* ಇ-ಪ್ರಕ್ಯೂರ್‌ಮೆಂಟ್ ವೆಬ್‌ಸೈಟಲ್ಲಿ ಹ್ಯಾಕರ್ ಶ್ರೀಕಿಯ ಕೈಚಳಕ
* ಸಿಐಡಿಯಿಂದ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಸಲ್ಲಿಕೆ
* ಆಸ್ತಿ ಜಪ್ತಿ ಮಾಡಿಸಿದ್ದ ಐಡಿ
ಬೆಂಗಳೂರು(ಡಿ.03): ತಾನು ವಾಸ್ತವ್ಯ ಹೂಡಿದ್ದ ಪ್ರತಿಷ್ಠಿತ ಹೋಟೆಲ್‌ವೊಂದರ ಐಪಿ ಅಡ್ರೆಸ್(IP Address) ಬಳಸಿಯೇ ಕರ್ನಾಟಕದ ಸರ್ಕಾರದ(Government of Karnataka) ಇ ಪ್ರಕ್ಯೂರ್‌ಮೆಂಟ್ ವೆಬ್‌ಸೈಟ್ ಅನ್ನು ಹ್ಯಾಕ್ ಮಾಡಿ 11 ಕೋಟಿಯವನ್ನು ಅಂತಾರಾಷ್ಟ್ರೀಯ ಮಟ್ಟದ ಕುಖ್ಯಾತ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ(Shreeki) ದೋಚಿದ್ದ ಎಂಬ ಸಂಗತಿ ಸಿಐಡಿ(CID) ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಇ-ಪ್ರಕ್ಯೂರ್‌ಮೆಂಟ್ ಹ್ಯಾಕಿಂಗ್(Hacking) ಪ್ರಕರಣ ಸಂಬಂಧ ನ್ಯಾಯಾಲಯಕ್ಕೆ(Court) ಸಿಐಡಿ ಸಲ್ಲಿಸಿದ ಆರೋಪ ಪಟ್ಟಿಯಲ್ಲಿ, 2019ರ ಏಪ್ರಿಲ್ ಮತ್ತು ಮೇ ತಿಂಗಳ ಅವಧಿಯಲ್ಲಿ ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿ ಪ್ರಕ್ಯೂರ್‌ಮೆಂಟ್‌ಗೆ ಆತ ಕನ್ನ ಹಾಕಿದ್ದ. ಇದಕ್ಕೆ ಪೂರಕವಾಗಿ ಆ ಹೋಟೆಲ್‌ನ ಇಂಟರ್‌ನೆಟ್ ಸರ್ವೀಸ್ ನಿರ್ವಹಣೆ ನಡೆಸುವ ಖಾಸಗಿ ಕಂಪನಿ ಜತೆ ನಡೆದ ಇ-ಮೇಲ್ ಸಂವಹನವನ್ನು ಆರೋಪ ಪಟ್ಟಿ ಜತೆ ಲಗತ್ತಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
Internet at Risk: ಇಡೀ ಅಂತರ್ಜಾಲಕ್ಕೆ ಮಾರಕ Log4j ಸಾಫ್ಟ್‌ವೇರ್ ನ್ಯೂನತೆ: ಟೆಕ್ ಕಂಪನಿಗಳು ಹೇಳೋದೇನು?
2019ರಲ್ಲಿ ರಾಜ್ಯ ಸರ್ಕಾರದ ಇ ಪ್ರಕ್ಯೂರ್‌ಮೆಂಟ್ ವೆಬ್‌ಸೈಟನ್ನು ಹ್ಯಾಕ್ ಮಾಡಿ .11 ಕೋಟಿ ಕಳ್ಳತನ ಪ್ರಕರಣ ಸಂಬಂಧ ಶ್ರೀಕಿ ಸೇರಿದಂತೆ 18 ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ 500 ಪುಟಗಳ ದೋಷಾರೋಪ(Chargesheet) ಪಟ್ಟಿಸಲ್ಲಿಸಲಾಗಿದೆ.
ಹೋಟೆಲ್‌ನಿಂದಲೇ 11 ಕೋಟಿ ಕದ್ದ!
2019ರಲ್ಲಿ ಬೆಂಗಳೂರಿನ ಬಿಇಎಲ್ ರಸ್ತೆಯಲ್ಲಿರುವ ಗೋಕುಲ ಹೋಟೆಲ್ ಆ್ಯಂಡ್ ಸ್ಪಾನಲ್ಲಿ ಶ್ರೀಕಿ ಉಳಿದುಕೊಂಡಿದ್ದ. ಈ ಹೋಟೆಲ್‌ನಲ್ಲಿ ಇಂಟರ್‌ನೆಟ್ ಬಳಸಿದ ಗ್ರಾಹಕರ ಪಟ್ಟಿಯನ್ನು ಪಡೆದು ಪರಿಶೀಲಿಸಿದಾಗ ಅದರಲ್ಲಿ ಶ್ರೀಕಿ ಹೆಸರು ಸಹ ಇತ್ತು. 2019ರ ಮೇ 4 ಹಾಗೂ ಜುಲೈ 29ರಂದು ಆತ ಉಳಿದುಕೊಂಡಿದ್ದ. ಆ ಸಮಯದಲ್ಲಿ ಹೋಟೆಲ್‌ನಲ್ಲಿ ಐಪಿ ಅಡ್ರೆಸ್ಸನ್ನು ಶ್ರೀಕಿ ಬಳಸಿದ್ದ ಎಂದು ಸಿಐಡಿ ಅಧಿಕಾರಿಗಳು ಹೇಳಿದ್ದಾರೆ.
