ಕೊಡಗಿನಲ್ಲಿ ಅಪ್ರಾಪ್ತ ಹಿಂದೂ ಹುಡುಗಿಯರ ಕಿಡ್ನಾಪ್‌, ನಾಲ್ವರ ಗ್ಯಾಂಗ್ ಅರೆಸ್ಟ್!

By Suvarna News  |  First Published Sep 15, 2023, 10:54 AM IST

ಕೊಡಗಿನಲ್ಲಿ ಬೆಚ್ಚಿಬೀಳಿಸುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಅಪ್ರಾಪ್ತ ಹಿಂದೂ ಹುಡುಗಿಯರನ್ನು ಯುವಕರ ಗ್ಯಾಂಗ್‌ ಕಿಡ್ನಾಪ್ ಮಾಡಿದ ಆರೋಪ ಕೇಳಿಬಂದಿದೆ.


ಕೊಡಗು (ಸೆ.15): ಕೊಡಗಿನಲ್ಲಿ ಬೆಚ್ಚಿಬೀಳಿಸುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಅಪ್ರಾಪ್ತ ಹಿಂದೂ ಹುಡುಗಿಯರನ್ನುಯುವಕರ ಗ್ಯಾಂಗ್‌ ಕಿಡ್ನಾಪ್ ಮಾಡಿದ ಆರೋಪ ಕೇಳಿಬಂದಿದೆ. ಈ ಸಬಂಧ ನಾಲ್ವರು  ಯುವಕರನ್ನು ಅರೆಸ್ಟ್ ಮಾಡಲಾಗಿದೆ. ನಿಜಾಮಿಲ್, ಸಮದ್, ತಪ್ಸಿರ್ ಹಾಗೂ ಇರ್ಫಾನ್ ಬಂಧಿತ ಆರೋಪಿಗಳಾಗಿದ್ದು, ಪೈಯಿಂಟಿಂಗ್ ಮತ್ತಿತರೆ ಕೆಲಸ ಮಾಡಿಕೊಂಡಿದ್ದರು ಎಂದು ತಿಳಿದುಬಂದಿದೆ.

ಮನೆ ಕೆಲ್ಸದ ಜವಾಬ್ದಾರಿ ಕಂಪ್ಲೀಟ್ ಹೆಂಡ್ತೀದೆ ಅನ್ನೋ ಮನಸ್ಥಿತಿಯಿದ್ರೆ ಬಿಟ್ಬಿಡಿ; 

Tap to resize

Latest Videos

undefined

ಪಿಯುಸಿ ಓದುತ್ತಿದ್ದ ಹದಿಹರೆಯದ ಹಿಂದೂ ಯುವತಿಯರನ್ನು ಕೊಡಗಿನಿಂದ ಮೈಸೂರಿಗೆ ಯುವಕರು ಅಪಹರಿಸಿ ಕರೆದೊಯ್ಯುತ್ತಿದ್ದರು ಎಂದು ತಿಳಿದುಬಂದಿದೆ. ಈ ವೇಳೆ ಸ್ಥಳೀಯರು ವಿಷಯ ಗೊತ್ತಾಗಿ ಫೋನ್ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಎಲ್ಲ ದಾಖಲೆಗಳಿಗೂ ಜನನ ಪ್ರಮಾಣಪತ್ರವೇ, ವಿವಾಹ ನೋಂದಣಿಗೂ ಕೂಡ, ಮುಂದಿನ

ತಕ್ಷಣ ಎಚ್ಚೆತ್ತ ಪೊಲೀಸರು ಚೇಸಿಂಗ್ ಮಾಡಲು ಮುಂದಾದಾಗ ಕುಶಾಲನಗರದಲ್ಲಿ ಬಾಲಕಿಯರನ್ನು ಇಳಿಸಿದ ಯುವಕರು  ಮೈಸೂರಿಗೆ ಎಸ್ಕೇಪ್ ಆಗಿದ್ದರು. ನಂತರ ಮೈಸೂರಿನ ಮಂಡಿ ಮೊಹಲ್ಲಾದಿಂದ ನಾಲ್ವರನ್ನು ಪೊಲೀಸರು ಬಂಧನ ಮಾಡಿದ್ದಾರೆ. ಸದ್ಯ ನಾಲ್ವರು ಆರೋಪಿಗಳ ಆರೋಗ್ಯ ತಪಾಸಣೆಗೆ  ಪೊಲೀಸರು ಮಡಿಕೇರಿ ಆಸ್ಪತ್ರೆಗೆ ಕರೆತಂದಿದ್ದು, ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

click me!