ಯಾದಗಿರಿಯಲ್ಲಿ ಗಾಂಜಾ ಮಿಶ್ರಿತ ಚಾಕೋಲೆಟ್ ಮಾರಾಟ!

By Gowthami K  |  First Published Aug 16, 2022, 9:28 PM IST

ಯಾದಗಿರಿ ಜಿಲ್ಲೆಯಲ್ಲಿ ಗಾಂಜಾ ಮಾರಾಟ ಮಾಫಿಯಾದ ಜೊತೆ ಗಾಂಜಾ ಮಿಶ್ರಿತ ಚಾಕೋಲೆಟ್ ಮಾಫಿಯಾ ಎಗ್ಗಿಲ್ಲದೇ ಸಾಗಿದೆ. ಸುರಪುರನಲ್ಲಿ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ ಗಾಂಜಾ ಗಮ್ಮತ್ತಿನ ಚಾಕೋಲೆಟ್ ಜಪ್ತಿ ಮಾಡಿದ್ದಾರೆ. ‌


ವರದಿ: ಪರಶುರಾಮ ಐಕೂರ್ ಏಷ್ಯಾನೆಟ್ ಸುವರ್ಣ ನ್ಯೂಸ್

ಯಾದಗಿರಿ (ಆ.16): ಜಿಲ್ಲೆಯಲ್ಲಿ ಗಾಂಜಾ ಮಾರಾಟ ಮಾಫಿಯಾದ ಜೊತೆ ಗಾಂಜಾ ಮಿಶ್ರಿತ ಚಾಕೋಲೆಟ್ ಮಾಫಿಯಾ ಎಗ್ಗಿಲ್ಲದೇ ಸಾಗಿದೆ. ಯಾದಗಿರಿ ಜಿಲ್ಲೆಯಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಕಡೆ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ ಗಾಂಜಾ ಮಾರಾಟಗಾರರಿಗೆ ಅಬಕಾರಿ ಅಧಿಕಾರಿಗಳು ಜೈಲಿಗಟ್ಟಿದ್ದಾರೆ. ಗಾಂಜಾ ಮಿಶ್ರಿತ ಚಾಕೊಲೇಟ್ ದಂಧೆ ಜಿಲ್ಲೆಯಲ್ಲಿ ಇತ್ತೀಚೆಗೆ ಬೆಳಕಿಗೆ ಬಂದಿದ್ದು, ಈ ದಂಧೆಕೋರರು ಕೇವಲ ನಿರ್ಧಿಷ್ಟ ಗ್ರಾಹಕರಿಗೆ ಈ ಗಾಂಜಾ ಮಿಶ್ರಿತ ಚಾಕೊಲೆಟ್ ನ್ನು ನೀಡುತ್ತಿದ್ದರು. ಇದರ ಸಂಪೂರ್ಣ ಮಾಹಿತಿ ಮೆರೆಗೆ ಅಬಕಾರಿ ಅಧಿಕಾರಿಗಳು ಗಾಂಜಾ ಮಿಶ್ರಿತ ಚಾಕೊಲೇಟ್ ಅಡ್ಡೆಯ ಮೇಲೆ ದಾಳಿ ಮಾಡಿದ್ದಾರೆ. ಮಾರಾಟ ಮಾಡಿದವರು ಅಬಕಾರಿ ಅಧಿಕಾರಿಗಳ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಹಾಕಿಕೊಳ್ಳುತ್ತೆವೆಂದು ಅಕ್ರಮ ದಂಧೆಕೊರರು ಗಾಂಜಾ ಮಿಶ್ರಿತ ಚಾಕೋಲೆಟ್ ಮಾರಾಟ ಅಕ್ರಮ ದಂಧೆಗೆ ಮುಂದಾಗಿದ್ದು, ಅಬಕಾರಿ ಅಧಿಕಾರಿಗಳು ಎರಡನೇ ಬಾರಿ ಮತ್ತೊಂದೆಡೆ ದಾಳಿ ನಡೆಸಿ ಅಕ್ರಮವಾಗಿ ಗಾಂಜಾ ಮಿಶ್ರಿತ ಚಾಕೋಲೆಟ್ ಮಾರಾಟ ಮಾಡುತ್ತಿದ್ದ ಅಂಗಡಿ ಮೇಲೆ ದಾಳಿ ನಡೆಸಿ ಗಾಂಜಾ ಮಿಶ್ರಿತ ಚಾಕೋಲೆಟ್ ಜಪ್ತಿ ಮಾಡಿದ್ದಾರೆ.

