Asianet Suvarna News Asianet Suvarna News

ರಾಮನಗರ: ಸ್ನೇಹಿತರ ಜತೆ ಕುಡಿಯಲು ಹೋಗಿದ್ದ ವೇಳೆ ರೌಡಿ ಶೀಟರ್‌ ಬರ್ಬರ ಹತ್ಯೆ

ಲಾಂಗ್‌ನಿಂದ ಕೊಚ್ಚಿ ಲೋಕೇಶ್‌ನನ್ನ ಕೊಲೆ ಮಾಡಲಾಗಿದೆ. ಸ್ನೇಹಿತರ ಜೊತೆ ಕುಡಿಯಲು ಹೋಗಿದ್ದ ವೇಳೆ ಹತ್ಯೆಗೈಯಲಾಗಿದೆ. 

Rowdysheeter Brutal Killed in Ramanagara grg
Author
First Published Oct 15, 2023, 9:30 AM IST

ರಾಮನಗರ(ಅ.15):  ರೌಡಿ ಶೀಟರ್‌ನೊಬ್ಬನನ್ನ ದುಷ್ಕರ್ಮಿಗಳು ಬರ್ಬರ ಹತ್ಯೆಗೈದ ಘಟನೆ ರಾಮನಗರ ತಾಲೂಕಿನ ಕೈಲಾಂಚ ಹೋಬಳಿಯ ಕೆರೆಮೇಗಳದೊಡ್ಡಿ ಗ್ರಾಮದಲ್ಲಿ ನಿನ್ನೆ(ಶನಿವಾರ) ನಡೆದಿದೆ. ಲೋಕೇಶ್ (38) ಎಂಬಾತನೇ ಮೃತ ರೌಡಿ ಶೀಟರ್‌ನಾಗಿದ್ದಾನೆ. 

ಕೊಲೆಯಾದ ರೌಡಿಶೀಟರ್‌ ಲೋಕೇಶ್ ಕೆರೆಮೇಗಳ ದೊಡ್ಡಿ ಗ್ರಾಮದವನಾಗಿದ್ದಾನೆ. ಲಾಂಗ್‌ನಿಂದ ಕೊಚ್ಚಿ ಲೋಕೇಶ್‌ನನ್ನ ಕೊಲೆ ಮಾಡಲಾಗಿದೆ. ಸ್ನೇಹಿತರ ಜೊತೆ ಕುಡಿಯಲು ಹೋಗಿದ್ದ ವೇಳೆ ಹತ್ಯೆಗೈಯಲಾಗಿದೆ. 

ಮಲಗಿದ್ದಲ್ಲೇ ಹೆಣವಾದ ಅಣ್ಣ-ತಂಗಿ: ಸೂಸೈಡ್ ಅಂದ ಗಂಡ.. ಕೊಲೆ ಎಂದ ಮಗ..!

ಘಟನಾ ಸ್ಥಳಕ್ಕೆ ಎಸ್ಪಿ ಕಾರ್ತಿಕ್ ರೆಡ್ಡಿ, ಎಎಸ್ಪಿ ಸುರೇಶ್, ಡಿವೈಎಸ್ಪಿ ದಿನಕರ್ ಶೆಟ್ಟಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ರಾಮನಗರ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Follow Us:
Download App:
  • android
  • ios