ಬೀದಿ ನಾಯಿ ಕೊಂದ ಕುಟುಂಬದ ವಿರುದ್ಧ ಸೇಡು ತೀರಿಸಲು ಚೆನ್ನೈನಿಂದ ಕೋಲ್ಕತಾಗೆ ತೆರಳಿದ ಐಐಟಿ ವಿದ್ಯಾರ್ಥಿ ಚಾಕು ಇರಿದ ಘಟನೆ ನಡೆದಿದೆ. ಈ ಘಟನೆಯಲ್ಲಿ ಇಡೀ ಕುಟುಂಬ ಗಾಯಗೊಂಡಿದೆ, ಪೋಷಕರು ಚೇತರಿಸಿಕೊಳ್ಳುತ್ತಿದ್ದರೆ, ಗಂಭೀರವಾಗಿ ಗಾಯಗೊಂಡ ಬಾಲಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಕೋಲ್ಕತಾ(ಜು.07) ದಾಳಿಗೆ ಪ್ರಯತ್ನಿಸುತ್ತಿದ್ದ, ಮನೆ ಆವರಣದೊಳಕ್ಕೆ ಬಂದ ಬೀದಿ ನಾಯಿಯನ್ನು ಕೋಲಿನಿಂದ ಹೊಡೆದ ಪರಿಣಾಮ ಮೃತಪಟ್ಟಿದೆ. ಇಷ್ಟೇ ನೋಡಿ, ಪಕ್ಕದ ಮನೆಯ ಕಟುಂಬದ ಐಐಟಿ ವಿದ್ಯಾರ್ಥಿಗೆ ಎಲ್ಲಿಲ್ಲದ ಸಿಟ್ಟು ಬಂದಿದೆ. ಚೈನ್ನೈನಿಂದ ನೇರವಾಗಿ ಕೋಲ್ಕತಾಗೆ ಬಂದಳಿದ ಐಐಟಿ ವಿದ್ಯಾರ್ಥಿ, ಪಕ್ಕದ ಮನೆಗೆ ತೆರಳಿ ಚಾಕುವಿನಿಂದ ಇಡೀ ಕುಟುಂಬದ ಮೇಲೆ ದಾಳಿ ನಡೆಸಿದ್ದಾರೆ. ಈ ಘಟನೆಯಲ್ಲಿ ಮೂವರು ಗಾಯಗೊಂಡಿದ್ದಾರೆ. ಈ ಪೈಕಿ ಬಾಲಕ ತೀವ್ರವಾಗಿ ಗಾಯಗೊಂಡ ಘಟನೆ ಕೋಲ್ಕತಾದಲ್ಲಿ ನಡೆದಿದೆ.
ಅಕ್ಕ ಪಕ್ಕ ಮನೆ. ಒಂದು ಗೋಬಿಂದೋ ದೇಬನಾಥ್ ಹಾಗೂ ಮತ್ತೊಂದು ಸುಭಾಶ್ ಅಧಿಕಾರಿ ಮನೆ. ಎರಡು ಕುಟುಂಬ ಅನ್ಯೋನ್ಯವಾಗಿತ್ತು. ಆದರೆ ಸುಭಾಷ್ ಅಧಿಕಾರಿ ಕುಟುಂಬ ಬೀದಿ ನಾಯಿಗಳಿಗೆ ತಮ್ಮ ಮನೆ ಮುಂದೆ ಆಹಾರ ಹಾಕುವ ಅಭ್ಯಾಸ. ಇದರಿಂದ ದೇಬನಾಥ್ ಕುಟುಂಬ ಸದಸ್ಯರಿಗೆ ಕಿರಿಕಿರಿ. ಬೀದಿ ನಾಯಿಗಳು ದೇಬನಾಥ್ ಕುಟುಂಬ ಸದಸ್ಯರ ಮೇಲೆ ದಾಳಿಗೂ ಪ್ರಯತ್ನಿಸುತ್ತಿತ್ತು. ಈ ವಿಚಾರವಾಗಿ ಎರಡೂ ಕುಟುಂಬಗಳೂ ಪದೆ ಪದೇ ಕಿರಿಕ್ ಮಾಡಿಕೊಂಡಿದೆ.
ಮುಂಬೈ ಲೋಕಲ್ ರೈಲಿನಲ್ಲಿನ ನಾಯಿಯ ಪ್ರಯಾಣ, ಶಿಸ್ತು ನೋಡಿ ಕಲೀರಿ ಎಂದ ನೆಟ್ಟಿಗರು!