Latest Videos

undefined

ಮಧ್ಯ ಪ್ರದೇಶದಿಂದ ಚಾಕೋಲೆಟ್ ಖರೀದಿ!
ಮಧ್ಯ ಪ್ರದೇಶದಿಂದ ಗಾಂಜಾ ಮಿಶ್ರಿತ ಚಾಕೊಲೇಟ್  ಖರೀದಿಸಿ  ಚಾಕೋಲೆಟ್ ಮಾರಾಟ ಮಾಡುತ್ತಿದ್ದ ಜಾಲವನ್ನು ಅಬಕಾರಿ ಅಧಿಕಾರಿಗಳು ಪತ್ತೆ ಹಚ್ಚಿ ಆರೋಪಿಯನ್ನು ಜೈಲಿಗಟ್ಟಿದ್ದಾರೆ. ಯಾದಗಿರಿ ಜಿಲ್ಲೆಯ ಸುರಪುರ ಪಟ್ಟಣದಲ್ಲಿ ಗಾಂಜಾ ಮಿಶ್ರಿತ ಚಾಕೋಲೆಟ್ ಮಾರಾಟ ಮಾಫಿಯಾ ಎಗ್ಗಿಲ್ಲದೇ ನಡೆಯುತ್ತಿದೆ. ಸುರಪುರ ಪಟ್ಟಣದ  ಜಲಾಲ್ ಮೊಹಲ್ಲಾ ಬಡಾವಣೆಯಲ್ಲಿ  ಮಧ್ಯ ಪ್ರದೇಶದ ಮೂಲದ ಕನ್ಹಯ್ಯಲಾಲ್ ಟವಾಣಿ ಎಂಬ ಖದೀಮನು ಅಂಗಡಿಯಲ್ಲಿ  ಗಾಂಜಾ ಮಿಶ್ರಿತ ಚಾಕೋಲೆಟ್ ಮಾರಾಟ ಮಾಡುತ್ತಿದ್ದನು. ಮಧ್ಯ ಪ್ರದೇಶದಿಂದ ಚಾಕೋಲೆಟ್ ಖರೀದಿಸಿ ಅಂಗಡಿಯಲ್ಲಿ ಮಾರಾಟ ಮಾಡುತ್ತಿದ್ದನು. ಮಸ್ತನಾ ಮುನಕ್ಕಾ ಮುದ್ರಿತ ಚಾಕೋಲೆಟ್ ಗಳ ಮಾರಾಟ ಮಾಡಿ  ಹಣ ಸಂಪಾದನೆ ಮಾಡುತ್ತಿದ್ದನು. ನಿರ್ದಿಷ್ಟ ಗ್ರಾಹಕರಿಗೆ ಮಾತ್ರ ಚಾಕೋಲೆಟ್ ಮಾರಾಟ ಮಾಡುತ್ತಿದ್ದನು.

ಮದ್ಯಸೇವನೆ ಮಾಡದವರಿಂದ ಖರೀದಿ!
ಮದ್ಯ ವೇಸನಿಗಳು ಮದ್ಯ ಸೇವಿಸಿ ನಶೆ ಲೋಕದಲ್ಲಿ ಜಾರುತ್ತಾರೆ. ಆದರೆ, ಕೆಲ ಜನ ನಶೆ ಆದರೆ, ಮನೆಯಲ್ಲಿ ಗೊತ್ತಾಗುತ್ತದೆಂದು ಚಾಕೋಲೆಟ್ ಗಳ ಮೊರೆ ಹೋಗಿದ್ದಾರೆ. ಚಾಕೋಲೆಟ್ ಸೇವನೆ ಮಾಡಿ ರಾತ್ರಿ ನಶೆಯಲ್ಲಿ  ತೆಲಾಡಲು  ನಿರ್ದಿಷ್ಟ ಗ್ರಾಹಕರು ಚಾಕೋಲೆಟ್ ವ್ಯಸನಿಗಳಾಗಿದ್ದರು ಎನ್ನಲಾಗಿದೆ. ಖಚೀತ ಮಾಹಿತಿ ಮೆರೆಗೆ ಅಬಕಾರಿ ಡಿವೈಎಸ್ಪಿ ಮಲ್ಲಿಕಾರ್ಜುನರೆಡ್ಡಿ, ಅಬಕಾರಿ ನಿರೀಕ್ಷಕ ಕೇದರನಾಥ್  ನೇತೃತ್ವದಲ್ಲಿ  ಅಬಕಾರಿ ಅಧಿಕಾರಿಗಳ ತಂಡ ದಾಳಿ ನಡೆಸಿ 46 ಕೆಜಿಯ ,7620 ಚಾಕೋಲೆಟ್ ಜಪ್ತಿ ಮಾಡಿ, ಆರೋಪಿ ಕನ್ಹಯ್ಯಲಾಲ್ ಅವರನ್ನು  ಬಂಧಿಸಲಾಗಿದೆ. ಆರೋಪಿಯು 50 ರಿಂದ 500 ರೂಪಾಯಿ ವರಗೆ ಚಾಕೋಲೆಟ್ ಮಾರಾಟ ಮಾಡುತ್ತಿದ್ದನು.ನಿರ್ದಿಷ್ಟ ಗ್ರಾಹಕರಿಗೆ ಮಾತ್ರ ಗಾಂಜಾ ಮಿಶ್ರಿತ ಚಾಕೋಲೆಟ್ ಮಾಡುತ್ತಿದ್ದನು.ಆರೋಪಿ ವಿರುದ್ಧ  ಪ್ರಕರಣ ದಾಖಲಿಸಲಾಗಿದೆ.

ಯಾದಗಿರಿಯಲ್ಲಿ ಎರಡನೇ ಚಾಕೊಲೇಟ್ ಕೇಸ್ ಪತ್ತೆ
ಇದೇ ತಿಂಗಳು ಅಬಕಾರಿ ಅಧಿಕಾರಿಗಳು ಶಹಾಪುರ ಪಟ್ಟಣದ ಎರಡು ಪಾನ್ ಶಾಪ್ ಮೇಲೆ ದಾಳಿ ನಡೆಸಿ ಗಾಂಜಾ ಮಿಶ್ರಿತ ಚಾಕೋಲೇಟ್ ಜಪ್ತಿ ಮಾಡಿ ಆರೋಪಿಗಳಿಬ್ಬರನ್ನು ಬಂಧಿಸಿದ್ದರು. ಈಗ ಮತ್ತೆ ಸುರಪುರನಲ್ಲಿ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ ಗಾಂಜಾ ಗಮ್ಮತ್ತಿನ ಚಾಕೋಲೆಟ್ ಜಪ್ತಿ ಮಾಡಿದ್ದಾರೆ. ‌

click me!