
ಪಾಲಕರು ಸದಾ ಮಕ್ಕಳ ಸುಖ – ಸಂತೋಷ ಬಯಸ್ತಾರೆ. ತಮಗೆ ಎಷ್ಟೇ ಕಷ್ಟ ಬಂದ್ರೂ ಅದನ್ನು ಸಹಿಸಿಕೊಂಡು ಮಕ್ಕಳಿಗೆ ಸರ್ವಸ್ವ ದಾನ ಮಾಡ್ತಾರೆ. ಆದ್ರೆ ಕೆಲ ಮಕ್ಕಳು, ಪಾಲಕರು ಮಾಡಿದ ಕೆಲ್ಸ ಮರೆತು ಮನುಷ್ಯ ಕುಲ ತಲೆತಗ್ಗಿಸುವಂತೆ ಮಾಡ್ತಾರೆ. ಇದಕ್ಕೆ ಈಗ ವರದಿಯಾಗಿರುವ ಘಟನೆ ಕೂಡ ಉತ್ತಮ ನಿದರ್ಶನ.
ಈ ಘಟನೆ ನಡೆದಿರುವುದು ಯುನೈಟೆಡ್ ಅರಬ್ ಎಮಿರೇಟ್ಸ್ನ ಶಾರ್ಜಾದಲ್ಲಿ. ಗಲ್ಫ್ ನ್ಯೂಸ್ ವರದಿಯ ಪ್ರಕಾರ, ಮಹಿಳೆಯೊಬ್ಬಳು ತನ್ನ ಮಗಳಿಗೆ ಮನೆಯನ್ನು ಗಿಫ್ಟ್ ನೀಡಿದ್ದಾಳೆ. ಆದ್ರೆ ಮಗಳು, ತಾಯಿಯನ್ನೇ ಮನೆಯಿಂದ ಹೊರ ಹಾಕಿದ್ದಾಳೆ. ಮಹಿಳೆಗೆ ಗಂಡು ಮಕ್ಕಳಿದ್ದರು. ವರೆಲ್ಲರಿಗೂ ಮದುವೆಯಾಗಿದ್ದು, ತಮ್ಮ ಕುಟುಂಬಗಳೊಂದಿಗೆ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಆದರೆ ಮಹಿಳೆಯ ಕಿರಿಯ ಮಗಳು ಅವಿವಾಹಿತಳು.
ತಾಯಿಗೆ ಈ ಮಗಳ ಮೇಲೆ ವಿಶೇಷ ಪ್ರೀತಿ ಇತ್ತು. ಆಕೆಯ ಭವಿಷ್ಯ ಚೆನ್ನಾಗಿರಬೇಕು, ಮುಂದೆ ವಾಸಿಸಲು ಮನೆಯಿಲ್ಲದೆ ಯಾವುದೇ ಸಮಸ್ಯೆ ಎದುರಾಗಬಾರದು ಎಂದು ತಾಯಿ ಬಯಸಿದ್ದಳು. ಇದೇ ಕಾರಣಕ್ಕೆ ತಮ್ಮ ಮನೆಯ ಸಂಪೂರ್ಣ ಕಾನೂನುಬದ್ಧ ಮಾಲೀಕತ್ವವನ್ನೇ ಮಗಳ ಹೆಸರಿಗೆ ವರ್ಗಾಯಿಸಿದ್ದರು.
