ಕಾಲೇಜಿಗೆ ಹೋದ ನಾಲ್ವರು ವಿದ್ಯಾರ್ಥಿನಿಯರು ನಾಪತ್ತೆ!

By Santosh NaikFirst Published Jul 25, 2022, 3:11 PM IST
Highlights

ಕಾಲೇಜಿಗೆ ಹೋಗುತ್ತೇನೆ ಎಂದುಕೊಂಡು ಮನೆಯಿಂದ ತೆರಳಿದ್ದ ನಾಲ್ವರು ವಿದ್ಯಾರ್ಥಿಯರು ನಾಪತ್ತೆಯಾಗಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ. ಕಳೆದ ಮೂರು ದಿನಗಳಿಂದ ಇವರು ನಾಪತ್ತೆಯಾಗಿದ್ದಾರೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.

ರಾಯಚೂರು (ಜುಲೈ 25):  ಕಾಲೇಜಿಗೆ ಹೋಗಿ ಬರುವುದಾಗಿ ತಿಳಿಸಿ ಮನೆಯಿಂದ ಹೊರಟಿದ್ದ ನಾಲ್ವರು ವಿದ್ಯಾರ್ಥಿನಿಯರು ಕಾಣೆಯಾಗಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ. ಶನಿವಾರ ಕಾಲೇಜಿಗೆ ಹೋದ‌ ನಾಲ್ವರು ‌ವಿದ್ಯಾರ್ಥಿನಿಯರು ಕಾಣೆಯಾಗಿದ್ದಾರೆ. ಕಳೆದ ಮೂರು ದಿನಗಳಿಂದ ಇವರು ಕಾಣೆಯಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಸ್ಟೇಷನ್‌ ರಸ್ತೆಯ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಇವರಾಗಿದ್ದಾರೆ. ಇವುಗಳಲ್ಲಿ ಮೂವರು ವಿದ್ಯಾರ್ಥಿನಿಯರು ಅಪ್ರಾಪ್ತರಾಗಿದ್ದರೆ, ಒಬ್ಬಳು ವಯಸ್ಕ ಹುಡುಗಿಯಾಗಿದ್ದಾಳೆ. ಇಬ್ಬರು ವಿದ್ಯಾರ್ಥಿನಿಯರು ಶಕ್ತಿನಗರದ ನಿವಾಸಿಗಳಾಗಿದ್ದು, ಇನ್ನಿಬ್ಬರು ರಾಯಚೂರಿನವರಾಗಿದ್ದಾರೆ. ಮಕ್ಕಳು ಕಾಣೆಯಾದ ಬೆನ್ನಲ್ಲಿಯೇ ವಿದ್ಯಾರ್ಥಿನಿಯರ ಪೋಷಕರು ಮಹಿಳಾ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಮಹಿಳಾ ಠಾಣೆ ತನಿಖೆ ಆರಂಭಿಸಿದೆ. ವಿದ್ಯಾರ್ಥಿನಿಯರ ಹುಡುಕಾಟಕ್ಕಾಗಿ ಎರಡು ತಂಡ ರಚನೆ ಮಾಡಲಾಗಿದ್ದು, ಸದರಬಜಾರ ಠಾಣೆ ಪಿಎಸ್ ಐ ಹಾಗೂ ಮಹಿಳಾ ಠಾಣಾ ಪಿಎಸ್ಐ ನೇತೃತ್ವದಲ್ಲಿ ಹುಡುಕಾಟ ನಡೆಸಲಾಗುತ್ತಿದೆ. ಇದರ ನಡುವೆ ಸರ್ಕಾರಿ ಪಿಯು ಕಾಲೇಜಿಗೆ ರಾಯಚೂರು ಡಿವೈಎಸ್ ಪಿ ವೆಂಕಟೇಶ ಭೇಟಿ ನೀಡಿದ್ದಾರೆ. ಡಿವೈಎಸ್ ಪಿ ವೆಂಕಟೇಶ ಅವರೊಂದಿಗೆ ಪಿಐ ಗುಂಡುರಾವ್ ಕೂಡ ತಂಡದಲ್ಲಿದ್ದರು. ವಿದ್ಯಾರ್ಥಿನಿಯರ‌ ಪ್ರವೇಶದ ದಾಖಲಾತಿ ಹಾಗೂ ಪೋಟೋ ಸಂಗ್ರಹಣೆ ಮಾಡಿದ್ದಲ್ಲದೆ, ಕಾಲೇಜಿನ ಪ್ರಾಂಶುಪಾಲರ ಜೊತೆಗೆ ಪೊಲೀಸರು ಚರ್ಚೆ ನಡೆಸಿದ್ದಾರೆ.

