ಬಂಧಿತ ಆರೋಪಿಗಳಿಂದ 300 ಗ್ರಾಂ ಗಾಂಜಾ ಹಾಗೂ ಎಂಡಿಎಂಎ, ನಾಲ್ಕು ಮೊಬೈಲ್‌ಗಳು, ಬೈಕ್ ಸೇರಿದಂತೆ ಇತರೆ ವಸ್ತು ಜಪ್ತಿ| ಕಾಡುಗೋಡಿ ಸಮೀಪದ ಕೊಡಿಗೇಹಳ್ಳಿ-ಹೂಡಿ ರೈಲ್ವೆ ನಿಲ್ದಾಣದ ಬಳಿ ಡ್ರಗ್ಸ್ ಮಾರಾಟಕ್ಕೆ ಯತ್ನ| ಹಲವು ವರ್ಷಗಳಿಂದ ಬೆಂಗಳೂರಲ್ಲಿ ನೆಲೆಸಿದ್ದ ನೈಜೀರಿಯಾ ದೇಶದ ಪ್ರಜೆಗಳು|
ಬೆಂಗಳೂರು(ಅ.28): ಕೊಡಿಗೇಹಳ್ಳಿ -ಹೂಡಿ ರೈಲ್ವೆ ನಿಲ್ದಾಣದ ಸಮೀಪ ಮಾದಕ ವಸ್ತು ಮಾರಾಟಕ್ಕೆ ಯತ್ನಿಸಿದ್ದ ಇಬ್ಬರು ವಿದೇಶಿ ಪ್ರಜೆಗಳು ಕಾಡುಗೋಡಿ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಬಂಜಾರ ಲೇಔಟ್‌ನ ಚಿಕ್ವಾಡ್ ವಿನ್ಸೆಂಟ್ ಒಗಿಬೊ ಹಾಗೂ ಟಿ.ಸಿ.ಪಾಳ್ಯದ ಎಮಿಕಾ ಚಿನೆಡು ಮೈಕೆಲ್ ಬಂಧಿತರು. ಆರೋಪಿಗಳಿಂದ 300 ಗ್ರಾಂ ಗಾಂಜಾ ಹಾಗೂ ಎಂಡಿಎಂಎ, ನಾಲ್ಕು ಮೊಬೈಲ್‌ಗಳು, ಬೈಕ್ ಸೇರಿದಂತೆ ಇತರೆ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಕಾಡುಗೋಡಿ ಸಮೀಪದ ಕೊಡಿಗೇಹಳ್ಳಿ-ಹೂಡಿ ರೈಲ್ವೆ ನಿಲ್ದಾಣದ ಬಳಿ ಡ್ರಗ್ಸ್ ಮಾರಾಟಕ್ಕೆ ಯತ್ನಿಸಿರುವ ಬಗ್ಗೆ ಖಚಿತ ಮಾಹಿತಿ ಪಡೆದು ದಾಳಿ ನಡೆಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
undefined
ಕೊರೋನಾ ಎಫೆಕ್ಟ್: ಕೆಲಸವಿಲ್ಲದೆ ಡ್ರಗ್ಸ್ ಪೆಡ್ಲರ್ ಆದ ಹೋಟೆಲ್ ನೌಕರ
ಆರೋಪಿಗಳು ಮೂಲತಃ ನೈಜೀರಿಯಾ ದೇಶದವರಾಗಿದ್ದು, ಹಲವು ವರ್ಷಗಳಿಂದ ನಗರದಲ್ಲಿ ನೆಲೆಸಿದ್ದರು. ಈ ಹಿಂದೆ ಡ್ರಗ್ಸ್ ಪ್ರಕರಣದಲ್ಲಿ ವಿನ್ಸೆಂಟ್ ಬಂಧಿತನಾಗಿ ಜೈಲು ಸೇರಿದ್ದ. ಬಳಿಕ ಜಾಮೀನು ಪಡೆದು ಹೊರ ಬಂದು ಮತ್ತೆ ತನ್ನ ಚಾಳಿ ಮುಂದುವರೆಸಿದ್ದ ಎಂದು ಅಧಿಕಾರಿಗಳು ವಿವರಿಸಿದ್ದಾರೆ.