ನಿಮ್ಮ ಋಣ ಯಾವತ್ತೂ ಮರೆಯೋಕಾಗಲ್ಲ: ಡೆತ್‍ನೋಟ್ ಬರೆದಿಟ್ಟು ನದಿಗೆ ಜಿಗಿದ ಯುವತಿ

By Suvarna News  |  First Published Dec 27, 2019, 8:45 PM IST

ಸ್ಕೂಟಿಯಲ್ಲಿ ಬಂದ ಯುವತಿ ಡೆತ್ ನೋಟ್ ಸೇತುವೆ ಮೇಲೆ ಡೆತ್ ನೋಟ್ ಇಟ್ಟು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಯಾರು..? ಎಲ್ಲಿ..? ಮುಂದಿದೆ ನೋಡಿ ಮಾಹಿತಿ


ಬಾಗಲಕೋಟೆ, [ಡಿ.27]: ಡೆತ್ ನೋಟ್ ಬರೆದಿಟ್ಟು ಯುವತಿಯೊಬ್ಬಳು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಬೀಳಗಿ ತಾಲೂಕಿನ ಘಟಪ್ರಭಾ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಅನಗವಾಡಿ ಸೇತುವೆ ಬಳಿ ನಡೆದಿದೆ.

ಗಾಯತ್ರಿ ಮೃತ ಯುವತಿ. ಯುವತಿ ನೋಂದಣಿ ಇಲ್ಲದ ಸ್ಕೂಟಿಯಲ್ಲಿ ಬಂದು ಸೇತುವೆ ಮೇಲಿಂದ ನದಿಗೆ ಹಾರಲು ಯತ್ನಿಸಿದ್ದಾಳೆ.  ಇದನ್ನು ನೋಡಿ ಜನರು ಗಾಬರಿಗೊಂಡು ಆಕೆಯನ್ನು ತಡೆಯಲು ಓಡೋಡಿ ಬಂದಿದ್ದಾರೆ. ಆದರೆ ಜನರು ಬರುವಷ್ಟರಲ್ಲಿ ಯುವತಿ ನದಿಗೆ ಹಾರಿದ್ದಾಳೆ

Tap to resize

Latest Videos

ಬಳ್ಳಾರಿ: ಚಲಿಸುವ ಬಸ್ ಹಿಂಬದಿ ಚಕ್ರಕ್ಕೆ ತಲೆಕೊಟ್ಟ, ವಿಡಿಯೋ

ಸ್ಥಳದಲ್ಲಿ ಯುವತಿ ಬರೆದಿಟ್ಟಿರುವ ಡೆತ್‍ನೋಟ್ ಪೊಲೀಸರ ಕೈಗೆ ಸಿಕ್ಕಿದೆ.  'ಹಾಯ್, ಎಲ್ಲರೂ ನನ್ನನ್ನು ದಯವಿಟ್ಟು ಕ್ಷಮಿಸಿಬಿಡಿ. ನಿಮ್ಮ ಋಣವನ್ನು ಯಾವತ್ತೂ ಮರೆಯೋಕಾಗಲ್ಲ, ನನಗೆ ಬದುಕಲು ಆಗುತ್ತಿಲ್ಲ. ಕ್ಷಮಿಸಿ, ನನ್ನ ಸಾವಿಗೆ ನಾನೇ ಕಾರಣ. ಇಂತಿ ನಿಮ್ಮ ಪ್ರೀತಿಯ ಗಾಯತ್ರಿ' ಎಂದು ಯುವತಿ ಡೆತ್‍ನೋಟ್‍ನಲ್ಲಿ ಬರೆದಿದ್ದಾಳೆ.

ಯುವತಿ ಮೂಲತಃ ಎಲ್ಲಿಯವಳು? ಏಕೆ ಆತ್ಮಹತ್ಯೆಗೆ  ಮಾಡಿಕೋಂಡಿದ್ದಾಳೆ? ಎನ್ನುವ ಮಾಹಿತಿ ತಿಳಿದು ಬಂದಿಲ್ಲ. ಮಾಹಿತಿ ತಿಳಿದು ಸ್ಥಳಕ್ಕೆ ಬೀಳಗಿ ಪೊಲೀಸರು ಬಂದು ಯುವತಿಯ ಮೃತದೇಹಕ್ಕಾಗಿ ಶೋಧಕಾರ್ಯ ನಡೆಸಿದ್ದಾರೆ.

click me!