ಜೈಲಿನಲ್ಲಿರುವ ದರ್ಶನ್ ಆರೋಗ್ಯದಲ್ಲಿ ಏರುಪೇರು, ಚಿಂತಿಸುವ ಅಗತ್ಯವಿಲ್ಲ

By Gowthami K  |  First Published Aug 14, 2024, 12:04 PM IST

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರದಲ್ಲಿರುವ ನಟ ದರ್ಶನ್ ಆರೋಗ್ಯದಲ್ಲಿ ಏರುಪೇರಾಗಿದೆ ಎಂದು ಉಲ್ಲೇಖಿಸಿ ಮನಿ ಕಂಟ್ರೋಲ್ ವರದಿ ಮಾಡಿದೆ.


ಬೆಂಗಳೂರು (14): ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರದಲ್ಲಿರುವ ನಟ ದರ್ಶನ್ ಆರೋಗ್ಯದಲ್ಲಿ ಏರುಪೇರಾಗಿದೆ ಎಂದು ಉಲ್ಲೇಖಿಸಿ ಮನಿ ಕಂಟ್ರೋಲ್ ವರದಿ ಮಾಡಿದೆ.

ವರದಿ ಪ್ರಕಾರ  ದರ್ಶನ್ ಅವರು ಅಸ್ವಸ್ಥರಾಗಿ ಮೂರ್ಛೆ ಹೋಗಿದ್ದರು. ತಲೆ ಸುತ್ತಿ ಬಿದ್ದಿದ್ದರು ಎಂದು ವರದಿಯಾಗಿದೆ. ಈ ಸುದ್ದಿ ಅಭಿಮಾನಿಗಳಲ್ಲಿ ಮತ್ತು ದರ್ಶನ್ ಆಪ್ತರಲ್ಲಿ ಆತಂಕಕ್ಕೆ ಕಾರಣವಾಗಿತ್ತು. ಆದರೆ ಈಗ ದರ್ಶನ್ ಆರೋಗ್ಯ ಚೆನ್ನಾಗಿದೆ ಯಾರೂ ಚಿಂತಿಸುವ ಅಗತ್ಯವಿಲ್ಲ. ದರ್ಶನ್ ಬಗ್ಗೆ ಸಾರ್ವಜನಿಕವಾಗಿ ಅಭಿಮಾನಿಗಳಿಗೆ ನೋವುಂಟು ಮಾಡುವ ಸುದ್ದಿಗಳನ್ನು ಹಂಚಿಕೊಳ್ಳಬಾರದು. ಪರಿಶೀಲಿಸದೆ ಯಾವುದೇ ಸುದ್ದಿಯನ್ನು ಹಂಚಿಕೊಳ್ಳಬೇಡಿ ಎಂದು ಸುಳ್ಳು ವದಂತಿಗಳಿಗೆ ತಲೆ ಕಡೆಸಿಕೊಳ್ಳಬೇಡಿ ಎಂದು ಅಭಿಮಾನಿಗಳು ಹೇಳಿದ್ದಾರೆ.

Latest Videos

undefined

ತಪ್ಪು ಮಾಹಿತಿ ಹರಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ದರ್ಶನ್ ಅಭಿಮಾನಿಗಳು ಒತ್ತಾಯಿಸಿದ್ದಾರೆ. ಮಾಹಿತಿಯನ್ನು ಆನ್‌ಲೈನ್‌ನಲ್ಲಿ ಹಂಚಿಕೊಳ್ಳುವ ಮೊದಲು ಪರಿಶೀಲಿಸುವುದು ಮುಖ್ಯವಾಗಿದೆ ಎಂದು ಮನವಿ ಮಾಡಿಕೊಂಡಿದ್ದಾರೆ.

'ವೃಷಣದಲ್ಲಿ ರಕ್ತ, ಎದೆಯ ಮೂಳೆ ಮುರಿತ..' ಪೋಸ್ಟ್‌ ಮಾರ್ಟಮ್‌ನಲ್ಲಿ ದರ್ಶನ್ & ಗ್ಯಾಂಗ್ ರಾಕ್ಷಸತನ ಬಯಲು!

ಕೊಲೆ ಕೇಸ್‌ ಬಳಿಕ ನಟ ದರ್ಶನ್ ಚಿಂತಿತರಾಗಿದ್ದು, ಮನೆ ಊಟದ ಸೌಲಭ್ಯ ಸಿಕ್ಕಿಲ್ಲ. ಜೈಲೂಟ ಒಗ್ಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಅವರ ದೇಹ ಸಂಪೂರ್ಣ ಇಳಿದು ಹೋಗಿದೆ ಎನ್ನಲಾಗಿದೆ. ಜೈಲಿನಲ್ಲಿ ಪುಸ್ತಕಗಳನ್ನು ಓದುತ್ತಾ, ಧ್ಯಾನ ಮಾಡುತ್ತಾ ಸಮಯ ಕಳೆಯುತ್ತಿದ್ದಾರಂತೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಎ2 ಆರೋಪಿಯಾಗಿದ್ದು, ಆತನ ಆಪ್ತ ಸ್ನೇಹಿತೆ ಪವಿತ್ರಾ ಗೌಡ ಎ1 ಆರೋಪಿಯಾಗಿದ್ದು, ಇತರೆ 15 ಮಂದಿ ಜೈಲಿನಲ್ಲಿದ್ದಾರೆ.

