ರ‍್ಯಾಗಿಂಗ್ ಮಾಡಿದ್ದ ನಾಲ್ವರು ವಿದ್ಯಾರ್ಥಿನಿಯರಿಗೆ 5 ವರ್ಷ ಶಿಕ್ಷೆ

By Suvarna News  |  First Published Feb 6, 2021, 11:23 PM IST

ಕಾಲೇಜಿನಲ್ಲಿ ರ‍್ಯಾಗಿಂಗ್/ ಹಿಂಸೆಗೊಳಗಾದ ಯುವತಿ ಸುಸೈಡ್/ ಅಪರಾಧಿಗಳಿಗೆ ಶಿಕ್ಷೆ/  ಮಹತ್ವದ ತೀರ್ಪು ನೀಡಿದ ಮಧ್ಯ ಪ್ರದೇಶ ನ್ಯಾಯಾಲಯ


ಭೋಪಾಲ್ (ಫೆ. 06) ಭೋಪಾಲ್‌ನ ಫಾರ್ಮಸಿ ಕಾಲೇಜೊಂದರಲ್ಲಿ ತಮ್ಮ ಸಹಪಾಠಿ ವಿದ್ಯಾರ್ಥಿನಿಯ ಆತ್ಮಹತ್ಯೆಗೆ ಕಾರಣಕರ್ತರಾದ ನಾಲ್ಕು ಮಹಿಳೆಯರಿಗೆ ಮಧ್ಯಪ್ರದೇಶದ ನ್ಯಾಯಾಲಯ  ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

18 ವರ್ಷದ ಯುವತಿಯನ್ನು ಕಾಲೇಜಿನಲ್ಲಿ ಸೀನಿಯರ್ ಆಗಿದ್ದ ಆರೋಪಿಗಳು  ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸಿಸಿದ್ದಾರೆ ಎಂದು ಪ್ರಾಸಿಕ್ಯೂಷನ್ ವಾದ ಮಾಡಿತ್ತು. ರ್ಯಾಗಿಂಗ್ ನಡೆಸಿದ್ದರು ಎಂಬ ಆರೋಪ  ಕೇಳಿ ಬಂದಿತ್ತು.   ಆಗಸ್ಟ್ 6, 2013 ರಂದು ಭೋಪಾಲ್‌ ನ ಪಿಎನ್‌ಟಿ ಕ್ರಾಸಿಂಗ್ ಬಳಿಯಿರುವ ಮನೆಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಯುವತಿ ನಾಲ್ವರ ಹೆಸರನ್ನು ಬರೆದು ಇಟ್ಟಿದ್ದಳು.

Latest Videos

undefined

ಪ್ರತಿ ಬಂಗಲೆಯಲ್ಲೂ ಲೈವ್ ಪೋರ್ನ್ ಶೂಟಿಂಗ್, ಮಹಿಳೆಯರೇ ಕಿಂಗ್ ಪಿನ್!

ಅನಿತಾ ಶರ್ಮಾ ಆತ್ಮಹತ್ಯೆಗೆ ಶರಣಾಗಿದ್ದಳು. ಕಾಲೇಜಿನಲ್ಲಿ ಕಿರುಕುಳ ನೀಡಲಾಗಿದೆ ಎಂಬ ಆರೋಪಕ್ಕೆ ಸಾಕ್ಷಿಗಳು ಸಿಕ್ಕಿದ್ದವು. 

ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಅಮಿತ್ ರಂಜನ್ ಸಮಾಧಿಯಾ ಅವರ ನ್ಯಾಯಾಲಯವು ದೇವಂಶಿ ಶರ್ಮಾ, ಕೀರ್ತಿ ಗೌರ್, ದೀಪ್ತಿ ಸೋಲಂಕಿ ಮತ್ತು ನಿಧಿ ಮ್ಯಾಗ್ರೆ ಎಂಬ ನಾಲ್ವರು ಮಹಿಳೆಯರನ್ನು ತಪ್ಪಿತಸ್ಥರೆಂದು ಪರಿಗಣಿಸಿ ಐದು ವರ್ಷಗಳ ಜೈಲು ಶಿಕ್ಷೆ ಮತ್ತು ತಲಾ  8000 ರೂ . ದಂಡ ವಿಧಿಸಿದೆ.

 

click me!