ಬೆತ್ತಲೆ ವಿಡಿಯೋ ಇಡ್ಕೊಂಡು ಬೆಂಗ್ಳೂರಿನ ಉದ್ಯೋಗಿಗೆ ಆನ್‌ಲೈನ್ ‘ಗೆಳತಿ’ ಬ್ಲ್ಯಾಕ್‌ಮೇಲ್‌: 23 ಲಕ್ಷ ಹರೋಹರ!

By BK Ashwin  |  First Published May 25, 2023, 7:38 PM IST

ಆನ್‌ಲೈನ್ ಗೇಮ್‌ ಆದ ‘ಕಾಕ್ ಫೈಟ್’ ಆಡುತ್ತಿರುವಾಗ ಪರಿಚಯವಾದ ಮಹಿಳೆಯೊಂದಿಗೆ ಸ್ನೇಹ ಬೆಳೆಸಿದ್ದು 28 ವರ್ಷದ ಖಾಸಗಿ ಸಂಸ್ಥೆಯ ಉದ್ಯೋಗಿ 23 ಲಕ್ಷ ರೂ. ಮೋಸ ಹೋಗಿದ್ದಾನೆ. 


ಬೆಂಗಳೂರು (ಮೇ 25,2023): ಆನ್‌ಲೈನ್‌ ಮೂಲಕ ಅಥವಾ ಸೈಬರ್‌ ಮೂಲಕ ವಂಚನೆ ಪ್ರಕರನಗಳು ಇತ್ತೀಚೆಗೆ ಹೆಚ್ಚಾಗುತ್ತಲೇ ಇದೆ. ಇಂತಹ ಪ್ರಕರಣಗಳ ಬಗ್ಗೆ ಪೊಲೀಸರು ಹಾಗೂ ಮಾಧ್ಯಮಗಳು ಜನರಿಗೆ ಎಚ್ಚರಿಕೆ ಕೊಟ್ಟರೂ ಬಹುತೇಕರು ಎಚ್ಚೆತ್ತುಕೊಳ್ತಿಲ್ಲ. ಈ ಹಿನ್ನೆಲೆ ವಂಚನೆ ಪ್ರಕರಣಗಳು ನಡೆಯುತ್ತಲೇ ಇವೆ. ಇದೇ ರೀತಿ, ಬೆಂಗಳೂರಿನ ವ್ಯಕ್ತಿಗೆ ಈಗ ಆನ್‌ಲೈನ್‌ ಗೇಮ್‌ ವೇಳೆ ಪರಿಚಯವಾದ ಮಹಿಳೆಯೊಬ್ಬಳು 23 ಲಕ್ಷ ರೂ. ವಂಚಿಸಿದ್ದಾಳೆ ಎಂದು ತಿಳಿದುಬಂದಿದೆ. 

ಆನ್‌ಲೈನ್ ಗೇಮ್‌ ಆದ ‘ಕಾಕ್ ಫೈಟ್’ ಆಡುತ್ತಿರುವಾಗ ಪರಿಚಯವಾದ ಮಹಿಳೆಯೊಂದಿಗೆ ಸ್ನೇಹ ಬೆಳೆಸಿದ್ದು 28 ವರ್ಷದ ಖಾಸಗಿ ಸಂಸ್ಥೆಯ ಉದ್ಯೋಗಿಗೆ ದುಬಾರಿಯಾಗಿದೆ. ಏಕೆಂದರೆ, ಆಕೆ ಈ ಉದ್ಯೋಗಿಗೆ ಬ್ಲ್ಯಾಕ್‌ಮೇಲ್‌ ಮೂಲಕ 23 ಲಕ್ಷ ರೂ. ವಸೂಲಿ ಮಾಡಿದ್ದಾಳೆ. 

Tap to resize

Latest Videos

ಇದನ್ನು ಓದಿ: ಗರ್ಲ್‌ಫ್ರೆಂಡ್‌ ಕೊಲೆ ಮಾಡಿ ಪೀಸ್‌ ಪೀಸ್‌ ಮಾಡ್ದ: ಕೈಕಾಲು ಫ್ರಿಡ್ಜ್‌ನಲ್ಲಿ, ಡೆಡ್‌ಬಾಡಿ ಸೂಟ್‌ಕೇಸ್‌ನಲ್ಲಿಟ್ಟ ಪಾಪಿ!