ಪೊಲೀಸರು ಸಾಕ್ಷ್ಯಾಧಾರಗಳನ್ನು ಸಂಗ್ರಹಿಸುತ್ತಿದ್ದು, ನಟ ದರ್ಶನ್ ನ್ಯಾಯಾಂಗ ಬಂಧನದ ಅವಧಿ ಇಂದು ಅಂತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಎಲ್ಲಾ ಆರೋಪಿಗಳನ್ನು ಆನ್‌ಲೈನ್ ಮೂಲಕ ನ್ಯಾಯಾಲಯಕ್ಕೆ ಹಾಜರು ಪಡಿಲಾಗುತ್ತದೆ. ಪರಪ್ಪನ ಅಗ್ರಹಾರ ಜೈಲಿನಿಂದ 13 ಮಂದಿ ಆರೋಪಿಗಳು ಹಾಜರಾಗಲಿದ್ದು, ತುಮಕೂರು ಜೈಲಿನಿಂದ 4 ಆರೋಪಿಗಳನ್ನ ಹಾಜರು ಪಡಿಸಲು ಸಿದ್ದತೆ ನಡೆದಿದೆ.

ನಮ್ಮ ಹುಡುಗ್ರು ಮಾಡಿರೋದು, ನಾನೇನು ಮಾಡಿಲ್ಲ ಸಾರ್; ಎಸಿಪಿ ಚಂದನ್‌ಗೆ ಅವಾಜ್ ಹಾಕಿದ್ದ ನಟ ದರ್ಶನ್

ಕಳೆದ ಜೂನ್ 7ರಂದು ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಕಿಡ್ನಾಪ್ ಮಾಡಿಕೊಂಡು ಬಂದು ರಾತ್ರಿ ಪಟ್ಟಣಗೆರೆ ಶೆಡ್‌ ನಲ್ಲಿಡಲಾಗಿತ್ತು. ಮತ್ತು ವಿಕೃತವಾಗಿ ಹಿಂಸೆ ಕೊಟ್ಟು ಕೊಲ್ಲಲಾಗಿತ್ತು. ಜೂನ್ 8ರ ಬೆಳಗ್ಗಿನ ಜಾವ ರೇಣುಕಾಸ್ವಾಮಿ  ಮೃತದೇಹವನ್ನು ಸುಮನಹಳ್ಳಿ ಬ್ರಿಡ್ಜ್ ಬಳಿ ಆರೋಪಿಗಳು ಬಿಸಾಡಿದ್ದರು. ಜೂನ್‌ 9ರಂದು ಮೃತದೇಹ ಪತ್ತೆಯಾಗಿತ್ತು. ಜೂನ್‌ 10ರಂದು ಕಾಮಾಕ್ಷಿಪಾಳ್ಯ ಪೊಲೀಸ್‌ ಠಾಣೆಗೆ ಬಂದ ನಾಲ್ವರು ಹಣಕಾಸಿನ ವಿಚಾರಕ್ಕೆ ಈ ಕೊಲೆ ಮಾಡಿದ್ದೇವೆ ಎಂದು ಶರಣಾಗತಿಗೆ ಬಂದಿದ್ದರು. 

ವಿಚಾರಣೆ ನಡೆಸಿದ ಪೊಲೀಸರಿಗೆ ಈ ಕೊಲೆ ಕೇಸ್‌ ನಲ್ಲಿ ಇನ್ನೂ ಹಲವರ ಪಾತ್ರದ ಬಗ್ಗೆ ಅನುಮಾನ ಬಂದು ಮತ್ತಷ್ಟು ಕೆದಕಿದಾಗ ನಟ ದರ್ಶನ್ ಮತ್ತು ಆತನ ಆಪ್ತೆ ಪವಿತ್ರಾ ಗೌಡ ಭಾಗಿಯಾಗಿರುವ ಬಗ್ಗೆ ತಿಳಿಯಿತು. ಇದಾದ ನಂತರ ಜೂನ್‌ 11 ರಂದು ಮೈಸೂರಿನಲ್ಲಿ ದರ್ಶನ್ ನನ್ನು ಬಂಧಿಸಿ ಬೆಂಗಳೂರಿಗೆ ಪೊಲೀಸರು ಕರೆತಂದಿದ್ದರು. ಕೊಲೆಯಲ್ಲಿ ಒಟ್ಟು 17 ಮಂದಿಯನ್ನು ಬಂಧಿಸಿ ಜೈಲಿನಲ್ಲಿಡಲಾಗಿದೆ.

click me!