ರಾಷ್ಟ್ರ ರಾಜದಾನಿ ದೆಹಲಿಯ ಫರೀದಾಬಾದ್‌ನಲ್ಲಿ ಯುವತಿಕ ಕಿಡ್ನಪ್ ಯತ್ನ| ಯುವತಿ ವಿರೋಧಿಸಿದಾಗ ಕೊಂದೇ ಬಿಟ್ರು| ರಾಷ್ಟ್ರ ರಾಜಧಾನಿಯಲ್ಲಿ ಬೆಚ್ಚಿ ಬೀಳಿಸುವ ಪ್ರಕರಣ
ನವದೆಹಲಿ(ಅ.27): ರಾಷ್ಟ್ರ ರಾಜದಾನಿ ದೆಹಲಿಯ ಫರೀದಾಬಾದ್‌ನಲ್ಲಿ ಯುವತಿಕ ಕಿಡ್ನಪ್ ಹಾಗೂ ಗುಂಡು ಹೊಡೆದು ಕೊಲೆಗೈದ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.
ಹೌದು ಇಲ್ಲಿನ ವಲ್ಲಭಗಢದಲ್ಲಿ ಸೋಮವಾರ ಸಂಜೆ ಯುವತಿಯೊಬ್ಬಳು ಪರೀಕ್ಷೆ ಬರೆದು ಮರಳುತ್ತಿದ್ದಳು. ಹೀಗಿರುವಾಗಳೆ ಇಬ್ಬರು ಯುವಕರು ಗನ್ ತೋರಿಸಿ ಆಕೆಯನ್ನು ಕಿಡ್ನಾಪ್ ಮಾಡಲು ಮುಂದಾಗಿದ್ದಾರೆ. ಯುವತಿ ಈ ವೇಳೆ ಪ್ರತಿಭಟಿಸಿದಾಗ ಆಕೆಯನ್ನು ಶೂಟ್ ಮಾಡಿದ್ದಾರೆ. ಗುಂಡೇಟು ತಗುಲಿದ ಯುವತಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
ಲಭ್ಯವಾದ ಮಾಹಿತಿ ಅನ್ವಯ ಯುವತಿ ಇಲ್ಲಿನ ಅಗರ್‌ವಾಲ್ ಕಾಲೇಜಿನಲ್ಲಿ ಬಿ. ಕಾಂ ಕಲಿಯುತ್ತಿದ್ದಳು, ಹೀಗಿರುವಾಗ ಆಕೆ ಪರೀಕ್ಷೆ ಬರೆದು ಮನೆಗೆ ಮರಳುತ್ತಿದ್ದಳು. ಈ ಸಂದರ್ಭದಲ್ಲಿ ಆರೋಪಿಗಳಾದ ತೌಶಿಫ್ ಹಾಗೂ ರೆಹಾನ್ ಆಕೆಯನ್ನು ಕಿಡ್ನಾಪ್ ಮಾಡಲು ಮುಂದಾಗಿದ್ದಾರೆ. ಆದರೆ ಈ ವೇಳೆ ಯುವತಿ ವಿರೋಧಿಸಿದ್ದಾಳೆ. ಹೀಗಾಗಿ ಆರೋಪಿಗಳು ಆಕೆಯನ್ನು ಸೂಟ್ ಮಾಡಿದ್ದಾರೆ. ಗಂಭೀರವಾಗಿ ಗಾಯಗೊಂಡ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
ಪೊಲೀಸರು ಆರೋಪಿ ತೌಶಿಫ್‌ನನ್ನು ಬಂಧಿಸಿದ್ದಾರೆ. 2018 ರಲ್ಲೂ ಈತ ಯುವತಿಯೊಬ್ಬಳನ್ನು ಅಪಹರಿಸಿದ್ದ, ಈ ಬಗ್ಗೆ ಪ್ರಕರಣವೂ ದಾಖಲಾಗಿತ್ತು. ಸದ್ಯ ಈ ಇಡೀ ಪ್ರಕರಣವನ್ನು ಕ್ರೈಂ ಬ್ರಾಂಚ್‌ಗೆ ವರ್ಗಾಯಿಸಲಾಗಿದೆ.