ವಿದ್ಯುತ್ ಕಂಬವನ್ನು ಹತ್ತಿ ದುರಸ್ತಿ ಕಾರ್ಯವನ್ನು ಮಾಡುತ್ತಿದ್ದ ವೇಳೆ ವಿದ್ಯುತ್ ಶಾಕ್ ಉಂಟಾಗಿ ಜೆಸ್ಕಾಂ ಲೈನ್‌ಮನ್ ಕಂಬದ ಮೇಲೆಯೇ ಸಾವನ್ನಪ್ಪಿದ ದುರ್ಘಟನೆ ನಡೆದಿದೆ.
ರಾಯಚೂರು (ಜೂ.04): ವಿದ್ಯುತ್ ಕಂಬವನ್ನು ಹತ್ತಿ ದುರಸ್ತಿ ಕಾರ್ಯವನ್ನು ಮಾಡುತ್ತಿದ್ದ ವೇಳೆ ವಿದ್ಯುತ್ ಶಾಕ್ ಉಂಟಾಗಿ ಜೆಸ್ಕಾಂ ಲೈನ್‌ಮನ್ ಕಂಬದ ಮೇಲೆಯೇ ಸಾವನ್ನಪ್ಪಿದ ದುರ್ಘಟನೆ ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಆಲದಮರ ತಾಂಡದಲ್ಲಿ ಭಾನುವಾರ ನಡೆದಿದೆ.
ಇನ್ನು ವಿದ್ಯುತ್ ಲೈನ್ ದುರಸ್ತಿಗಾಗಿ ಏಣಿಯನ್ನು ಇಟ್ಟುಕೊಂಡು ಕಂಬವನ್ನು ಹತ್ತಿ, ಲೈನ್ ಮ್ಯಾನ್ ಉರಸ್ತಿ ಕಾರ್ಯವನ್ನು ಮಾಡುತ್ತಿದ್ದರು. ಕಂಬವನ್ನು ಹತ್ತುವ ವೇಳೆ ವಿದ್ಯುತ್ ಸರಬರಾಜು ಸ್ಥಗಿತ ಮಾಡಲಾಗಿತ್ತು. ಆದರೆ, ದುರಸ್ತಿ ಮಾಡುತ್ತಿದ್ದ ವೇಳೆ ಏಕಾಏಕಿ ವಿದ್ಯುತ್ ಸರಬರಾಜು ಮಾಡಲಾಗಿದ್ದು, ಕಂಬದ ಮೇಲೆಯೇ ಶಾಕ್ ಹೊಡೆದು ಲೈನ್‌ಮ್ಯಾನ್ ದುರಂತವಾಗಿ ಸಾವನ್ನಪ್ಪಿದ್ದಾರೆ. ಲೈನ್ ಮ್ಯಾನ್ ಸಾವು (Line Man death) ನೋಡಿದ ಸ್ಥಳೀಯರು ಜೆಸ್ಕಾಂ ಇಂಜಿನಿಯರ್ ಗೆ (GESCOM Engineer) ಫೋನ್ ಮಾಡಿದ್ದಾರೆ. ಸುಮಾರು ಗಂಟೆಗಳಾದರೂ ಜೆಸ್ಕಾಂ ಸಿಬ್ಬಂದಿ ಬಂದು ಲೈನ್‌ಮ್ಯಾನ್ ಮೃತದೇಹವನ್ನೂ ಕೆಳಗಿಳಸದೇ ನಿರ್ಲಕ್ಷ್ಯ ತೋರಿದ್ದಾರೆ.
