
ಗಂಗಾವತಿ(ಮಾ.08): ನಗರದ ಪಂಪಾನಗರ 1ನೇ ವಾರ್ಡ್‌ನಲ್ಲಿ ಮನೆಯ ಮುಂದೆ ಬಿಟ್ಟಿದ್ದ ಬೈಕ್‌ಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿ ಪರಾರಿಯಾದ ಘಟನೆ ಶನಿವಾರ ಮಧ್ಯರಾತ್ರಿ ನಡೆದಿದೆ.
ಪಾಂಡುರಂಗ ದೇವಸ್ಥಾನದ ಹಿಂಭಾಗದಲ್ಲಿ ಗ್ರಾಮಶಕ್ತಿ ಬ್ಯಾಂಕ್ ನೌಕರ ಮಹ್ಮದ್ ರಫಿ ಎಂಬವರ ಬೈಕ್‌ಗೆ ಬೆಂಕಿ ಹಚ್ಚಲಾಗಿದೆ. ಬೆಂಕಿ ನೋಡಿ ಗಾಬರಿಯಾದ ಜನರು ನಂದಿಸಲು ಹೋಗುವಷ್ಟರಲ್ಲಿ ಕರಕಲಾಗಿದೆ. ಇತ್ತೀಚೆಗೆ ಬೈಕ್‌ಗಳಲ್ಲಿ ಪೆಟ್ರೋಲ್ ಕಳ್ಳತನ ಅಲ್ಲದೆ ಕಳೆದ ವರ್ಷ ಬಸವಣ್ಣ ವೃತ್ತದ ಮನೆಯೊಂದರ ಹೊರಗೆ ನಿಲ್ಲಿಸಿದ್ದ ಬೈಕ್‌ಗೆ ಬೆಂಕಿ ಹಚ್ಚಿದ ಉದಾಹರಣೆ ಇದೆ.
ರೌಡಿಶೀಟರ್ ಕಿರಣ್ ಮೇಲೆ ಫೈರಿಂಗ್, ಇದೀಗ ಪೊಲೀಸ್ ವಶಕ್ಕೆ
ಈಗ ನಗರದಲ್ಲಿ ಜನರು ಮನೆಯ ಹೊರಗೆ ಬೈಕ್, ಕಾರು ಬಿಡಲು ಭಯ ಉಂಟಾಗಿದ್ದು, ಪೊಲೀಸರು ನಿಗಾ ವಹಿಸಬೇಕಿದೆ ಎಂದು ನಾಗರಿಕರು ಒತ್ತಾಯಿಸಿದ್ದಾರೆ. ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