ಬಳ್ಳಾರಿ: ಅಣ್ಣನ ಅನುಮಾನಕ್ಕೆ ಬಲಿಯಾದ ತಂಗಿ..!

By Suvarna News  |  First Published Oct 27, 2020, 8:13 PM IST

ಅಣ್ಣನೊಬ್ಬ ತನ್ನ ತಂಗಿಯ ಮೇಲೆಯೇ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ. ಆದ್ರೆ,  ತೀವ್ರವಾಗಿ ಗಾಯಗೊಂಡಿದ್ದ ತಂಗಿ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ.


ಬಳ್ಳಾರಿ, (ಅ.27): ಅಣ್ಣನೊಬ್ಬ ತನ್ನ ತಂಗಿಯ ಮೇಲೆಯೇ ಅನುಮಾನಗೊಂಡು ಆಕೆ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಹತ್ಯೆಗೈದಿರುವ ಘಟನೆ ಬಳ್ಳಾರಿಯ ಕರಡಿದುರ್ಗ ಗ್ರಾಮದಲ್ಲಿ ನಡೆದಿದೆ.

ರತ್ನಮ್ಮ (28) ಮೃತ ದುರ್ದೈವಿ. ಹನುಮಂತಪ್ಪ (34) ತಂಗಿಯನ್ನೇ ಕೊಂದ ಅಣ್ಣ. ತಂಗಿಯ ಶೀಲ ಶಂಕಿಸಿ ಮಚ್ಚಿನಿಂದ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ.

Tap to resize

Latest Videos

ಯುವತಿ ಕಿಡ್ನಾಪ್ ಮಾಡಲು ಬಂದ ಯುವಕ, ಪ್ಲಾನ್ ಫೇಲ್ ಆದಾಗ ಕೊಂದೇ ಬಿಟ್ಟ!

ಕುತ್ತಿಗೆ ಹಾಗೂ ತಲೆಯ ಭಾಗಕ್ಕೆ ತೀವ್ರವಾಗಿ ಗಾಯಗೊಂಡಿದ್ದ ರತ್ನಮ್ಮಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ರತ್ನಮ್ಮ ಸಾವನ್ನಪ್ಪಿದ್ದಾಳೆ.

click me!