ಕುಟುಂಬ ಸಮೇತ ವಿಶ್ವೇಶ್ವರಯ್ಯ ನಾಲೆಗೆ ಬಿದ್ದ ಕಾರು: ಪ್ರಾಣ ಉಳಿದಿದ್ದೇ ದೊಡ್ಡ ಪವಾಡ
ಜೆಸ್ಕಾಂ ಇಂಜಿನಿಯರ್ ಉಡಾಫೆ ವರ್ತನೆ: ಇನ್ನು ಭಾನುವಾರ ಆದ್ದರಿಂದ ರಜೆಯ ಮೂಡ್‌ನಲ್ಲಿದ್ದ ಜೆಸ್ಕಾಂ ಇಂಜಿನಿಯರ್ ಘಟನಾ ಸ್ಥಳಕ್ಕೆ ಬರಲು ಗಂಟೆಗಟ್ಟಲೆ ವಿಳಂಬ ಮಾಡಿದ್ದಾರೆ. ಸ್ಥಳಕ್ಕೆ ಬಂದ ಇಂಜಿನಿಯರ್ ಲೈನ್‌ಮ್ಯಾನ್ ಸಾವನ್ನಪ್ಪಿದ್ದರೂ ಉಡಾಫೆ ಮಾತುಗಳು ಆಡಿದ್ದಾರೆ. ಇದರಿಂದ ಆಕ್ರೋಶಗೊಂಡ ಸ್ಥಳೀಯರು ಇಂಜಿನಿಯರ್ ಮೇಲೆ ಹಲ್ಲೆಗೆ ಮುಂದಾಗಿದ್ದರು. ಇನ್ನು ಘಟನೆಕೈ ಮೀರಿ ಹೋಗುವುದನ್ನು ಗಮನಿಸಿದ ದೇವದುರ್ಗ ಠಾಣೆ ಪೊಲೀಸರು (Devadurga Police station) ಕೂಡಲೇ ಮಧ್ಯೆ ಪ್ರವೇಶ ಮಾಡಿ ಜೆಸ್ಕಾಂ ಇಂಜಿನಿಯರ್ ನನ್ನ ಬಚಾವ್ ಮಾಡಿದ್ದಾರೆ.
ಶಾಸಕರು ಸ್ಥಳಕ್ಕೆ ಬರುವಂತೆ ಸ್ಥಳೀಯರ ಪಟ್ಟು: ಇತ್ತ ಘಟನೆ ನಡೆದು ನಾಲ್ಕೈದು ಘಂಟೆಯಾದರೂ ಶವವನ್ನ ಕೆಳಗೆ ಇಳಿಸದ ಹಿನ್ನೆಲೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿರೂಪಾಕ್ಷಿ (28 ) ಮೃತ ಲೈನ್‌ಮನ್ ಆಗಿದ್ದಾರೆ. ಕರೆಂಟ್ ಬಂದ್ ಮಾಡಿ ವಿದ್ಯುತ್ ಸಮಸ್ಯೆ ಸರಿಪಡಿಸಲು ಕಂಬ ಹತ್ತಿದ್ದರು. ಆದರೆ, ಈ ವೇಳೆ ಯಾವುದೇ ಮಾಹಿತಿ ಇಲ್ಲದೇ ಕರೆಂಟ್ ಹರಿಬಿಟ್ಟಿದ್ದಕ್ಕೆ ದುರ್ಘಟನೆ ನಡೆದಿದೆ. ಜೂಟಮರಡಿ ಜೆಸ್ಕಾಂ ಉಪ ಕೇಂದ್ರಯಲ್ಲಿ ಕೆಲಸ ಮಾಡುತ್ತಿದ್ದ ವಿರೂಪಾಕ್ಷಿ ಸಾವಿನಿಂದ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಜೆಸ್ಕಾಂ ಕಿರಿಯ ಅಭಿಯಂತರ ಮೇಲೆ ಜನ ಆಕ್ರೋಶ ವ್ಯಕ್ತಪಡಿಸಿದರು. ಇನ್ನೂ ಸಿರವಾರ- ದೇವದುರ್ಗ ರಸ್ತೆ (Sirivara - Devadurga Road) ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ಕೂಡಲೇ ಸ್ಥಳಕ್ಕೆ ದೇವದುರ್ಗ ಶಾಸಕ ಕರೆಮ್ಮ. ಜಿ. ನಾಯಕ (MLA Karemma G Nayaka) ಬರಬೇಕು ಎಂದು ಪಟ್ಟು ಹಿಡಿದು ರಸ್ತೆ ಮೇಲೆ ಟೈರ್ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ವೀರ್ ಸಾವರ್ಕರ್ ಕ್ಷಮಾಪಣಾ ಪತ್ರದ ಸತ್ಯ ಬಹಿರಂಗಪಡಿಸಿದ ಸಾಹಿತಿ ಎಸ್.ಎಲ್. ಭೈರಪ್ಪ
