ಶಿರಸಿಯ ರವಿ ಪಟಗಾರ ಹಾಗೂ ಶಿರಾಲಿಯ ಶಿವರಾಜ ನಾಯ್ಕ ಬಂಧಿತ ಆರೋಪಿಗಳು| ರವಿ ಪಟಗಾರನ ಮೇಲೆ ದೂರು ದಾಖಲಿಸಿದ್ದ ಅತ್ಯಾಚಾರಕ್ಕೊಳಗಾದ ಬಾಲಕಿಯ ತಾಯಿ| ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದ ಕೋರ್ಟ್|
ಭಟ್ಕಳ(ಮಾ.08): ಅಪ್ರಾಪ್ತೆಯನ್ನು ಪುಸಲಾಯಿಸಿ ಆಕೆಯೊಂದಿಗೆ ಲೈಂಗಿಕ ಸಂಪರ್ಕವನ್ನು ಬೆಳೆಸಿ ಗರ್ಭಿಣಿಯನ್ನಾಗಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿತರನ್ನು ಪೋಕ್ಸೋ ಕಾಯಿದೆಯಡಿಯಲ್ಲಿ ಇಲ್ಲಿನ ಗ್ರಾಮೀಣ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಶಿರಸಿಯ ರವಿ ಪಟಗಾರ (35) ಹಾಗೂ ಶಿರಾಲಿಯ ಶಿವರಾಜ ನಾಯ್ಕ (23) ಎನ್ನುವವರೇ ಬಂಧಿತ ಆರೋಪಿತರು. ಶಿರಾಲಿ ಚಿತ್ರಾಪುರದ 14 ವರ್ಷ ವಯಸ್ಸಿನ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಆಕೆಯ ತಾಯಿಯು ರವಿ ಪಟಗಾರನ ಮೇಲೆ ದೂರು ದಾಖಲಿಸಿದ್ದರು.
ಖ್ಯಾತ ಸೀರಿಯಲ್ ನಟಿಯ ಮೇಲೆ ಹಲವು ಬಾರಿ ಅತ್ಯಾಚಾರ
ತನಿಖೆಯನ್ನು ನಡೆಸುತ್ತಿರುವ ಪೊಲೀಸರಿಗೆ ಈಕೆಯ ಮೇಲೆ ಶಿವರಾಜ ನಾಯ್ಕ ಈತನೂ ಕೂಡಾ ಲೈಂಗಿಕ ದೌರ್ಜನ್ಯ ಎಸಗಿರುವುದು ತಿಳಿದು ಬಂದಿರುವುದರಿಂದ ಇಬ್ಬರೂ ಆರೋಪಿತರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.