7ನೇ ಕ್ಲಾಸ್‌ಗೆ ಶಾಲೆ ಬಿಟ್ಟು, ಯೂಟ್ಯೂಬ್‌ನಲ್ಲಿ ಖೋಟಾ ನೋಟು ಮಾಡೋದು ಕಲಿತ ಖದೀಮ..!

By Girish GoudarFirst Published Jan 25, 2023, 12:05 PM IST
Highlights

ಬೆಂಗಳೂರಲ್ಲಿ 500 ಮುಖಬೆಲೆಯ 11 ಲಕ್ಷ ರೂ. ನಕಲಿ ನೋಟುಗಳನ್ನ ಮುದ್ರಿಸಿ ಚಲಾವಣೆಗೆ ಯತ್ನಿಸಿದ್ದ ಬಂಧಿತ ಆರೋಪಿಗಳು. 

ಬೆಂಗಳೂರು(ಜ.25): ಖೋಟಾ ನೋಟು ಚಲಾಯಿಸ್ತಿದ್ದ ಅಂತರರಾಜ್ಯ ನಾಲ್ವರು ಕಳ್ಳರನ್ನ ಸುಬ್ರಮಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳು 500 ಮುಖಬೆಲೆಯ 11 ಲಕ್ಷ ರೂ. ನಕಲಿ ನೋಟುಗಳನ್ನ ಮುದ್ರಿಸಿ ಚಲಾವಣೆಗೆ ಯತ್ನಿಸಿದ್ದರು ಅಂತ ತಿಳಿದು ಬಂದಿದೆ. 

ಬಂಧಿತ ಚರಣ್ ಸಿಂಗ್ ಮತ್ತು ರಜನಿ, ರಾಜು, ಗೋಪಿನಾಥ್ ಆರೋಪಿಗಳು ಆಂಧ್ರಪ್ರದೇಶದ ಕಡಪ ಜಿಲ್ಲೆಯವರಾಗಿದ್ದಾರೆ. ಈ ಖದೀಮರು ಆಂಧ್ರಪ್ರದೇಶದಿಂದ ನಕಲಿ ನೋಟು ತಂದು ಬೆಂಗಳೂರಿನಲ್ಲಿ ಚಲಾವಣೆಗೆ ಯತ್ನ ನಡೆಸಿದ್ದರು. 
ಜನವರಿ 19 ರಂದು ಮಧ್ಯಾಹ್ನ 2:00 ಗಂಟೆ ವೇಳೆಗೆ ಉತ್ತರಹಳ್ಳಿಯ ಪೂರ್ಣ ಪ್ರಜ್ಞಾ ಲೇಔಟ್‌ನಲ್ಲಿ ಗಿರಾಕಿಗಳಿಗೆ ಕಾಯ್ತಿದ್ದಾಗ ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಜನವರಿ‌ 19 ರಂದು ಇಬ್ಬರು ಆರೋಪಿಗಳನ್ನು ಮೊದಲು ವಶಕ್ಕೆ ಪಡೆದಿದ್ದರು. ಚರಣ್ ಸಿಂಗ್ ಮತ್ತು ರಜನಿ ಬಳಿ 11 ಲಕ್ಷ ನಕಲಿ ಖೋಟಾ ನೋಟು ಜಪ್ತಿ ಮಾಡಿ ವಶಕ್ಕೆ ಪಡೆಯಲಾಗಿದೆ. ಬಳಿಕ ಆಂಧ್ರಪ್ರದೇಶದ ಕಡಪ ಜಿಲ್ಲೆಗೆ ತೆರಳಿ ಕಾರ್ಯಾಚರಣೆ ನಡೆಸಿದ್ದು, ಮತ್ತಿಬ್ಬರನ್ನ ಬಂಧಿಸಲಾಗಿದೆ. ಈ ಸಂಬಂಧ ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Mangaluru crime: ಮಂಗಳೂರಲ್ಲಿ 4.50 ಲಕ್ಷ ರು.ಗಳ ಖೋಟಾ ನೋಟು ಸಾಗಾಟ ಪತ್ತೆ, ಇಬ್ಬರು ಸೆರೆ

