
ಬೆಂಗಳೂರು(ಮಾ.27): ತನ್ನ ಪ್ರಿಯತಮೆಗೆ(Lover) ಮೆಸೇಜ್ ಮಾಡಿ ಕಿರುಕುಳ(Harassment) ನೀಡುತ್ತಿದ್ದ ಎಂಬ ಕಾರಣಕ್ಕೆ ಕೋಪಗೊಂಡು ಆಕೆಯ ಮಾಜಿ ಗೆಳೆಯನನ್ನು ಅಪಹರಿಸಿ(Kidnap) ಥಳಿಸಿ, ಕೊಲೆಗೆ ಯತ್ನಿಸಿದ್ದ ರಿಯಲ್ ಎಸ್ಟೇಟ್ ಏಜೆಂಟ್ ಸೇರಿದಂತೆ ಐದು ಮಂದಿಯನ್ನು ಸಿಸಿಬಿ(CCB) ಬಂಧಿಸಿದೆ.
ಚಂದ್ರಾಲೇಔಟ್ ನಿವಾಸಿ ಅರುಣ್ ನಾಯ್ಡು, ಆರ್.ಆರ್.ನಗರದ ರೌಡಿ ಕಾರ್ತಿಕ್ ಅಲಿಯಾಸ್ ಅರ್ನಾಲ್ಡ್, ಸಹಚರರಾದ ಯಶವಂತ್, ವಿಶಾಲ್ ಹಾಗೂ ಸಂಜೀವ್ ಬಂಧಿತರು(Arrest). ಆರೋಪಿಗಳಿಂದ(Accused) ಮಾರಕಾಸ್ತ್ರಗಳನ್ನು ಜಪ್ತಿ ಮಾಡಲಾಗಿದೆ. ಇತ್ತೀಚಿಗೆ ನಾಗರಬಾವಿ ಸಮೀಪ ತನ್ನ ಪ್ರಿಯತಮೆಯ ಮಾಜಿ ಸ್ನೇಹಿತ ಶ್ರೀಕಾಂತ್‌ನನ್ನು ಸಹಚರರ ಜತೆ ಸೇರಿ ಅಪಹರಿಸಿ ಅರುಣ್ ಮನಬಂದಂತೆ ಹಲ್ಲೆ(Assault) ನಡೆಸಿದ್ದ. ಈ ಬಗ್ಗೆ ಸಂತ್ರಸ್ತ ನೀಡಿದ ದೂರಿನ ಮೇರೆಗೆ ತನಿಖೆ ನಡೆಸಿದ ಸಿಸಿಬಿ ಸಂಘಟಿತ ಅಪರಾಧ ದಳ(OCW) ಎಸಿಪಿ ಎಚ್.ಎನ್.ಧರ್ಮೇಂದ್ರಯ್ಯ ನೇತೃತ್ವದ ತಂಡ, ಮೊಬೈಲ್ ಕರೆಗಳ ಮಾಹಿತಿ ಆಧರಿಸಿ ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಜಡ್ಜ್‌ಗೆ ಬೆದರಿಕೆ: ತಮಿಳುನಾಡಿನ ಮತ್ತೊಬ್ಬ ಕಿಡಿಗೇಡಿ ಬೆಂಗ್ಳೂರಿಗೆ
ಪ್ರೇಮ ಪುರಾಣ:
14 ವರ್ಷಗಳ ಹಿಂದೆ ಲೋಕೇಶ್ ಹಾಗೂ ಚಂದ್ರಾ ಲೇಔಟ್‌ನ ಸಂಗೀತಾ (ಹೆಸರು ಬದಲಾಯಿಸಲಾಗಿದೆ) ವಿವಾಹವಾಗಿದ್ದರು. ಈ ದಂಪತಿಗೆ 1 ಮಗನಿದ್ದಾನೆ. ಹತ್ತು ವರ್ಷಗಳ ಹಿಂದೆ ಲೋಕೇಶ್‌ಗೆ ವಿವಾಹ ವಿಚ್ಛೇದನ(Divorce) ನೀಡಿದ ಆಕೆ, ಆನಂತರ ರಿಯಲ್ ಎಸ್ಟೇಟ್ ಏಜೆಂಟ್ ಶ್ರೀಕಾಂತ್ ಜತೆ ಸ್ನೇಹ ಮಾಡಿದಳು. ಏಳು ವರ್ಷಗಳು ಶ್ರೀಕಾಂತ್ ಜತೆ ಲಿವಿಂಗ್ ಟುಗೆದರ್‌ನಲ್ಲಿದ್ದ ಆಕೆ, ಮೂರು ವರ್ಷಗಳ ಹಿಂದೆ ಆತನಿಂದ ದೂರವಾಗಿ ಅರುಣ್ ಸಖ್ಯ ಬೆಳೆಸಿದ್ದಳು. ಆದರೆ, ಇತ್ತೀಚಿಗೆ ಮಾಜಿ ಗೆಳತಿಗೆ ರಾತ್ರಿ ವೇಳೆ ವಾಟ್ಸಾಪ್‌ಗೆ ಮೆಸೇಜ್ ಕಳುಹಿಸಿ ಮತ್ತೆ ಶ್ರೀಕಾಂತ್ ಪ್ರೇಮ ನಿವೇದನೆ ಮಾಡಿಕೊಳ್ಳುತ್ತಿದ್ದ. ಇದಕ್ಕೆ ಸಂಗೀತಾ ಆಕ್ಷೇಪ ವ್ಯಕ್ತಪಡಿಸಿದ್ದಳು. ಹೀಗಿದ್ದರೂ ಆಕೆಗೆ ಶ್ರೀಕಾಂತ್ ಮೆಸೇಜ್ ಮಾಡುತ್ತಿದ್ದ.
ಈ ವಿಚಾರ ತಿಳಿದ ಅರುಣ್, ಶ್ರೀಕಾಂತ್ ಕೊಲೆಗೆ(Murder) ನಿರ್ಧರಿಸಿದ್ದ. ಈ ಕೃತ್ಯಕ್ಕೆ ಆತನಿಗೆ ರಾಜರಾಜೇಶ್ವರಿ ನಗರದ ರೌಡಿ ಕಾರ್ತಿಕ್ ಸಾಥ್ ಕೊಟ್ಟಿದ್ದಾನೆ. ಅಂತೆಯೇ ನಾಗರಬಾವಿ ಸಮೀಪ ಶ್ರೀಕಾಂತ್‌ನನ್ನು ಅಪಹರಿಸಿದ ಆರೋಪಿಗಳು, ಬಳಿಕ ಆತನನ್ನು ಕೆಂಗೇರಿ ಸಮೀಪ ಗ್ಯಾರೇಜ್‌ವೊಂದಕ್ಕೆ ಕರೆದೊಯ್ದು ಕೂಡಿಹಾಕಿದರು. ಅಲ್ಲಿ ಆತನಿಗೆ ಮನಬಂದಂತೆ ಥಳಿಸಿ, ಲಾಂಗ್ ತೋರಿಸಿ ಜೀವ ಬೆದರಿಕೆ(Life Threatening) ಹಾಕಿದ್ದಾರೆ. ಕೊನೆಗೆ ಅರುಣ್ ಕಾಲಿಗೆ ಬಿದ್ದು ಶ್ರೀಕಾಂತ್ ಕ್ಷಮೆಕೋರಿದ ಬಳಿಕ ಆತನನ್ನು ಬಿಟ್ಟು ಕಳುಹಿಸಿದ್ದರು. ಈ ಘಟನೆ ಸಂಬಂಧ ಚಂದ್ರಾಲೇಔಟ್ ಠಾಣೆಯಲ್ಲಿ ಸಂತ್ರಸ್ತ ದೂರು ಸಲ್ಲಿಸಿದ. ತನಿಖೆ ಸಿಸಿಬಿ ವರ್ಗ ಮಾಡಲಾಗಿತ್ತು ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಅರುಣ್ ಕ್ರಿಮಿನಲ್ ಹಿನ್ನೆಲೆಯುಳ್ಳವನಾಗಿದ್ದು, ಆತನ ಮೇಲೆ ನಗರದ ವಿವಿಧ ಠಾಣೆಗಳಲ್ಲಿ ಪ್ರಕಣರಗಳಿವೆ. ಹಿಂದೆ ರಾಜಾಜಿನಗರ ಠಾಣೆಯಲ್ಲಿ ಆತನ ಮೇಲೆ ರೌಡಿಪಟ್ಟಿ ತೆರೆಯಲಾಗಿತ್ತು. ಎರಡು ವರ್ಷಗಳ ಹಿಂದೆ ರೌಡಿಪಟ್ಟಿಯಿಂದ ಅರುಣ್ ಮುಕ್ತನಾಗಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಲಗಿದಲ್ಲೇ ಶವವಾದ ಕಾವಿಧಾರಿ: ಕೊಲೆ ಶಂಕೆ..?
