
ಬಾಗಲಕೋಟೆ (ಏ. 29) ಕೋವಿಡ್ ಪಾಸಿಟಿವ್ ಇದ್ದ ಫಾಮಾ೯ಸಿಸ್ಟ್ ಆವಾಂತರಕ್ಕೆ ಇಡೀ ತಾಲೂಕಾಸ್ಪತ್ರೆಯಲ್ಲಿ ಆತಂಕ ಮನೆ ಮಾಡಿದೆ. ಕೋವಿಡ್ ಪೊಸಿಟಿವ್ ಮಾಹಿತಿ ಬಚ್ಚಿಟ್ಟು ಎಲ್ಲರೊಂದಿಗೆ ಬೆರೆತ ಫಾಮಾ೯ಸಿಸ್ಟ್ ಓಡಾಡಿಕೊಂಡಿದ್ದರು. ಮಾಹಿತಿ ಗೊತ್ತಾದ ತಕ್ಷಣ ಫಾಮಾ೯ಸಿಸ್ಟ್ ನನ್ನು ಬಾಗಲಕೋಟೆ ಜಿಲ್ಲಾಡಳಿತ ಸಸ್ಪೆಂಡ್ ಮಾಡಿದೆ.
ಪೊಸಿಟಿವ್ ಇದ್ದರೂ ಎಲ್ಲರೊಂದಿಗೆ ತಾಲೂಕಾಸ್ಪತ್ರೆಯಲ್ಲಿ ಓಡಾಡಿ ಎರಡು ದಿನ ಕೆಲಸ ಮಾಡಿದ್ದ ಫಾಮಾ೯ಸಿಸ್ಟ್ ಎಲ್ಲ ಕಡೆ ಎಡವಟ್ಟು ಮಾಡಿದ್ದಾನೆ. ಫಾಮಾ೯ಸಿಸ್ಟ್ ಸಸ್ಪೆಂಡ್ ಮಾಡಿ ಆದೇಶ ಮಾಡಿದ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಮನೆಯಲ್ಲೇ ಐಸೋಲೇಶನ್, ಮೂರು ಮಾಸ್ಕ್ ಕಡ್ಡಾಯ
ಮುಧೋಳ ಸಕಾ೯ರಿ ತಾಲೂಕಾಸ್ಪತ್ರೆಯಲ್ಲಿ ಕಾಯ೯ ನಿವ೯ಹಿಸುತ್ತಿದ್ದ ಫಾಮಾ೯ಸಿಸ್ಟ್ ಪೊಸಿಟಿವ್ ರಿಪೋರ್ಟ್ ಇದ್ದರೂ ಯಾರಿಗೂ ತಿಳಿಸದಂತೆ ಅಧೀನ ಸಿಬ್ಬಂದಿಗೆ ವಾನಿ೯ಂಗ್ ಮಾಡಿದ್ದ. ಇದೀಗ ಫಾಮಾ೯ಸಿಸ್ಟ್ ಸಂಪಕ೯ದಲ್ಲಿರೋ ತಾಲೂಕಾಸ್ಪತ್ರೆ ಸಿಬ್ಬಂದಿಗೆ ಕೋವಿಡ್ ಟೆಸ್ಟ್ ಮಾಡಲು ಆರೋಗ್ಯ ಇಲಾಖೆ ಮುಂದಾಗಿದೆ ಎಂದು ಡಿಎಚ್ಓ ಡಾ.ಅನಂತ ದೇಸಾಯಿ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