ಪತಿ ಕಣ್ಣೆದುರೇ ಪತ್ನಿಯನ್ನು ಬಲಿ ತೆಗೆದುಕೊಂಡ ಕೆಎಸ್‌ಆರ್‌ಟಿಸಿ ಬಸ್!: ಬೆಂಗಳೂರು (ಜೂ.4): ಬೆಂಗಳೂರಿನ ಮೆಜೆಸ್ಟಿಕ್ ನ ಸಂಗೊಳ್ಳಿ ರಾಯಣ್ಣ ಬ್ರಿಡ್ಜ್ ಬಳಿ KSRTC ಬಸ್ ಹರಿದು ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿರುವ ಭೀಕರ ಘಟನೆ ನಡೆದಿದೆ. ಲತಾ ಎಂಬುವವರು ಮೃತಪಟ್ಟ ದುದೈವಿಯಾಗಿದ್ದಾರೆ. ಅಪಘಾತದ ಬಸ್ ಚಿಕ್ಕಬಳ್ಳಾಪುರದ ಚಿಂತಾಮಣಿ ಡಿಪೋಗೆ ಸೇರಿದ್ದು ಎಂದು ತಿಳಿದುಬಂದಿದ್ದು,ಬಸ್ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಹಿಳೆಯ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಅಪಘಾತದ ವೇಳೆ ಮೃತ ಲತಾ ತಲೆಗೆ ಗಂಭೀರ ಗಾಯವಾಗಿದೆ. ಉಪ್ಪಾರಪೇಟೆ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಬಸ್ ಬೆಂಗಳೂರಿನ ಮೆಜೆಸ್ಟಿಕ್ ನಿಂದ ಚಿಂತಾಮಣಿ ಕಡೆ ತೆರಳ್ತಿತ್ತು. ಮೃತ ಮಹಿಳೆ, ಮತ್ತು ಪತಿ ಒಂದೇ ಬೈಕ್ ನಲ್ಲಿ ಬಟ್ಟೆ ಅಂಗಡಿಗೆ ಶಾಪಿಂಗ್ ಗಾಗಿ ತೆರಳುತ್ತಿದ್ದರು. ಮತ್ತೊಂದು ಬೈಕ್ ನಲ್ಲಿ ಅವರ ಪುತ್ರಿ ಕೂಡ ತೆರಳುತ್ತಿದ್ದರು. ಈ ವೇಳೆ ಸಂಗೊಳ್ಳಿ ರಾಯಣ್ಣ ಮೇಲ್ಸೇತುವೆ ಇಳಿಯುವ ವೇಳೆ ವೇಗವಾಗಿ ಬಸ್ ಬಲಕ್ಕೆ ಬಂದಿದೆ. ಬಸ್ ಹಿಂಬದಿ ದ್ವಿಚಕ್ರ ವಾಹನಕ್ಕೆ ಟಚ್ ಆಗಿ ಇಬ್ಬರು ರಸ್ತೆಗೆ ಬಿದ್ದಿದ್ದಾರೆ. ಈ ವೇಳೆ ಪತಿಯ ಜೊತೆಗೆ ಹಿಂಬದಿ ಕುಳಿತಿದ್ದ ಲತಾ ಮೇಲೆ ಬಸ್ ಹರಿದಿದೆ. ಈ ವೇಳೆ ಸ್ಥಳದಲ್ಲೇ ಲತಾ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.