ಪಬ್‌ಜಿ ಬ್ಯಾನ್‌ಗೆ 3 ದಿನ ಮುನ್ನ ಆತ್ಮಹತ್ಯೆ ಮಾಡಿಕೊಂಡ ಹಾವೇರಿ ಹುಡುಗ!

Published : Sep 10, 2020, 09:18 PM IST
ಪಬ್‌ಜಿ ಬ್ಯಾನ್‌ಗೆ 3 ದಿನ ಮುನ್ನ ಆತ್ಮಹತ್ಯೆ ಮಾಡಿಕೊಂಡ ಹಾವೇರಿ ಹುಡುಗ!

ಸಾರಾಂಶ

ಪಬ್ ಜಿ ಆಡಲು ಇಂಟರ್ನೆಟ್ ಇಲ್ಲ ಎಂದು ಆತ್ಮಹತ್ಯೆ/ ಹುಚ್ಚಾಟ ಬ್ಯಾನ್ ಆಗುವುದಕ್ಕೆ ಮೂರು ದಿನ ಮುನ್ನ ಆತ್ಮಹತ್ಯೆ/  ಹಾವೇರಿ ತಾಲೂಕಿನ ಸಂಗೂರ ಗ್ರಾಮದ ತೇಜಸ್ ಶಿಡ್ಲಾಪುರ (17) ಆತ್ಮಹತ್ಯೆ ಮಾಡಿಕೊಂಡಿರುವ ಯುವಕ

ಹಾವೇರಿ(ಸೆ. 10)  ಪಬ್ ಜಿ ಆಡಬೇಡ ಎಂದಿದ್ದಕ್ಕೆ ಆತ್ಮಹತ್ಯೆಗೆ ಯತ್ನಿಸಿದ್ದ ಯುವಕ ಚಿಕಿತ್ಸೆ ಫಲಿಸದೇ ಸಾವು ಕಂಡಿದ್ದಾನೆ. ಹಾವೇರಿ ತಾಲೂಕಿನ ಸಂಗೂರ ಗ್ರಾಮದ ತೇಜಸ್ ಶಿಡ್ಲಾಪುರ (17) ಆತ್ಮಹತ್ಯೆ ಮಾಡಿಕೊಂಡಿರುವ ಯುವಕ. 

ಪಬ್ ಜಿ ಆಡಬೇಡ ಎಂದು ಪೋಷಕರು ಸಾಕಷ್ಟು ಸಲ ಬುದ್ದಿ ಹೇಳಿದ್ದರೂ ಯುವಕ ಕೇಳಿರಲಿಲ್ಲ. ಆದ್ದರಿಂದ ಪೋಷಕರು ಮೊಬೈಲ್ ಗೆ ಇಂಟರ್ನೆಟ್ ಹಾಕಿಸಿರಲಿಲ್ಲ ಎನ್ನಲಾಗಿದೆ. ಇದರಿಂದ ಬೇಸತ್ತ ಯುವಕ ತೋಟದ ಮನೆಗೆ ಹೋಗಿ ಬೆಳೆಗಳಿಗೆ ಸಿಂಪಡಿಸಲು ಇಟ್ಟಿದ್ದ ರಾಸಾಯನಿಕ ಔಷಧ ಸೇವಿಸಿ ಅತ್ಮಹತ್ಯೆಗೆ ಯತ್ನಿಸಿದ್ದ. 

ಕೊನೆಗೂ ಪಬ್‌ಜಿ ಬ್ಯಾನ್‌ ಆಗಲು ಏನು ಕಾರಣ

ಘಟನೆ ನಡೆದ ವಿಷಯ ತಿಳಿದ  ಪೋಷಕರು ಆತನನ್ನು ಆ. 31 ರಂದು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ  ಚಿಕಿತ್ಸೆ ಫಲಿಸದರೆ ಯುವಕ ಗುರುವಾರ ಮೃತಪಟ್ಟಿದ್ದಾನೆ.

ಕೇಂದ್ರ ಸರ್ಕಾರ ಸೆ.  2 ರಂದು ಪಬ್ ಜಿ ಸೇರಿದಂತೆ 118  ಅಪ್ಲಿಕೇಶನ್ ಗಳನ್ನು ಬ್ಯಾನ್ ಮಾಡಿತ್ತು. ಅಂದರೆ ಪಬ್ ಜಿ ಬ್ಯಾನ್ ಗೂ ಮೂರು ದಿನ ಮುನ್ನ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

Pocso: 9 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿಗೆ ಗ್ರಾಮಸ್ಥರಿಂದ ಧರ್ಮದೇಟು!
ಸಿನಿಮೀಯ ಶೈಲಿಯಲ್ಲಿ ಹಿಮಾಲಯದ ಮೈನಸ್ ತಾಪಮಾನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ಸ್ಮಗ್ಲರ್‌ ಬಂಧನ