ಖೋಟಾ ನೋಟು ಮಾಡಬೇಕೆಂದು ಹಲವು ವರ್ಷದ ಪರಿಶ್ರಮ

ಖೋಟಾ ನೋಟು ಮಾಡಲು ಯೂಟ್ಯೂಬ್‌ ನೋಡಿ ಕಲಿತು ಏಳನೇ ಕ್ಲಾಸ್‌ಗೆ ಶಾಲೆ ಬಿಟ್ಟಿದ್ದನು. ಹೌದು, ಥೇಟ್ ಒರಿಜಿನಲ್ ನೋಟ್ ನಂತೆ ನಕಲಿ ನೋಟ್ ತಯಾರು ಮಾಡಿದ್ದನು. ಈತನ ಹೆಸರು ರಾಜ ಪುಲ್ಲಲರೇವು ಅಂತ. ಈತ ಮೂಲತಃ ಅನಂತಪುರದವನಾಗಿದ್ದಾನೆ. ಅಸಲಿ ನೋಟ್ ಜೊತೆಗಿಟ್ಟರೇ ನಕಲಿ ನೋಟ್ ಯಾವುದು ಎಂಬುವುದೇ ಗೊತ್ತಾಗೋದೆ ಇಲ್ಲ. ಹಾಗೆ ತಯಾರಿಸಿದ್ದಾನೆ ಈತ ಖೋಟಾ ನೋಟು. 

ಪುಲ್ಲಲರೇವು ರಾಜನ ಕೃತ್ಯ ಕಂಡು ಪೊಲೀಸರೇ ಒಮ್ಮೆಲೆ ಶಾಕ್ ಆಗಿದ್ದರು. ಬಂಧಿತ ಪುಲ್ಲಲರೇವು ರಾಜ ಕಳೆದ ಆರು ತಿಂಗಳಿನಿಂದ ನಕಲಿ ನೋಟ್ ಬ್ಯುಸಿನೆಸ್ ಶುರು ಮಾಡಿದ್ದನಂತೆ. ಅನಂತಪುರದಲ್ಲಿ ಹಣ ಪಡೆದು ಬೆಂಗಳೂರಿಗೆ ಎಂಟ್ರಿ ಕೊಟ್ಟಿದ್ದನು. ಈತ ಸುಬ್ರಮಣ್ಯಪುರದಲ್ಲಿ 3 ಲಕ್ಷ ನಕಲಿ ನೋಟ್ ಸಮೇತ ಬೆಂಗಳೂರಿಗೆ ಬಂದಿದ್ದ, ಈ ವೇಳೆ ಮಾಹಿತಿ ಆಧರಿಸಿ ಪೊಲೀಸರು ಬಂಧಿಸಿದ್ದಾರೆ. ಬಳಿಕ ಮಾಹಿತಿ ಆಧರಿಸಿ ಅನಂತಪುರದಲ್ಲಿ ದಾಳಿ ಮಾಡಿದ್ದಾರೆ. 
ಬಂಧಿತ ಆರೋಪಿಗಳು ನಕಲಿ ನೋಟ್ ತಯಾರಿಕೆಗಾಗಿ ಫ್ಯಾಕ್ಟರಿಯನ್ನೇ ಸಿದ್ಧ ಮಾಡಿದ್ದರು ಅಂತ ತಿಳಿದು ಬಂದಿದೆ. ಸದ್ಯ ನಕಲಿ ನೋಟುಗಳು ವಶಕ್ಕೆ ಪಡೆದು ತನಿಖೆಯನ್ನ ಆರಂಭಿಸಿದ್ದಾರೆ ಪೊಲೀಸರು. 

click me!