ಪತ್ನಿಗೆ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದವನ ಮನೆಗೆ ಕರೆಸಿ ಚಾಕುವಿನಿಂದ ಹಲ್ಲೆ ನಡೆಸಿದ ಪತಿ!

By Kannadaprabha News  |  First Published Oct 2, 2023, 6:19 AM IST

  ತನ್ನ ಪತ್ನಿಯ ಖಾಸಗಿ ವಿಡಿಯೋ ಮತ್ತು ಫೋಟೋಗಳನ್ನು ಮುಂದಿಟ್ಟು ಹಣ ನೀಡುವಂತೆ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದ ವ್ಯಕ್ತಿಯ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಬಾಗಲೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.


ಬೆಂಗಳೂರು (ಅ.2) :  ತನ್ನ ಪತ್ನಿಯ ಖಾಸಗಿ ವಿಡಿಯೋ ಮತ್ತು ಫೋಟೋಗಳನ್ನು ಮುಂದಿಟ್ಟು ಹಣ ನೀಡುವಂತೆ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದ ವ್ಯಕ್ತಿಯ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಬಾಗಲೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಾಗಲೂರು ಸಮೀಪದ ಚೊಕ್ಕನಹಳ್ಳಿ ನಿವಾಸಿ ನಾಗರಾಜ್ (37) ಬಂಧಿತ. ಘಟನೆಯಲ್ಲಿ ಕಮ್ಮನಹಳ್ಳಿ ನಿವಾಸಿ, ಆಟೋ ಚಾಲಕ ಆರೋಗ್ಯದಾಸ್ (27) ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಯದಿಂದ ಪಾರಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

Tap to resize

Latest Videos

Bengaluru: ನಂಬರ್ ಬ್ಲಾಕ್ ಮಾಡಿದ್ದಕ್ಕೆ ಗೆಳತಿಯ ಹತ್ಯೆ: ಕ್ಯಾಬ್‌ ಚಾಲಕನ ಬಂಧನ

ಪ್ರಕರಣದ ಹಿನ್ನೆಲೆ:

ವೆಲ್ಡಿಂಗ್ ಕೆಲಸ ಮಾಡುವ ನಾಗರಾಜ್ ಈ ಹಿಂದೆ ಕುಟುಂಬದೊಂದಿಗೆ ಕಮ್ಮನಹಳ್ಳಿಯಲ್ಲಿ ವಾಸವಾಗಿದ್ದರು. ಈ ವೇಳೆ ಪಕ್ಕದ ಮನೆಯ ನಿವಾಸಿಯಾಗಿದ್ದ ಆರೋಗ್ಯದಾಸ್‌ ಪರಿಚಯವಾಗಿತ್ತು. ಕೆಲ ದಿನಗಳ ಬಳಿಕ ಆರೋಗ್ಯದಾಸ್‌, ನಾಗರಾಜ್ ಅವರ ಪತ್ನಿಯ ಜತೆ ಸಲುಗೆ ಬೆಳೆಸಿಕೊಂಡಿದ್ದ. ಆಕೆಯ ಜತೆಗೆ ಇದ್ದ ಕ್ಷಣಗಳನ್ನು ತನ್ನ ಮೊಬೈಲ್‌ನಲ್ಲಿ ವಿಡಿಯೋ ಸೆರೆ ಹಿಡಿದುಕೊಂಡಿದ್ದ. ಇತ್ತೀಚೆಗೆ ಆ ಮಹಿಳೆಗೆ ಕರೆ ಮಾಡಿ ತನ್ನಲಿರುವ ವಿಡಿಯೋ ಹಾಗೂ ಫೋಟೋಗಳನ್ನು ಬಗ್ಗೆ ತಿಳಿಸಿ, ಹಣ ನೀಡದಿದ್ದಲ್ಲಿ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಮಾಡುವುದಾಗಿ ಬೆದರಿಸಿದ್ದ.

ಮನೆಗೆ ಕರೆಸಿ ಚಾಕುವಿನಿಂದ ಹಲ್ಲೆ:

ಆರೋಪಿಯ ಬ್ಲ್ಯಾಕ್‌ಮೇಲ್‌ನಿಂದ ಆತಂಕಗೊಂಡ ಆ ಮಹಿಳೆ, ಈ ವಿಚಾರವನ್ನು ಪತಿ ನಾಗರಾಜ್‌ ಗಮನಕ್ಕೆ ತಂದಿದ್ದರು. ಆಗ ಆಕ್ರೋಶಗೊಂಡ ನಾಗರಾಜ್‌, ಆರೋಗ್ಯದಾಸ್‌ಗೆ ಬುದ್ಧಿ ಕಲಿಸಲು ನಿರ್ಧರಿಸಿದ್ದ. ಸೆ.30ರಂದು ಮಧ್ಯಾಹ್ನ ಪತ್ನಿಯಿಂದ ಆರೋಗ್ಯದಾಸ್‌ಗೆ ಕರೆ ಮಾಡಿಸಿ ಮನೆಗೆ ಬರುವಂತೆ ಹೇಳಿಸಿದ್ದ. ಅದರಂತೆ ಆರೋಗ್ಯದಾಸ್‌, ಮಹಿಳೆ ಮನೆಗೆ ಬಂದಿದ್ದ. ಈ ವೇಳೆ ಪತಿ ನಾಗರಾಜ್‌ನನ್ನು ಕಂಡು ಪರಾರಿಯಾಗಲು ಯತ್ನಿಸಿದ್ದಾನೆ. 

ಡೈವರ್ಸ್‌ಗೆ ಒಪ್ಪದ 4 ತಿಂಗಳ ಗರ್ಭಿಣಿ ಪತ್ನಿಯನ್ನ ಮುಗಿಸಲು ಗಂಡನಿಂದ ಸಂಚು!

ಈ ವೇಳೆ ಕುಪಿತಗೊಂಡ ನಾಗರಾಜ್‌, ಗಿಡ ಕತ್ತರಿಸಲು ಇರಿಸಿದ್ದ ಚಾಕು ತೆಗೆದು ಆರೋಗ್ಯದಾಸ್‌ನ ಎದೆ, ಕಿವಿ, ಕೈಗೆಗಳಿಗೆ ಚುಚ್ಚಿ ಹಲ್ಲೆ ಮಾಡಿದ್ದ. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿ ನಾಗರಾಜ್‌ನನ್ನು ಬಂಧಿಸಲಾಗಿದೆ. ಸದ್ಯ ಆರೋಗ್ಯದಾಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಗುಣಮುಖನಾದ ಬಳಿಕ ವಶಕ್ಕೆ ಪಡೆದು ವಿಚಾರಣೆ ನಡೆಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

click me!