ಕೆವೈಸಿ ನೆಪದಲ್ಲಿ ಲಕ್ಷಾಂತರ ರೂಪಾಯಿ ವಂಚನೆ : ಬ್ಯಾಂಕ್ ಮ್ಯಾನೇಜರ್ ಅಂತಾ ಖದೀಮರು ನಿಮಗೂ ಕರೆ ಮಾಡ್ತಾರೆ ಎಚ್ಚರ!

By Kannadaprabha News  |  First Published Mar 2, 2023, 1:01 PM IST

ಬ್ಯಾಂಕ್‌ ಖಾತೆಯ ಕೆವೈಸಿ ಅಪ್‌ಡೇಟ್‌ ನೆಪದಲ್ಲಿ ಕೆನರಾ ಬ್ಯಾಂಕಿನ ಇಬ್ಬರು ಖಾತೆದಾರರಿಗೆ ಲಕ್ಷಾಂತರ ರು. ವಂಚಿಸಲಾಗಿದ್ದು, ಸೆನ್‌ ಅಪರಾಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಉಡುಪಿ (ಮಾ.2) :  ಬ್ಯಾಂಕ್‌ ಖಾತೆಯ ಕೆವೈಸಿ ಅಪ್‌ಡೇಟ್‌ ನೆಪದಲ್ಲಿ ಕೆನರಾ ಬ್ಯಾಂಕಿನ ಇಬ್ಬರು ಖಾತೆದಾರರಿಗೆ ಲಕ್ಷಾಂತರ ರು. ವಂಚಿಸಲಾಗಿದ್ದು, ಸೆನ್‌ ಅಪರಾಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇಲ್ಲಿನ ಗುಂಡಬೈಲಿ(Gundabail)ನ ಭಾಸ್ಕರ ಸೇರಿಗಾರ(Bhaskar serigara) (60) ಕೆನರಾ ಬ್ಯಾಂಕಿCanara Bankನಲ್ಲಿ ಖಾತೆ ಹೊಂದಿದ್ದು, ಅವರಿಗೆ ಯಾರೋ ವ್ಯಕ್ತಿ ಕರೆ ಮಾಡಿ, ತಾನು ಬ್ಯಾಂಕ್‌ ಅಧಿಕಾರಿ, ಕೂಡಲೇ ನಿಮ್ಮ ಖಾತೆಯ ಕೆವೈಸಿ. ಅಪ್ಡೇಟ್‌(KYC update) ಮಾಡಬೇಕು ಇಲ್ಲವಾದಲ್ಲಿ ಖಾತೆ ಬ್ಲಾಕ್‌ ಆಗುತ್ತದೆ ಎಂದು ಹೇಳಿ, ನಂಬಿಸಿದ್ದ. ಅವರ ಆಧಾರ್‌ ಸಂಖ್ಯೆ(Adhar card), ಬ್ಯಾಂಕ್‌ ವಿವರ, ಎ.ಟಿ.ಎಂ. ವಿವರ ಹಾಗೂ ಒ.ಟಿ.ಪಿ. ಗಳನ್ನು ಪಡೆದುಕೊಂಡರು. ನಂತರ ಅವರ ಖಾತೆಯಿಂದ 99 ಸಾವಿರ ರು.ಗಳನ್ನು ಆನ್‌ಲೈನ್‌ ಮುಖೇನ ವರ್ಗಾವಣೆ ಮಾಡಿ, ಮೋಸ ಮಾಡಲಾಗಿದೆ.

Tap to resize

Latest Videos

ಬ್ಯಾಂಕ್ ಖಾತೆ ತೆರೆಯಲು ವಿಡಿಯೋ ಕೆವೈಸಿ; ಯಾವೆಲ್ಲ ಬ್ಯಾಂಕ್ ಗಳಲ್ಲಿ ಲಭ್ಯ?

ಇಲ್ಲಿನ ಕುತ್ಪಾಡಿಯ ವಿಜಯ ಸುಚಿತ್ರ (73) ಎಂಬವರಿಗೂ ಅಪರಿಚಿತ ವ್ಯಕ್ತಿ ಕರೆ ಮಾಡಿ ಮೇಲಿನಂತೆಯೇ, ಸುಮಾರು 1.94 ಲಕ್ಷ ರು. ವರ್ಗಾವಣೆ ಮಾಡಿ ವಂಚಿಸಿದ್ದಾರೆ.

ತಾಯಿ-ಮಗು ಆತ್ಮಹತ್ಯೆ; ಬದುಕುಳಿದ ಮತ್ತೊಬ್ಬ ಪುತ್ರಿ

ಮಂಗಳೂರು: ನಗರದ ಕೊಡಿಯಾಲಗುತ್ತು(Kodiyalaguttu) ಎಂಬಲ್ಲಿ ಬುಧವಾರ ಮಹಿಳೆಯೊಬ್ಬರು ತನ್ನಿಬ್ಬರು ಮಕ್ಕಳ ಜತೆ ಆತ್ಮಹತ್ಯೆಗೆ ಯತ್ನಿಸಿದ್ದು, ಆಕೆ ಮತ್ತು ಒಂದು ಮಗು ಮೃತಪಟ್ಟಿದ್ದರೆ, ಇನ್ನೊಬ್ಬ ಮಗು ಬದುಕುಳಿದ ಘಟನೆ ನಡೆದಿದೆ.

ಕೊಡಿಯಾಲಗುತ್ತಿನ ನಿವಾಸಿ ವಿಜಯಾ (33) ಮತ್ತು ಸುಮಖಾ (4) ಮೃತರು. ಆಕೆಯ 12 ವರ್ಷದ ಮತ್ತೊಬ್ಬ ಮಗಳು ಬದುಕುಳಿದಿದ್ದಾಳೆ. ಆಕೆಯ ಕುತ್ತಿಗೆಗೆ ಗಾಯವಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಬುಧವಾರ ಮಧ್ಯಾಹ್ನ ಮನೆಯ ಮೇಲಂತಸ್ತಿನ ಕೊಠಡಿಯಲ್ಲಿ ವಿಜಯಾ(Vijayaa suicide) ಅವರು ತನ್ನಿಬ್ಬರು ಮಕ್ಕಳಿಗೆ ನೇಣು ಬಿಗಿದಿದ್ದಾರೆ. ತಕ್ಷಣ ತಾನೂ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಹಿರಿಯ ಪುತ್ರಿಯ ಕಾಲಿಗೆ ಟಿವಿಯ ಟೇಬಲ್‌ ತಾಗಿದ್ದರಿಂದ ಆಕೆ ಬದುಕುಳಿದಿದ್ದಾಳೆ ಎಂದು ತಿಳಿದುಬಂದಿದೆ.

DOMESTIC VIOLENCE : ದ.ಕ.ದಲ್ಲಿ ಕೌಟುಂಬಿಕ ದೌರ್ಜನ್ಯ ಪ್ರಕರಣಗಳ ಹೆಚ್ಚಳ: ಪ್ರಮೀಳಾ ನಾಯ್ಡು

ವಿಜಯಾ ಅವರ ಪತಿ ಕಳೆದ ತಿಂಗಳು ಫೆ.8ರಂದು ವಿಷ ಸೇವನೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದರಿಂದ ಖಿನ್ನರಾದ ವಿಜಯಾ ಸಾವಿನ ಬಾಗಿಲು ತಟ್ಟುವ ನಿರ್ಧಾರ ಮಾಡಿರುವುದಾಗಿ ಪೊಲೀಸರು ಶಂಕಿಸಿದ್ದಾರೆ.

click me!