ಯುವತಿ ಬ್ಯಾಂಕ್ ಖಾತೆಯಿಂದ ಮತ್ತೆ 68 ಸಾವಿರ, 28 ಸಾವಿರ, 1.36 ಲಕ್ಷ, 2.98 ಲಕ್ಷ ಹಣವನ್ನು ವಂಚಕರು ಸೂಚಿಸಿದಂತೆ ವರ್ಗಾಯಿಸಿದ್ದು, ಒಟ್ಟು 5.43 ಲಕ್ಷ ಹಣ ಕಳೆದುಕೊಂಡಿದ್ದಾಳೆ.
ಚನ್ನಪಟ್ಟಣ(ಅ.21): ವರ್ಕ್ ಫ್ರಂ ಹೋಂ ಹೆಸರಿನಲ್ಲಿ ಯುವತಿಯೊಬ್ಬಳಿಗೆ 5.43 ಲಕ್ಷ ರು. ವಂಚಿಸಿರುವ ಘಟನೆ ತಾಲೂಕಿನ ದೇವರಹೊಸಹಳ್ಳಿಯಲ್ಲಿ ನಡೆದಿದೆ.
ಗ್ರಾಮದ ಡಿ.ಸಿ.ಲಾವಣ್ಯ(28) ಹಣ ಕಳೆದುಕೊಂಡವರು. ಎಂಜಿನಿಯರಿಂಗ್ ಪೂರೈಸಿದ್ದ ಯುವತಿಗೆ 4 ದಿನಗಳ ಹಿಂದೆ ವಾಟ್ಸಾಪ್‌ನಲ್ಲಿ ವರ್ಕ್ ಫ್ರಂ ಹೋಂ ಅವಕಾಶವಿದೆ. ಕೆಲವು ಟಾಸ್ಕ್‌ಗಳನ್ನು ಪೂರೈಸಿದರೆ ಹಣ ಬರುತ್ತದೆ ಎಂಬ ಸಂದೇಶ ಬಂದಿದೆ. ಇದನ್ನು ನಂಬಿದ ಯುವತಿ ಸಂದೇಶದಲ್ಲಿ ಸೂಚಿಸಿದ್ದ ವೆಬ್‌ಸೈಟ್‌ಗೆ ಲಾಗಿನ್ ಆಗಿದ್ದಾಳೆ.
ರಾಮನಗರ: ಸ್ನೇಹಿತರ ಜತೆ ಕುಡಿಯಲು ಹೋಗಿದ್ದ ವೇಳೆ ರೌಡಿ ಶೀಟರ್ ಬರ್ಬರ ಹತ್ಯೆ
ಆಗ ಯುವತಿಗೆ ಕೆಲವು ಟಾಸ್ಕ್‌ಗಳನ್ನು ಖರೀದಿಸುವಂತೆ ಸೂಚಿಸಿದ್ದು, ವಂಚಕರು ಸೂಚಿಸಿದ ವಿವಿಧ ಯುಪಿಐ ಐಡಿಗೆ ಒಂದು ಸಾವಿರ, 5 ಸಾವಿರ, 7 ಸಾವಿರದಂತೆ ಲಾವಣ್ಯ ಮೂರು ಬಾರಿ ಹಣ ವರ್ಗಾವಣೆ ಮಾಡಿದ್ದಾಳೆ. ಆ ನಂತರ ತಮ್ಮ ಹಣವನ್ನು ಮರಳಿ ಪಡೆಯಲು ಮತ್ತೆ ಹಣ ಹೂಡಿಕೆ ಮಾಡುವಂತೆ ಸೂಚಿಸಿದ್ದು, ಅದರಂತೆ ಯುವತಿ ಇನ್ನೊಂದು ಬ್ಯಾಂಕ್ ಖಾತೆಯಿಂದ ಮತ್ತೆ 68 ಸಾವಿರ, 28 ಸಾವಿರ, 1.36 ಲಕ್ಷ, 2.98 ಲಕ್ಷ ಹಣವನ್ನು ವಂಚಕರು ಸೂಚಿಸಿದಂತೆ ವರ್ಗಾಯಿಸಿದ್ದು, ಒಟ್ಟು 5.43 ಲಕ್ಷ ಹಣವನ್ನು ಕಳೆದುಕೊಂಡಿದ್ದಾಳೆ. ರಾಮನಗರದ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.