ಚಿಕ್ಕೋಡಿ: ಕಾವಿಧಾರಿಯೊಬ್ಬ(Swamiji) ಮಲಗಿದಲ್ಲೇ ಶವವಾದ ಘಟನೆ ಬೆಳಗಾವಿ(Belagavi) ಜಿಲ್ಲೆಯ ರಾಯಭಾಗ ತಾಲೂಕಿನ ಮುಗಳಖೋಡ ಪಟ್ಟಣದಲ್ಲಿ ಇಂದು(ಶನಿವಾರ) ನಡೆದಿದೆ. ಕಾವಿಧಾರಿ ಹೆಸರು ಇನ್ನೂ ತಿಳಿದು ಬಂದಿಲ್ಲ. ಮುಗಳಖೋಡ ಪಟ್ಟಣದ ಹೊಸ ಬಸ್ ನಿಲ್ದಾಣದಲ್ಲಿ ಕಾವಿಧಾರಿ ರಾತ್ರಿ ತಂಗಿದ್ದರು.
ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ, ಬಿಜೆಪಿ ನಾಯಕನ ಪುತ್ರನ ಕೊಲೆಯಲ್ಲಿ ಅಂತ್ಯ!
ತಲೆಗೆ ಗಂಭೀರಗಾಯವಾಗಿ ಸ್ಥಳದಲ್ಲೇ ಕಾವಿಧಾರಿ ಅಸುನೀಗಿದ್ದಾರೆ(Death). ಕಾವಿಧಾರಿಯ ಶವಕಂಡು ಮುಗಳಖೋಡ ಪಟ್ಟಣದ ಜನರು ಬೆಚ್ಚಿ ಬಿದ್ದಿದ್ದಾರೆ. ಮೃತ ಕಾವಿಧಾರಿ ಸಾರ್ವಜನಿಕರ ಬಳಿ ಭಿಕ್ಷೆ ಬೇಡಿಕೊಂಡು ಜೀವನ ಸಾಗಿಸುತ್ತಿದ್ದರು ಎಂದು ತಿಳಿದು ಬಂದಿದೆ.
ಕಾವಿಧಾರಿಯ ಕೊಲೆಗೆ(Murder) ನಿಖರವಾದ ಕಾರಣ ತಿಳಿದು ಬಂದಿಲ್ಲ. ಕಾವಿಧಾರಿಯ ಹತ್ಯೆ ಯಾಕಾಗಿರಬಹುದು ಎಂಬುದುಇ ಬಗ್ಗೆ ಎಲ್ಲರಲ್ಲೂ ಕುತೂಹಲ ಮೂಡಿಸಿದೆ. ಘಟನಾ ಸ್ಥಳಕ್ಕೆ ಹಾರೂಗೇರಿ ಪೊಲೀಸರು(Police) ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾರೂಗೇರಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