ಮಗಳ ಭವಿಷ್ಯ ಸುರಕ್ಷಿತವಾಗಿರಲಿ ಎಂದು ತಾಯಿ ಯಾವ ಮನೆಯನ್ನು ಆಕೆಯ ಹೆಸರಿಗೆ ಮಾಡಿದ್ದರೋ, ಅದೇ ಮನೆ ಕೊನೆಗೆ ತಾಯಿಗೆ ಸಂಕಷ್ಟದ ತಾಣವಾಯಿತು. ಮನೆಯ ಮಾಲೀಕತ್ವ ತನ್ನ ಹೆಸರಿಗೆ ಬಂದ ನಂತರ ಮಗಳು ತಾಯಿಯನ್ನೇ ಮನೆಯಿಂದ ಹೊರಹಾಕಿದ್ದಾಳೆ. ತನ್ನ ಜೀವನಪೂರ್ತಿ ಸಂಪಾದಿಸಿದ ಆಸ್ತಿಯನ್ನು ಮಗಳ ಹೆಸರಿಗೆ ಮಾಡಿದ್ದ ತಾಯಿ, ಕೊನೆಗೆ ತಾನೇ ಮನೆ ಕಳೆದುಕೊಂಡು ಬೀದಿಗೆ ಬರುವ ಪರಿಸ್ಥಿತಿ ಎದುರಿಸಿದ್ದಾರೆ.
ಇದಾದ ಬಳಿಕ ತಾಯಿ ತನ್ನ ಗಂಡು ಮಕ್ಕಳ ಸಹಾಯ ಕೇಳಿದ್ದಾರೆ. ಸಹೋದರರು ತಮ್ಮ ತಂಗಿಯೊಂದಿಗೆ ಮಾತನಾಡಿ, ತಾಯಿಗೆ ಮತ್ತೆ ಮನೆಯಲ್ಲಿ ವಾಸಿಸಲು ಅವಕಾಶ ಮಾಡಿಕೊಡಬಹುದು ಎಂದು ಅವರು ನಿರೀಕ್ಷಿಸಿದ್ದರು. ಆದರೆ ಇಲ್ಲಿಯೂ ತಾಯಿಗೆ ನಿರಾಸೆಯಾಗಿದೆ. ಮನೆ ಮಗಳ ಹೆಸರಿಗೆ ಮಾಡಿದ್ದು ತಾಯಿಯ ಸ್ವಂತ ನಿರ್ಧಾರವಾಗಿತ್ತು. ಹೀಗಾಗಿ ಅದರ ಪರಿಣಾಮವನ್ನೂ ಅವರೇ ಎದುರಿಸಬೇಕು ಎಂದು ಮಕ್ಕಳು ಹೇಳಿದ್ದಾರೆ ಎನ್ನಲಾಗಿದೆ.
ಈ ಘಟನೆ ಆಸ್ತಿಯನ್ನು ಮಕ್ಕಳ ಹೆಸರಿಗೆ ವರ್ಗಾಯಿಸುವಾಗ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ಚರ್ಚೆ ಹುಟ್ಟುಹಾಕಿದೆ. ಕಾನೂನು ಸಲಹೆಗಾರರ ಪ್ರಕಾರ, ಪೋಷಕರು ತಮ್ಮ ಆಸ್ತಿಯನ್ನು ಮಕ್ಕಳ ಹೆಸರಿಗೆ ಮಾಡುವ ಮೊದಲು ಅದರ ಕಾನೂನು ಪರಿಣಾಮಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕು. ಮನೆ ಮಕ್ಕಳ ಹೆಸರಿಗೆ ವರ್ಗಾಯಿಸಿದರೂ ತಾವು ಜೀವನಪೂರ್ತಿ ಅದೇ ಮನೆಯಲ್ಲಿ ವಾಸಿಸಲು ಬಯಸಿದರೆ, ತಮ್ಮ ವಾಸದ ಹಕ್ಕಿಗೆ ಕಾನೂನುಬದ್ಧ ರಕ್ಷಣೆ ಇರುವಂತೆ ಮುಂಚಿತವಾಗಿಯೇ ವ್ಯವಸ್ಥೆ ಮಾಡಿಕೊಳ್ಳಬೇಕು. ಇದಕ್ಕಾಗಿ ಆಸ್ತಿ ವರ್ಗಾವಣೆ ಮಾಡುವ ಮೊದಲು ವಕೀಲರ ಸಲಹೆ ಪಡೆಯುವುದು ಮುಖ್ಯ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