ಒಂದೇ ಕುಟುಂಬದ ಐವರು ವಿಷಾಹಾರ ಸೇವನೆ ಮಾಡಿದ್ದು, ಈ ಪೈಕಿ ನಾಲ್ವರು ಸಾವನ್ನಪ್ಪಿದ್ದಾರೆ. ಉಳಿದಂತೆ, ಒಬ್ಬರ ಸ್ಥಿತಿ ಗಂಭೀರವಾಗಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.
ರಾಯಚೂರು(ಆ.02): ಒಂದೇ ಕುಟುಂಬದ ಐವರು ರಾತ್ರಿ ವೇಳೆ ವಿಷಾಹಾರ ಸೇವನೆ ಮಾಡಿದ್ದು, ತಾವು ಮಲಗಿದ್ದಲ್ಲಿಯೇ ನಾಲ್ವರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಉಳಿದಂತೆ ಒಬ್ಬ ವ್ಯಕ್ತಿ ಮಾತ್ರ ಬದುಗಿದ್ದು, ಅವರ ಸ್ಥಿತಿಯೀ ಗಂಭೀರವಾಗಿದೆ.
ರಾಯಚೂರು ಜಿಲ್ಲೆ ಸಿರವಾರ ತಾಲೂಕಿನ ಕಲ್ಲೂರು ಗ್ರಾಮದಲ್ಲಿ ಈ ದುರ್ಘಟನೆ ಶುಕ್ರವಾರ ಬೆಳಗಿನ ಜಾವ ನಡೆದಿದೆ. ಕೃಷಿ ಪ್ರಧಾನ ಕುಟುಂಬವಾಗಿರುವ ಇವರ ಕುಟುಂಬದಲ್ಲಿ 5 ಜನರು ಜೀವನ ಮಾಡುತ್ತಿದ್ದರು. ಎಲ್ಲರೂ ಒಟ್ಟಿಗೇ ಇದ್ದು ನಿನ್ನೆ ರಾತ್ರಿ ಎಂದಿನಂತೆ ಊಟ ಮಾಡಿ ಮಲಗಿದ್ದಾರೆ. ಆದರೆ, ಊಟದಲ್ಲಿ ಏನೋ ವಿಷ ಪದಾರ್ಥ ಸೇರ್ಪಡೆ ಆಗಿದೆ. ಈ ಹಿನ್ನೆಲೆಯಲ್ಲಿ ವಿಷಾಹಾರ ಸೇವಿಸಿದ ನಐದು ಜನರ ಪೈಕಿ ನಾಲ್ವರು ರಾತ್ರಿ ಮಲಗಿದ್ದ ಸ್ಥಳದಲ್ಲಿಯೇ ಒದ್ದಾಡಿ ಪ್ರಾಣ ಬಿಟ್ಟಿದ್ದಾರೆ.
ಚಿತ್ರದುರ್ಗ: ಹಾಸನ ಮೂಲದ ಮೆಡಿಕಲ್ ವಿದ್ಯಾರ್ಥಿ ನೇಣುಬಿಗಿದು ಆತ್ಮಹತ್ಯೆ!
ಇನ್ನು ಗ್ರಾಮಸ್ಥರು ಬೆಳಗ್ಗೆ ಎದ್ದು ಕೃಷಿ ಕಾರ್ಯಕ್ಕೆ ಹೋಗಲು ಬಂದು ಇವರನ್ನು ಮಾತನಾಡಿಸಿದರೆ ಯಾರೊಬ್ಬರೂ ಮೇಲೆದ್ದಿಲ್ಲ. ಈ ವೇಳೆ ಬಾಗಿಲು ತೆರೆದು ನೋಡಿದರೆ ನಾಲ್ವರು ಸತ್ತು ಬಿದ್ದಿದ್ದಾರೆ. ಇನ್ನು ಒಬ್ಬ ವ್ಯಕ್ತಿ ಸಾವಿ ಬದುಕಿನ ನಡುವೆ ಹೋರಾಡುತ್ತಿದ್ದನು. ಕೂಡಲೇ ಆತನನ್ನು ಸ್ಥಲೀಯ ಆಸ್ಪತ್ರಗೆ ರವಾನಿಸಲಾಗಿದೆ. ಆದೆ, ಅವರ ಸ್ಥಿತಿ ಗಂಭೀರವಾಗಿದೆ. ಈ ಕುಟುಂಬದಲ್ಲಿ ಗಂಡ- ಹೆಂಡತಿ ಮತ್ತು ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ.
ಮೃತರನನ್ನು ಭೀಮಣ್ಣ( 60), ಈರಮ್ಮ(57), ಮಲ್ಲೇಶ್ ( 21), ಪಾರ್ವತಿ (19) ಎಂದು ಗುರುತಿಸಲಾಗಿದೆ. ಉಳಿದಂತೆ, ಮಲ್ಲಮ್ಮ (23) ಎಂಬುವರ ಸ್ಥಿತಿ ಗಂಭೀರವಾಗಿದ್ದು ರಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸಿರವಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ರಾಯಚೂರಿನಲ್ಲಿ ಒಂದೇ ಕುಟುಂಬದ ನಾಲ್ವರು ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ, ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ಜಿಲ್ಲಾಧಿಕಾರಿ ನಿತೀಶ್,ಎಸ್ ಪಿ ಪುಟ್ಟಮಾದಯ್ಯ ಭೇಟಿ ನೀಡಿ ಘಟನೆ ಬಗ್ಗೆ ಮಾಹಿತಿ ಪಡೆದಿದ್ದಾರೆ. ಚಿಕಿತ್ಸೆ ಪಡೆಯುತ್ತಿರುವ ಮಲ್ಲಮ್ಮಳ ಆರೋಗ್ಯ ಸ್ಥಿತಿ ವಿಚಾರಣೆ ಮಾಡಿದ್ದಾರೆ. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಫುಡ್ ಫಾಯ್ಸನ್ ಹಿನ್ನೆಲೆ ಮೃತಪಟ್ಟಿರುಬ ಮಾಹಿತಿ ತಿಳಿದುಬಂದಿದೆ..
ಮದುವೆಯಾದ ಗೆಳತಿಗೆ ಸಹಕರಿಸುವಂತೆ ಕಿರುಕುಳ ಕೊಟ್ಟ ಕ್ಲಾಸ್‌ಮೇಟ್ಸ್; ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣು
ಮೃತರ ಗ್ಲುಕೋಸ್ ಲೇವಲ್ ಕಡಿಮೆ ಇತ್ತು. ಲಿವರ್ ಫಂಕ್ಷನ್ ಪ್ಯಾರಾಮೀಟರ್ ಅತೀ ಹೆಚ್ಚು ಕಂಡು ಬಂದಿದೆ. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಬಹು ಅಂಗಾಂಗ ವೈಫಲ್ಯದಿಂದ ಮೃತಪಟ್ಟಿದ್ದಾರೆ. ಸದ್ಯ ಮಲ್ಲಮ್ಮ ಅನ್ನೋರಿಗೆ ರಿಮ್ಸ್ ಆಸ್ಪತ್ರೆಯಲ್ಲಿ ಕೋಮಾ ಸ್ಥಿತಿಯಲ್ಲಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಎಫ್ ಎಸ್ ಎಲ್ ವರದಿ ಪಡೆಯಲಾಗತ್ತದೆ ಎಂದು ಜಿಲ್ಲಾಧಿಕಾರಿ ನಿತೀಶ್ ಮಾಹಿತಿ ನೀಡಿದ್ದಾರೆ.