ಈ ಹಣದ ದೋಚಿದ ಬಳಿಕ ಹಿಮಾಚಲ ಪ್ರದೇಶದ(Himachal Pradesh) ರೆಸಾರ್ಟ್‌ನಿಂದ ಮತ್ತೆ ಇ-ಪ್ರಕ್ಯೂರ್‌ಮೆಂಟ್ ವೆಬ್‌ಸೈಟ್‌ಗೆ ಕನ್ನ ಹಾಕಿ .28 ಕೋಟಿ ದೋಚಲು ಆರೋಪಿಗಳು ವಿಫಲ ಯತ್ನ ನಡೆಸಿದ್ದರು. ಈ ಸಂಬಂಧ ಹಿಮಾಚಲ ಪ್ರದೇಶದ ಹೋಟೆಲ್‌ನ ಐಪಿ ಬಳಸಿರುವ ಬಗ್ಗೆ ಆರೋಪಿ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಡ್ರಗ್ಸ್ ಕೇಸ್‌ನಲ್ಲಿ ಶ್ರೀಕಿ ವಿಚಾರಣೆ ವೇಳೆ ಬಹಿರಂಗ
2019ರ ಜುಲೈ 30ರಂದು ಇ ಪ್ರಕ್ಯೂರ್‌ಮೆಂಟ್ ಘಟಕದ ಅಧಿಕಾರಿಗಳಿಗೆ ಸರ್ಕಾರದ ಅನುಮೋದನೆ ಇಲ್ಲದೇ ಬೇರೆ ಬೇರೆ ಸಂದರ್ಭದಲ್ಲಿ .7.37 ಕೋಟಿ, .1.05 ಕೋಟಿ, .10.5 ಕೋಟಿ ಹಾಗೂ .11 ಕೋಟಿ ದೋಚಲಾಗಿತ್ತು. ಈ ಸಂಬಂಧ ಅಧಿಕಾರಿಗಳು ಸಿಐಡಿಗೆ ದೂರು ಸಲ್ಲಿಸಿದ್ದರು. ಇದಾದ ಒಂದೂವರೆ ವರ್ಷದ ಬಳಿಕ ಡ್ರಗ್ಸ್ ಮಾರಾಟ ಪ್ರಕರಣದಲ್ಲಿ ಸಿಸಿಬಿ ಬಲೆಗೆ ಬಿದ್ದ ಶ್ರೀಕಿ ವಿಚಾರಣೆ ವೇಳೆ ಇ ಪ್ರಕ್ಯೂರ್‌ಮೆಂಟ್ ಕನ್ನ ಸಂಗತಿ ಬೆಳಕಿಗೆ ಬಂದಿತ್ತು.
Bitcoin Scam| 4ನೇ ಕ್ಲಾಸ್‌ನಲ್ಲೇ ಹ್ಯಾಕಿಂಗ್ ಕಲಿತಿದ್ದ ಶ್ರೀಕಿ..!
ಗೆಳೆಯನಿಗಾಗಿ ಹ್ಯಾಕ್: ಶ್ರೀಕಿ
ನನ್ನ ಗೆಳೆಯ ಗುತ್ತಿಗೆದಾರ ಸುನೀಶ್ ಹೆಗ್ಡೆ ಸೂಚನೆ ಮೇರೆಗೆ ಪ್ರಕ್ಯೂರ್‌ಮೆಂಟ್ ವೆಬ್ ಹ್ಯಾಕ್ ಮಾಡಿದ್ದೆ. ತನ್ನ ಜೂಜಾಟಕ್ಕೆ ಪಡೆದಿದ್ದ ಸಾಲ ತೀರಿಸಲು ಸುನೀಶ್ ಈ ಕೃತ್ಯ ಮಾಡಿಸಿದ್ದ ಎಂದು ಶ್ರೀಕಿ ಹೇಳಿದ್ದಾನೆ.
ಆಸ್ತಿ ಜಪ್ತಿ ಮಾಡಿಸಿದ್ದ ಐಡಿ
ಶ್ರೀಕಿಯಿಂದ ಹಣ ಪಡೆದ ಆರೋಪದ ಎದುರಿಸುತ್ತಿದ್ದ ಮಹಾರಾಷ್ಟ್ರದ ನಾಗ್ಪುರ ಮೂಲದ ಸ್ವಯಂ ಸೇವಾ ಸಂಸ್ಥೆಗಳಾದ ಉದಯ್ ಗ್ರಾಮ ವಿಕಾಶ್ ಸಂಸ್ಥೆ ಹಾಗೂ ಉತ್ತರ ಪ್ರದೇಶದ ನಿಮ್ಮಿ ಎಂಟರ್‌ಪ್ರೆಸಸ್ ಸಂಸ್ಥೆಗಳಿಗೆ ಸೇರಿದ .1.44 ಕೋಟಿ ಆಸ್ತಿಯನ್ನು ಇಡಿ ಮುಟ್ಟುಗೋಲು ಹಾಕಿದೆ.