ಸರ್ಕಾರಿ ನೌಕರನಾದ್ರೂ ಸಾಲಕ್ಕೆ ಹೆದರಿ ರೈಲಿಗೆ ತಲೆಕೊಟ್ಟ ಕುಟುಂಬ: ತಂದೆ-ತಾಯಿ, ಮಗಳ ದೇಹವೆಲ್ಲಾ ಛಿದ್ರ ಛಿದ್ರ

By Sathish Kumar KH  |  First Published Oct 2, 2023, 11:45 AM IST

ಸರ್ಕಾರಿ ಸೇವೆಯಿಂದ ನಿವೃತ್ತಿ ಹೊಂದಿದ ನೌಕರ ಸಾಲದ ಶೂಲಕ್ಕೆ ಸಿಲುಕಿ, ಇಡೀ ಕುಟುಂಬ ಸಮೇತ ರೈಲಿಗೆ ತಲೆಕೊಟ್ಟು ಸಾವನ್ನಪ್ಪಿರುವ ದುರ್ಘಟನೆ ತುಮಕೂರಿನಲ್ಲಿ ನಡೆದಿದೆ.


ತುಮಕೂರು (ಅ.02) ಜೀವನೋಪಾಯಕ್ಕೆ ಸರ್ಕಾರದ ಸಂಸ್ಥೆಯಾದ ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನಿಯಮಿತ (ಕೆಇಬಿ) ಸರ್ಕಾರಿ ನೌಕರನಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ವ್ಯಕ್ತಿಯ ಕುಟುಂಬವು ಸಾಲದ ಶೂಲಕ್ಕೆ ಸಿಲುಕಿ, ಕುಟುಂಬದ ಎಲ್ಲ ಸದಸ್ಯರೂ ರೈಲಿಗೆ ತಲೆಕೊಟ್ಟು ಮೃತಪಟ್ಟಿರುವ ದುರ್ಘಟನೆ ತುಮಕೂರಿನಲ್ಲಿ ನಡೆದಿದೆ.

ಸಾಲಭಾದೇ ತಾಳಲಾರದೆ ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈಲಿಗೆ ಸಿಲುಕಿ ತಂದೆ, ತಾಯಿ, ಮಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಿದ್ದಗಂಗಯ್ಯ (62), ಸುನಂದಮ್ಮ ಹಾಗೂ ಅವರ ಪುತ್ರಿ ಗೀತಾ ಆತ್ಮಹತ್ಯೆಗೆ ಶರಣಾದ ದುರ್ದೈವಿಗಳು ಆಗಿದ್ದಾರೆ.  ತುಮಕೂರಿನ ಪಂಡಿತನಹಳ್ಳಿ ರೈಲ್ವೆ ಹಳಿ ಬಳಿ ಘಟನೆ ನಡೆದಿದೆ. ಇವರು ತುಮಕೂರಿನ ಮರಳೂರು ನಿವಾಸಿಯಾಗಿದ್ದಾರೆ. ಕಳೆದ ಎರಡು ವರ್ಷಗಳ ಹಿಂದೆ ಕೆಇಬಿ ಸೇವೆಯಿಂದ ನಿವೃತ್ತಿ ಹೊಂದಿದ್ದ ಸಿದ್ದಗಂಗಯ್ಯ ಅವರು ಸಾಕಷ್ಟು ಸಾಲ ಮಾಡಿಕೊಂಡಿದ್ದರು.

Tap to resize

Latest Videos

undefined

ಶಿವಮೊಗ್ಗದಲ್ಲಿ ಇದೆಲ್ಲ ಏನ್ ಹೊಸದಾಗಿ ಮಾಡ್ತಾರಾ? ಗೃಹ ಸಚಿವ ಪರಮೇಶ್ವರ ಉಡಾಫೆ ಉತ್ತರ!

ಕೆಇಬಿ ಸೇವೆಯಿಂದ ನಿವೃತ್ತಿ ಹೊಂದಿದ ನಂತರ ಜೀವನೋಪಾಯಕ್ಕೆ ಬೆಂಗಳೂರಿನ ಮಲ್ಲೇಶ್ವರಂ ಬಳಿಯಿರುವ ಕೆಸಿ ಜನರಲ್ ಆಸ್ಪತ್ರೆ ಬಳಿ ಟೀ ಶಾಪ್ ಇಟ್ಟುಕೊಂಡಿದ್ದರು. ಇಂದು ಬೆಳಗ್ಗಿನ ಜಾವ ಆಟೋದಲ್ಲಿ ಬಂದು ಪಂಡಿತನಹಳ್ಳಿ ರೈಲ್ವೆ ಹಳಿ ಬಳಿ ರೈಲಿಗೆ ಸಿಕ್ಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈಲು ಸಿಕ್ಕಿದ ಪರಿಣಾಮ ಮೃತದೇಹಗಳು ಚೆಲ್ಲಾಪಿಲ್ಲಿಯಾಗಿವೆ. ತುಮಕೂರು ಜಿಲ್ಲಾಸ್ಪತ್ರೆಯ ಶವಗಾರಕ್ಕೆ ಮೃತದೇಹಗಳು ರವಾನೆ ಮಾಡಲಾಗಿದೆ. ಯಶವಂತಪುರ ರೈಲ್ವೆ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ಮಾಡಿದ್ದಾರೆ. ಈ ಘಟನೆ ಕುರಿತು ಯಶವಂತಪುರ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

click me!