ಸುಭಾಷ್ ಅಧಿಕಾರಿ ಕುಟುಂಬ ಮಾತ್ರ ಬೀದಿ ನಾಯಿಗಳಿಗೆ ಆಹಾರ ಹಾಕುವುದು ನಿಲ್ಲಿಸಿಲ್ಲ, ಇತ್ತ ಗೋಬಿಂದೋ ದೇಬನಾಥ್ ಕುಟುಂಬ ಆಕ್ಷೇಪ ವ್ಯಕ್ತಪಡಿಸುತ್ತಲೇ ಬಂದಿದೆ. ಬೀದಿ ನಾಯಿಗಳು ಪಕ್ಕದಲ್ಲೇ ಬಿಡಾರ ಹೂಡಿರುವ ಕಾರಣ ಶುಚಿತ್ವಕ್ಕೂ ಸಮಸ್ಯೆಯಾಗುತ್ತಿತ್ತು. ಇಷ್ಟೇ ಅಲ್ಲ ಗೋಬಿಂದೂ ದೇಬನಾಥ್ ಕುಟುಂಬದಲ್ಲಿ ಶಾಲೆಗೆ ತೆರಳುತ್ತಿದ್ದ ಬಾಲಕನಿರುವ ಕಾರಣ ಬೀದಿ ನಾಯಿ ದಾಳಿ ಮಾಡುವ ಸಾಧ್ಯತೆಯನ್ನು ಮನಗಂಡಿದ್ದರು. ಹೀಗಾಗಿ ಆತಂಕ ಹೆಚ್ಚಾಗಿತ್ತು.
ದೇಬನಾಥ್ ಕುಟುಂಬದ ಆವರಣಕ್ಕೆ ಬರುತ್ತಿದ್ದ ಬೀದಿ ನಾಯಿಗಳನ್ನು ಓಡಿಸುತ್ತಿದ್ದರು. ಹೀಗಿರುವಾಗ ಒಂದು ದಿನ ಬೀದಿ ನಾಯಿಯೊಂದು ದೇಬನಾಥ್ ಮನೆ ಆವರಣದೊಳಗೆ ಪ್ರವೇಶಿಸಿತ್ತು. ಮನೆಯವರ ಮೇಲೆ ದಾಳಿಗೂ ಮುಂದಾಗಿತ್ತು. ಆತಂಕಗೊಂಡ ದೇಬನಾಥ್ ನಾಯಿಯನ್ನು ಓಡಿಸಲು ಕೋಲಿನಿಂದ ಬೀಸಿ ಹೊಡೆದಿದ್ದಾರೆ. ರಭಸದಿಂದ ಬೀಸಿ ಹೊಡೆದ ಕಾರಣ ಬೀದಿ ನಾಯಿ ತೀವ್ರವಾಗಿ ಗಾಯಗೊಂಡು ಹೊರಗೆ ಓಡಿದೆ.
ದೇಬನಾಥ್ ಆವರಣದಿಂದ ಹೊರಬಂದ ನಾಯಿ ಕುಸಿದು ಬಿದ್ದು ಮೃತಪಟ್ಟಿದೆ. ನಾಯಿಯ ಕೂಗು ಕೇಳಿ ಅಷ್ಟೊತ್ತಿಗೆ ಸುಭಾಷ್ ಅಧಿಕಾರಿ ಕುಟುಂಬ ಹೊರಗೆ ಓಡಿ ಬಂದಿದೆ. ಈ ವಿಚಾರಕ್ಕೆ ಇಬ್ಬರ ನಡುವೆ ಜಗಳವಾಗಿದೆ. ಸುಭಾಷ್ ಅಧಿಕಾರಿ ಪುತ್ರ ಚೆನ್ನೈನಲ್ಲಿ ಐಐಟಿ ಓದುತ್ತಿದ್ದ. ಈತನಿಗೂ ಫೋನ್ ಮೂಲಕ ಮಾಹಿತಿ ನೀಡಲಾಗಿದೆ. ಈ ವಿಷಯ ತಿಳಿದ ಐಐಟಿ ವಿದ್ಯಾರ್ಥಿ ಚೆನ್ನೈನಿಂದ ಕೋಲ್ಕತಾಗೆ ಆಗಮಿಸಿದ್ದಾನೆ.
ತಾಜ್ ಹೊಟೆಲ್‌ನಲ್ಲಿ ಬೀದಿ ನಾಯಿಗೆ ರಾಜ ಮರ್ಯಾದೆ, ರತನ್ ಟಾಟಾ ಸೂಚನೆ ಭಾರಿ ಮೆಚ್ಚುಗೆ!
ಚಾಕು ಹಿಡಿದು ಸುಭಾಷ್ ಅಧಿಕಾರಿ ಮನೆಗೆ ತೆರಳಿ ಎಲ್ಲರ ಮೇಲೆ ಚಾಕುವಿನಿಂದ ದಾಳಿ ಮಾಡಿದ್ದಾರೆ. ಈ ದಾಳಿಯಲ್ಲಿ ಮೂವರು ಗಾಯಗೊಂಡಿದ್ದಾರೆ. ಬಾಲಕನ ಗಾಯ ತೀವ್ರವಾಗಿದೆ. ಬಾಲಕನನ್ನು ಕೋಲ್ಕತಾದ ಎಂಆರ್ ಬಂಗೂರು ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇತ್ತ ಐಐಟಿ ವಿದ್ಯಾರ್ಥಿವಿದ್ಯಾರ್ಥಿಯನ್ನು ಬಂಧಿಸಿರುವ ಪೊಲೀಸರು , ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.