ಬೆಂಗಳೂರು: ಯುವತಿಯ ಮೇಲೆ ನಾಲ್ವರು ಕಾಮುಕರಿಂದ ಗ್ಯಾಂಗ್‌ ರೇಪ್‌, ಬೆಚ್ಚಿಬಿದ್ದ ಸಿಲಿಕಾನ್‌ ಸಿಟಿ..!

By Girish Goudar  |  First Published Mar 31, 2023, 10:29 AM IST

ಚಲಿಸುತ್ತಿದ್ದ ಕಾರಿನಲ್ಲಿ ರಾತ್ರಿಯಿಡೀ ಯುವತಿಗೆ ಮೇಲೆ ಅತ್ಯಾಚಾರ ಎಸಗಿ ಅಟ್ಟಹಾಸ ಮೆರೆದ ಕಾಮುಕರು. 


ಬೆಂಗಳೂರು(ಮಾ.31): ಸಿಲಿಕಾನ್ ಸಿಟಿಯನ್ನೇ ಬೆಚ್ಚಿ ಬೀಳಿಸೋ ಗ್ಯಾಂಗ್ ರೇಪ್‌ ನಗರದಲ್ಲಿ ನಡೆದಿದೆ. ನಗರದ ಹೃದಯ ಭಾಗ ಕೋರಮಂಗಲದಲ್ಲಿ ಅಮಾನವೀಯ ಘಟನೆ ಮಾ.25 ರಂದು ನಡೆದಿದೆ. ನಾಲ್ವರು ಕಿರಾತಕರು ಕಾರಿನಲ್ಲೇ ಯುವತಿಯ ಮೇಲೆ ಗ್ಯಾಂಗ್ ರೇಪ್ ಮಾಡಿದ್ದಾರೆ. ಚಲಿಸುತ್ತಿದ್ದ ಕಾರಿನಲ್ಲಿ ರಾತ್ರಿಯಿಡೀ ಯುವತಿಗೆ ಮೇಲೆ ಅತ್ಯಾಚಾರ ಎಸಗಿ ಕಾಮುಕರು ಅಟ್ಟಹಾಸ ಮೆರೆದಿದ್ದಾರೆ.  ಘಟನೆಗೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನ ಪೊಲೀಸರು ಬಂಧಿಸಲಾಗಿದೆ. ಸತೀಶ್, ವಿಜಯ್, ಶ್ರೀಧರ್ ಹಾಗೂ ಕಿರಣ್ ಎಂಬುವರೇ ಬಂಧಿತ ಕಾಮುಕರಾಗಿದ್ದಾರೆ. 

ಸರ್ಕಾರಿ ನೌಕರರೇ ಇರುವ ನ್ಯಾಷನಲ್ ಗೇಮ್ಸ್ ವಿಲೇಜ್‌ನ‌ ಪಾರ್ಕ್‌ನಲ್ಲಿ ಸ್ನೇಹಿತನ ಜೊತೆ ಯುವತಿ ಕುಳಿತಿದ್ದಳು. ಪಾರ್ಕ್‌ನಲ್ಲಿ ಕುಳಿತಿದ್ದ ಯುವತಿಯನ್ನ ಎಳೆದೊಯ್ದ ಕಾಮುಕರು ಸಾಮೂಹಿಕ ಅತ್ಯಾಚಾರ ವೆಸಗಿದ್ದಾರೆ.  KA 01 MB 6169 ನಂಬರ್ ಮಾರುತಿ 800 ಕಾರಿನಲ್ಲಿ ಯುವತಿಯನ್ನ ಎಳೆದೊಯ್ದು ರಾತ್ರಿ 10 ಗಂಟೆಯಿಂದ ಬೆಳಗಿನ ಜಾವ 4 ಗಂಟೆವರೆಗೂ ನಿರಂತರವಾಗಿ ದೌರ್ಜನ್ಯ ಎಸಗಿದ್ದಾರೆ. 

Tap to resize

Latest Videos

ಬಾಯ್‌ಫ್ರೆಂಡನ್ನು ಮರಕ್ಕೆ ಕಟ್ಟಿ ಯುವತಿ ಮೇಲೆ ಇಬ್ಬರು ಕಾಮುಕರಿಂದ ರೇಪ್‌

ರೇಪ್ ಮಾಡಿ ಸಂತ್ರಸ್ಥ ಯುವತಿಯನ್ನ ರಸ್ತೆ ಮೇಲೆ ಬಿಟ್ಟುಹೋಗಿದ್ದಾರೆ ಕಾಮುಕರು. 25 ರ ರಾತ್ರಿ 10 ಗಂಟೆಗೆ ಸ್ನೇಹಿತನ ಜೊತೆ ಪಾರ್ಕ್‌ನಲ್ಲಿ ಯುವತಿ ಕುಳಿತಿದ್ದಳು. ಅಲ್ಲಿಗೆ ಬಂದ ನಾಲ್ವರು ಯುವಕರ ಗುಂಪು, ಯುವತಿಯ ಜೊತೆಗಿದ್ದ ಸ್ನೇಹಿತನನ್ನ ಬೆದರಿಸಿ ಕಳಿಸಿದ್ದಾರೆ. ನಂತರ ನಾಲ್ವರು ಯುವತಿ ಜೊತೆಗೆ ಜಗಳ ತೆಗೆದಿದ್ದಾರೆ, ನಂತ್ರ ಕಿಡ್ನಾಪ್ ಮಾಡಿ, ಚಲಿಸುತ್ತಿದ್ದ ಕಾರಿನಲ್ಲಿಯೇ ನಾಲ್ವರು ಅತ್ಯಾಚಾರ ಮಾಡಿದ್ದಾರೆ.  

ದೊಮ್ಮಲೂರು, ಇಂದಿರಾನಗರ, ಆನೇಕಲ್, ನೈಸ್ ರಸ್ತೆ ಸೇರಿದಂತೆ ಹಲವೆಡೆ ಸುತ್ತಾಟ ನಡೆಸಿದ್ದಾರೆ. ನಂತರ ಬೆಳಗಿನ ಜಾವ 4 ಗಂಟೆಗೆ ಯುವತಿ ಮನೆ ರಸ್ತೆಯಲ್ಲಿ ಬಿಟ್ಟು ಹೋಗಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮಾ. 26 ರಂದು ನೊಂದ ಯುವತಿ ದೂರು ನೀಡಿದ್ದಾಳೆ. ತನಿಖೆಗೆ ಇಳಿದ ಪೊಲೀಸರು ನಾಲ್ವರು ಆರೋಪಿಗಳ ಬಂಧಿಸಿದ್ದಾರೆ. 

click me!