ಮೊಂಬತ್ತಿ ಬೆಳಕಲ್ಲಿ ಬೈಕಿಗೆ ಪೆಟ್ರೋಲ್ ಹಾಕುತ್ತಿದ್ದ ಬಾಲಕಿಗೆ ಬೆಂಕಿ; ಚಿಕಿತ್ಸೆ ಫಲಕಾರಿಯಾಗದೇ ಸಾವು

By Ravi Janekal  |  First Published Dec 11, 2023, 11:16 AM IST

ಮೊಂಬತ್ತಿ ಬೆಳಕಲ್ಲಿ ಬೈಕ್‌ಗೆ ಪೆಟ್ರೋಲ್ ಹಾಕುವಾಗ ಬೆಂಕಿ ಹೊತ್ತಿಕೊಂಡು ಬಾಲಕಿ ದುರ್ಮರಣಕ್ಕೀಡಾದ ಘಟನೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಕಟ್ಟಿಗೇನಹಳ್ಳಿಯಲ್ಲಿ ನಡೆದಿದೆ. ಸೌಂದರ್ಯ(16) ಮೃತ ಬಾಲಕಿ.


ತುಮಕೂರು (ಡಿ.11) : ಮೊಂಬತ್ತಿ ಬೆಳಕಲ್ಲಿ ಬೈಕ್‌ಗೆ ಪೆಟ್ರೋಲ್ ಹಾಕುವಾಗ ಬೆಂಕಿ ಹೊತ್ತಿಕೊಂಡು ಬಾಲಕಿ ದುರ್ಮರಣಕ್ಕೀಡಾದ ಘಟನೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಕಟ್ಟಿಗೇನಹಳ್ಳಿಯಲ್ಲಿ ನಡೆದಿದೆ.

ಸೌಂದರ್ಯ(16) ಮೃತ ಬಾಲಕಿ. ಬೈಕ್ ಗೆ ಪ್ಲಾಸ್ಟಿಕ್ ಬಾಟಲಿನಲ್ಲಿ ಪೆಟ್ರೋಲ್ ಹಾಕುವ ವೇಳೆ ನಡೆದಿರುವ ಅವಘಡ. ಕತ್ತಲಾವರಿಸಿದ್ದರಿಂದ ಬೈಕ್‌ಗೆ ಪೆಟ್ರೋಲ್ ಹಾಕುವ ವೇಳೆ ಮೊಂಬತ್ತಿ ಹಿಡಿದಿದ್ದ ಬಾಲಕಿ. ಈ ಮೊಂಬತ್ತಿಗೆ ಪೆಟ್ರೋಲ್ ಬಾಟಲಿ ತಗುಲಿ ಹೊತ್ತಿಕೊಂಡ ಬೆಂಕಿ ಬಾಲಕಿ ಮೈಗೂ ಹೊತ್ತಿಕೊಂಡು ಉರಿದ ಪರಿಣಾಮ ಸೌಂದರ್ಯ ಸುಟ್ಟಗಾಯಗಳಿಂದ ನರಳಾಡಿದ್ದಾಳೆ. ಸುಟ್ಟ ಗಾಯದಿಂದ ಅಸ್ವಸ್ಥಳಾದ ಬಾಲಕಿಗೆ ವಿಕ್ರೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಬಾಲಕಿ. ಅಮೃತ್ತೂರು ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಘಟನೆ. 

Latest Videos

undefined

ಆಧಾರ್‌ ದುರ್ಬಳಕೆ ನೆಪ: ಮುಂಬೈ ಪೊಲೀಸ್‌ ಸೋಗಲ್ಲಿ ಉದ್ಯಮಿಯಿಂದ ₹2 ಕೋಟಿ ಸುಲಿಗೆ!

ಗ್ಯಾಸ್ ಸೋರಿಕೆಯಿಂದ ಬೆಂಕಿ; ಮನೆಯ ವಸ್ತುಗಳು ಸುಟ್ಟು ಕರಕಲು

ಮಂಡ್ಯ: ಗ್ರಾಪಂಯ ಸದಸ್ಯರೊಬ್ಬರ ಮನೆಯಲ್ಲಿ ಸಿಲಿಂಡರ್‌ ಅನಿಲ ಸೋರಿಕೆಯಿಂದ ಬೆಂಕಿ ಹೊತ್ತಿಕೊಂಡ ಪರಿಣಾಮ ಮನೆಯಲ್ಲಿದ್ದ ವಸ್ತುಗಳು ಸುಟ್ಟು ಕರಕಲಾಗಿರುವ ಘಟನೆ ತಾಲೂಕಿನ ತುಂಬಕೆರೆ ಗ್ರಾಮದಲ್ಲಿ ಶನಿವಾರ ನಡೆದಿದೆ. ಹನಕೆರೆ ಗ್ರಾಪಂ ಸದಸ್ಯೆ ರಾಣಿ ಎಂಬುವವರ ಮನೆಯಲ್ಲಿ ಸಿಲಿಂಡರ್ ಅನಿಲ ಸೋರಿಕೆಯಿಂದ ಮನೆಯಲ್ಲಿದ್ದ ಸುಮಾರು 1 ಲಕ್ಷ ರು.ಗೂ ಹೆಚ್ಚು ಬೆಲೆಬಾಳುವ ವಸ್ತುಗಳು ಬೆಂಕಿಯ ಕೆನ್ನಾಲಿಗೆಗೆ ಆಹುತಿಯಾಗಿವೆ ಎಂದು ತಿಳಿದು ಬಂದಿದೆ.

ಬೆಳಗ್ಗೆ 8.30 ಗಂಟೆಗೆ ಅಡುಗೆ ಮಾಡಲು ಗ್ಯಾಸ್ ಸ್ಟೌವ್ ಗೆ ಬೆಂಕಿ ಹೊತ್ತಿಸಿದಾಗ ಸಿಲಿಂಡರ್ ನಲ್ಲಿ ಅನಿಲ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡಿದೆ. ಮನೆ ಮುಂದಿನ ಬಾಗಿಲು, ಸ್ಕೂಟರ್, ಸೈಕಲ್, ನೀರಿನ ಟ್ಯಾಂಕ್ ಹಾಗೂ ಬಟ್ಟೆಗಳು ಭಾಗಶಃ ಬೆಂಕಿಗೆ ಅಹುತಿಯಾಗಿವೆ.

ಕ್ರೆಡಿಟ್‌ ಕಾರ್ಡ್‌ ಕೊಡಿಸುತ್ತೇವೆಂದು ನಂಬಿಸಿ ವೃದ್ಧನಿಂದ ₹4.77 ಲಕ್ಷ ಸುಲಿದ ಖದೀಮರು!

ಘಟನೆಯಲ್ಲಿ ಗ್ರಾಪಂ ಸದಸ್ಯೆ ರಾಣಿ ಹಾಗೂ ಮಕ್ಕಳಿಗೆ ಬೆಂಕಿಯ ತಾಪ ತಗುಲಿ ಸಣ್ಣಪುಟ್ಟ ಸುಟ್ಟ ಗಾಯಗಳಾಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ಗ್ರಾಮಸ್ಥರು ಹೊತ್ತಿ ಉರಿಯುತ್ತಿದ್ದ ಸಿಲಿಂಡರ್‌ ಅನ್ನು ಮನೆ ಹೊರ ತಂದು ನೀರಿಗೆ ಹಾಕಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.

click me!