ಮುದ್ದು ಮಾಡಲು ಬಳಿ ಬಂದ ನಾಯಿಮರಿಯನ್ನು ಹೊಡೆದು ಕೊಂದ ಪಾಪಿ!

By Kannadaprabha News  |  First Published Dec 11, 2023, 10:53 AM IST

ನಾಯಿ ಮರಿ ಮುದ್ದು ಮಾಡಲು ಬಂದಿದ್ದಕ್ಕೆ ಸಿಟ್ಟಲ್ಲಿ ನಾಯಿಯನ್ನು ರಸ್ತೆಗೆ ಎತ್ತಿ ಒಗೆದು ಕಾಲಿನಿಂದ ತುಳಿದು ಕೊಲೆ. ಜಾಲತಾಣಗಳಲ್ಲಿ ವಿಡಿಯೋ ವೈರಲ್‌, ಆರೋಪಿ ವಿರುದ್ಧ ಭಾರೀ ಆಕ್ರೋಶ.


ಭೋಪಾಲ್ (ಡಿ.11): ಮುದ್ದು ಮಾಡಲು ಬಂದ ಪುಟ್ಟ ನಾಯಿಮರಿಯೊಂದನ್ನು ವ್ಯಕ್ತಿಯೊಬ್ಬ ಆಕ್ರೋಶದಿಂದ ಎತ್ತಿ ನೆಲಕ್ಕೆ ಬಡಿದು ಹತ್ಯೆ ಮಾಡಿದ ಪೈಶಾಚಿಕ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಈ ಘಟನೆಗೆ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಆರೋಪಿ ವಿರುದ್ಧ ಸೂಕ್ತ ಕ್ರಮದ ಭರವಸೆಯನ್ನು ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ನೀಡಿದ್ದಾರೆ.

ರಾಜ್ಯದ ಗುಣಾ ನಗರದ ಸುಭಾಷ್‌ ಕಾಲೊನಿಯಲ್ಲಿ ವ್ಯಕ್ತಿಯೊಬ್ಬ ಮುಚ್ಚಿದ ಅಂಗಡಿ ಮುಗ್ಗಟ್ಟಿನ ಮೆಟ್ಟಿಲುಗಳ ಮೇಲೆ ಕುಳಿತುಕೊಂಡಿದ್ದ. ಈ ವೇಳೆ ಆತನ ಬಳಿ ಎರಡು ಪುಟ್ಟ ನಾಯಿಮರಿಗಳು ಬಾಲ ಅಲ್ಲಾಡಿಸುತ್ತ ಬಂದಿವೆ. ಈ ಪೈಕಿ ಒಂದು ಮರಿ ಹಿಂದಿನಿಂದ ಆತನನ್ನು ಮುಟ್ಟಿದಾಗ ಒಮ್ಮೆಗೆ ಗಾಬರಿಗೊಂಡ ಆತ, ಸಿಟ್ಟಿನಲ್ಲಿ ನಾಯಿಮರಿಯನ್ನು ಎತ್ತಿ ನೆಲಕ್ಕೆ ಅಪ್ಪಳಿಸಿದ್ದಾನೆ. ಬಳಿಕ ಎದ್ದು ಹೋಗಿ ಮತ್ತೆ ನಾಯಿಯನ್ನು ಜೋರಾಗಿ ಎರಡು ಮೂರು ತುಳಿದಿದ್ದಾನೆ. ಪರಿಣಾಮ ಮರಿ ಅಲ್ಲೇ ಸಾವನ್ನಪ್ಪಿದೆ. ಈ ಘಟನೆ ಸಿಸಿಟೀವಿಯೊಂದಲ್ಲಿ ಸೆರೆಯಾಗಿದ್ದು, ನಾಯಿಮರಿ ಕೊಂದ ವ್ಯಕ್ತಿ ಭಾರೀ ಆಕ್ರೋಶ ವ್ಯಕ್ತವಾಗಿದೆ.

Tap to resize

Latest Videos

click me!