಬ ಆರೋಪಿಯನ್ನು ಖುಲಾಸೆಗೊಳಿಸಿದ್ದು, ಅವರನ್ನು ಈ ಪ್ರಕರಣ ಸಂಬಂಧದ ಎಲ್ಲ ಆರೋಪಗಳಿಂದ ಮುಕ್ತ ಮಾಡಲಾಗಿದೆ.
ಇದನ್ನೂ ಓದಿ: Love Jihad: ಹಿಂದೂ ಮಹಿಳೆಯೊಂದಿಗೆ ಫೇಸ್‌ಬುಕ್ ಲವ್: ರೇಪ್ ಮಾಡಿ ಗರ್ಭಪಾತ ಮಾಡಿಸಿ ಇಸ್ಲಾಂಗೆ ಮತಾಂತರ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