ಮಂಗಳೂರಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ

By Girish Goudar  |  First Published Mar 31, 2023, 9:08 AM IST

ಮಂಗಳೂರಿನ ಕೆಎಸ್ ರಾವ್ ರೋಡ್ ಬಳಿ ಇರುವ ಕರುಣಾ ಲಾಡ್ಜ್‌ನಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣು. 


ಮಂಗಳೂರು(ಮಾ.31): ಒಂದೇ ಕುಟುಂಬದ ನಾಲ್ಕು ಜನ ಆತ್ಮಹತ್ಯೆ ಮಾಡಿಕೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದಲ್ಲಿ ಇಂದು(ಶುಕ್ರವಾರ) ನಡೆದಿದೆ. ದೇವೇಂದ್ರ (48),ನಿರ್ಮಲಾ(48), ಚೈತ್ರಾ(09),ಚೈತನ್ಯ (09)ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಇಬ್ಬರು ಅವಳಿ ಹೆಣ್ಣುಮಕ್ಕಳಾಗಿದ್ದಾರೆ. 

ಮಂಗಳೂರಿನ ಕೆಎಸ್ ರಾವ್ ರೋಡ್ ಬಳಿ ಇರುವ ಕರುಣಾ ಲಾಡ್ಜ್‌ನಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣಾಗಿದ್ದಾರೆ. 

Tap to resize

Latest Videos

ಮಂಡ್ಯ: ಕೌಟುಂಬಿಕ ಕಲಹಕ್ಕೆ ಬೇಸತ್ತು ದಂಪತಿ ಆತ್ಮಹತ್ಯೆಗೆ ಶರಣು

ಮೈಸೂರಿನ ವಿಜಯನಗರ ಮೂಲದ ಕುಟುಂಬ ಅಂತ ತಿಳಿದು ಬಂದಿದೆ. ಸಾಲಗಾರರ ಒತ್ತಡದಿಂದ ಕುಟುಂಬ ಆತ್ಮಹತ್ಯೆಗೆ ಶರಣಾಗಿದ್ದಾರೆ. ಡೆತ್ ನೋಟ್‌ನಲ್ಲಿ ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿರೋದಾಗಿ ಉಲ್ಲೇಖಿಸಲಾಗಿದೆ. 

ಮಾ. 27ರಂದು ಒಂದು ದಿನಕ್ಕಾಗಿ ಲಾಡ್ಜ್‌ನಲ್ಲಿ ರೂಂ ಬುಕ್ ಮಾಡಿದ್ದು ಬಳಿಕ ಎರಡು ದಿ‌ನಕ್ಕಾಗಿ ರೂಂ ವಿಸ್ತರಣೆ ಮಾಡಿದ್ದರು. ನಿನ್ನೆ ಸಂಜೆ ರೂಂ ಚೆಕ್ ಔಟ್ ಮಾಡಬೇಕಾಗಿತ್ತು. ಆದರೆ ಬಾಗಿಲು ತೆರೆಯದ ಕಾರಣ ಅನುಮಾನಗೊಂಡು ತಪಾಸಣೆ ನಡೆಸಲಾಗಿದೆ. ಇಂದು ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡಿರೋದು ಬೆಳಕಿಗೆ ಬಂದಿದೆ. ಘಟನಾ ಸ್ಥಳಕ್ಕೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಕುಲದೀಪ್ ಜೈನ್ ಭೇಟಿ ಪರಿಶೀಲನೆ ನಡೆಸಿದ್ದಾರೆ. 

click me!