ಸಂತ್ರಸ್ತ 28 ವರ್ಷದ ಖಾಸಗಿ ಸಂಸ್ಥೆಯ ಉದ್ಯೋಗಿ ಮತ್ತು ಬೆಂಗಳೂರಿನ ಕೆ.ಆರ್. ಪುರಂ ನಿವಾಸಿ ಎಂದು ತಿಳಿದುಬಂದಿದೆ. ಆತ ಸಮಯ ಸಿಕ್ಕಾಗಲೆಲ್ಲಾ ಆನ್‌ಲೈನ್ ಆಟಗಳನ್ನು ಆಡುತ್ತಿದ್ದ. ಆಗಸ್ಟ್ 2022 ರಲ್ಲಿ ಆಂಧ್ರಪ್ರದೇಶದ ವಿಶಾಖಪಟ್ಟಣಂನಿಂದ ಧನಲಕ್ಷ್ಮೀ ಎಂದು ಗುರುತಿಸಿಕೊಂಡ ಮಹಿಳೆಯೊಂದಿಗೆ ಸಂಪರ್ಕಕ್ಕೆ ಬಂದ ಎಂದು ಬೆಂಗಳೂರು ಪೊಲೀಸರಿಗೆ ನೀಡಿರೋ ದೂರಿನಲ್ಲಿ ತಿಳಿಸಲಾಗಿದೆ. 
 
ಅವರ ಈ ಸ್ನೇಹದ ಕೆಲವೇ ತಿಂಗಳುಗಳಲ್ಲಿ, ಆಕೆ ತನ್ನ ಆರ್ಥಿಕ ಸಮಸ್ಯೆಗಳನ್ನು ಹಂಚಿಕೊಂಡಳು ಮತ್ತು ಕುಮಾರ್‌ನಿಂದ 20,000 ರೂ. ಸಾಲವೆಂದು ಪಡೆದಿದ್ದಳು. ನಂತರ, ಆಕೆ ವಾಟ್ಸಾಪ್‌ನಲ್ಲಿ ವಿಡಿಯೋ ಕಾಲ್‌ ಮಾತನಾಡಿದ್ದಳು. ಈ ವೇಳೆ ಅವಳು ಅರೆಬೆತ್ತಲೆಯಾಗಿ ಕಾಣಿಸಿಕೊಂಡಿದ್ದಳು, ನಂತರ ಬೆಂಗಳೂರಿನ ಉದ್ಯೋಗಿ ಸಹ ತನ್ನ ಬಟ್ಟೆ ತೆಗೆದು ಬೆತ್ತಲೆಯಾಘಿದ್ದಾನೆ. ನಂತರ, ಈ ವಿಡಿಯೋ ರೆಕಾರ್ಡ್‌ ಮಾಡಿದ ಮಹಿಳೆ ಈ ವಿಡಿಯೋ ಲೀಕ್‌ ಮಾಡಿ ಆತ್ಮಹತ್ಯೆ ಮಾಡಿಕೊಳ್ಳೋದಾಗಿ ಬೆದರಿಕೆ ಹಾಕಿದ್ದಾಳೆ ಎಂದು ಪೊಲೀಸರಿಗೆ ನೀಡಿರೋ ದೂರಿನಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಸಹೋದರಿ ಮೇಲೆ ಅತ್ಯಾಚಾರ ನಡೆಸಿದ ಕಾಮುಕನ ಮೇಲೆ ಚಾಕು ಹಾಕಿದ ಯುವಕ

ನಂತರ ಆ ಮಹಿಳೆ ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡಲು ಆರಂಭಿಸಿದಳು.  ಒಂದು ವೇಳೆ ಆಕೆ ಸೂಸೈಡ್‌ ಮಾಡ್ಕೊಂಡ್ರೆ ತಾನು ಬಂಧನಕ್ಕೊಳಗಾಗುತ್ತೇನೆ ಎಂದು ಭಯಪಟ್ಟ ಖಾಸಗಿ ಉದ್ಯೋಗಿ ಆಕೆ ಕೇಳಿದಾಗೆಲ್ಲ ಹಣ ಕೊಟ್ಟಿದ್ದ ಎಂದು ತಿಳಿದುಬಂದಿದೆ. ಆಕೆ ನೀಡಿದ ಎರಡು ಬ್ಯಾಂಕ್ ಖಾತೆಗಳಿಗೆ ಒಟ್ಟಾರೆ 23 ಲಕ್ಷ ರೂ. ಹಣ ಹಾಕಿದ್ದ ಎಂದು ತಿಳಿದುಬಂದಿದೆ.

ಇನ್ನು, ಆ ಮಹಿಳೆಗೆ ಹಣ ಪಾವತಿಸಲು ಪರಿಚಿತ ವ್ಯಕ್ತಿಗಳಿಂದ ಆತ ಸಾಲ ಪಡೆದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ನಂತರ, ಅವರು ಪೊಲೀಸರನ್ನು ಸಂಪರ್ಕಿಸಲು ಸೂಚಿಸಿದಾಗ ಸಂತ್ರಸ್ತ ವ್ಯಕ್ತಿ ಮೇ 17 ರಂದು ಬೆಂಗಳೂರಿನ ವೈಟ್‌ಫೀಲ್ಡ್ ಸಿಇಎನ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ. 

ಇದನ್ನೂ ಓದಿ: ಛೀ ಪಾಪಿ: ಅಪ್ರಾಪ್ತ ಮಲಮಗಳ ಮೇಲೆ ಹಲವು ಬಾರಿ ಅತ್ಯಾಚಾರ; ಕೊನೆಗೂ ಜೈಲು ಪಾಲಾದ!

click me!