ವಿದ್ಯಾರ್ಥಿನಿಯರು ಸರಿಯಾಗಿ ಕಾಲೇಜಿಗೆ ಬರುತ್ತಿರಲಿಲ್ಲ: ಪಿಯು ಕಾಲೇಜಿಗೆ ಭೇಟಿ‌ ನೀಡಿದ ಕಾಲೇಜಿನ ಕಾರ್ಯಾಧ್ಯಕ್ಷ ರವಿ ಜಲ್ದಾರ್, ವಿದ್ಯಾರ್ಥಿನಿಯರು ಸರಿಯಾಗಿ ಕಾಲೇಜಿಗೆ ಬರುತ್ತಿರಲಿಲ್ಲ. ಕಳೆದ ನಾಲ್ಕು ದಿನಗಳಿಂದ ಅವರು ಕಾಲೇಜಿಗೆ ಬಂದಿಲ್ಲ ಎಂದು ಹೇಳಿದ್ದಾರೆ. ಕಾಲೇಜಿನ ಪ್ರಾಂಶುಪಾಲರು ಹಾಗೂ ಪೊಲೀಸರ ಜೊತೆಗೆ ಅವರೂ ಚರ್ಚೆ ನಡೆಸಿದ್ದಾರೆ. ಚರ್ಚೆ ಬಳಿಕ ಕಾಲೇಜಿನ ಕಾರ್ಯಾಧ್ಯಕ್ಷ ರವಿ ಜಲ್ದಾರ್ ಈ ಮಾಹಿತಿ ನೀಡಿದ್ದಾರೆ.

ರಾಜಕೀಯ ನೆಲೆಗೆ ಆಲ್ಕೋಡ್‌ ಅವಿರತ ಶ್ರಮ

ನಮ್ಮ ‌ಕಾಲೇಜಿನಲ್ಲಿ 1317 ವಿದ್ಯಾರ್ಥಿನಿಯರು ಪ್ರವೇಶ ಪಡೆದಿದ್ದಾರೆ. ಇದರಲ್ಲಿ ನಾಲ್ವರು ವಿದ್ಯಾರ್ಥಿನಿಯರು ಕಾಣೆಯಾಗಿದ್ದಾರೆ. ಈ ಕುರಿತು ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ನಾಲ್ವರು ಕಳೆದ 4 ದಿನಗಳಿಂದ ‌ಕಾಲೇಜಿಗೆ ಬಂದಿಲ್ಲ. ಅವರು ಸರಿಯಾಗಿ ಕಾಲೇಜಿಗೆ ಬರುತ್ತಿರಲಿಲ್ಲ. ಈ ಬಗ್ಗೆ ಕಾಲೇಜಿನ ಪ್ರಾಂಶುಪಾಲರು ಪೋಷಕರ ಗಮನಕ್ಕೂ ತಂದಿದ್ದಾರೆ. ನಾಲ್ಕು ಜನರು ಪ್ಲಾನ್ ಮಾಡಿ ಎಲ್ಲೋ ಹೋಗಿರುವ ಶಂಕೆಯಿದೆ ಎಂದು ಹೇಳಿದ್ದಾರೆ.

Raichur: ಬಸ್‌ ಸೌಕರ್ಯಕ್ಕೆ ಆಗ್ರಹಿಸಿ ಡಿಪೋಗೆ ಮುತ್ತಿಗೆ

ಇದು ಬೇಸರದ ಸಂಗತಿ. ನಮ್ಮ ಸರ್ಕಾರಿ ಕಾಲೇಜಿನಲ್ಲಿ ಎಂದೂ ಈ ರೀತಿ ಆಗಿರಲಿಲ್ಲ. ಡಿವೈಎಸ್ ಪಿ ಜೊತೆಗೆ ‌ನಾವು ಮಾತನಾಡಿದ್ದೇವೆ ಪೊಲೀಸರ ತನಿಖೆಗೆ ಬೇಕಾದ ಎಲ್ಲಾ ದಾಖಲೆಗಳು ಸಹ ನೀಡಿದ್ದೇವೆ ಎಂದು ಹೇಳಿದ್ದಾರೆ.
 

click me!