ಇಡೀ ರಾಜ್ಯಾದ್ಯಂತ ಸುದ್ದಿ ಮಾಡಿದ್ದ ವಿದ್ವತ್ ಮೇಲಿನ ಹಲ್ಲೆ ಪ್ರಕರಣದ ಆರೋಪಿ ಕಾಂಗ್ರೆಸ್ ಶಾಸಕ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಮತ್ತೆ ಸುದ್ದಿಯಾಗಿದ್ದಾರೆ.
ಬೆಂಗಳೂರು, [ಮಾ.16]: ಬೆಂಗಳೂರಿನ ಶಾಂತಿನಗರದ ಕಾಂಗ್ರೆಸ್ ಶಾಸಕ ಹ್ಯಾರಿಸ್ ಮಗ ಮೊಹಮ್ಮದ್ ನಲಪಾಡ್ ಮತ್ತೆ ಬಾಲ ಬಿಚ್ಚಿದ್ದಾನೆ.
ಸಭೆಯೊಂದರಲ್ಲಿ ಗಲಾಟೆ ಮಾಡಿದ ಆರೋಪದ ಮೇಲೆ ನಲಪಾಡ್ ವಿರುದ್ಧ ಎಫ್ಐಆರ್ ದಾಖಲಾಗಿದೆ.ಸಚಿನ್ ಗೌಡ ಎನ್ನುವರು ಕೊಟ್ಟ ದೂರಿನ ಮೇರೆಗೆ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.
ನಲಪಾಡ್ ಕಾರು ಅಪಘಾತ ಪ್ರಕರಣಕ್ಕೆ ಟ್ವಿಸ್ಟ್, ಸಿಸಿಟಿವಿ ದೃಶ್ಯ ಹೇಳುತ್ತಿದೆ ಅಸಲಿ ಕತೆ!
323 - ಸ್ವಯಂಪ್ರೇರಿತ ಸಾರ್ವಜನಿಕವಾಗಿ ಹಲ್ಲೆ, 341 - ಸಾರ್ವಜನಿಕವಾಗಿ ಅಸಭ್ಯ ವರ್ತನೆ, 506 - ಕ್ರಿಮಿನಲ್ ಬೆದರಿಕೆ, 504 - ಉದ್ದೇಶಪೂರ್ವಕವಾಗಿ ಅವಮಾನ ಮಾಡಿರುವ ಕಾಯ್ದೆಯಲ್ಲಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
ಘಟನೆ ವಿವರ
ಭಾನುವಾರ ನಲಪಾಡ್ ಭಾಗವಹಿಸಿದ್ದ ಯೂತ್ ಕಾಂಗ್ರೆಸ್ ಮೀಟಿಂಗ್ನಲ್ಲಿ ಗಲಾಟೆ ನಡೆದಿತ್ತು. ಈ ಗಲಾಟೆಯಲ್ಲಿ ನಲಪಾಡ್, ಸಚಿನ್ಗೌಡ ಎಂಬುವವರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಸಚಿನ್ ಮತ್ತು ಯೂತ್ ಕಾಂಗ್ರೆಸ್ ಅಧ್ಯಕ್ಷರ ನಡುವೆ ವಾಗ್ವಾದ ನಡೆದಿದ್ದು, ಈ ವೇಳೆ ನಲಪಾಡ್ಗೆ ನೀನ್ಯಾರು ನನ್ನ ಕೇಳೋಕೆ ಅಂತ ಆವಾಜ್ ಹಾಕಿದ್ದಾರಂತೆ.. ನಲಪಾಡ್ ಬೆರಳು ತೋರಿಸಿದ್ದಕ್ಕೆ ನಲಪಾಡ್ ಬೆಂಬಲಿಗರು ಸಚಿನ್ನ್ನು ಆಚೆ ಹಾಕಿ ಹಲ್ಲೆ ನಡೆಸಿದ್ದಾರೆಂದು ತಿಳಿದುಬಂದಿದೆ.
ನಾನು ಒಳ್ಳೆಯವನಾಗಿದ್ದೇನೆ, ನನ್ನ ನಂಬಿ ಪ್ಲೀಸ್; ಕೈಮುಗಿದು ನಲಪಾಡ್ ಕಣ್ಣೀರು!
ಆದ್ರೆ, ಇಂದು [ಸೋಮವಾರ] ಸಚಿನ್ ಗೌಡ ಸ್ವತಃ ಪೊಲೀಸ್ ಠಾಣೆಗೆ ಬಂದು ದೂರು ನೀಡಲು ತಯಾರಾಗಿದ್ದರು. ಅದಕ್ಕೂ ಮೊದಲೇ ನಲಪಾಡ್, ವೈಯಾಲಿಕಾವಲ್ ಪೊಲೀಸ್ ಠಾಣೆಗೆ ಹಾಜರಾಗಿ ದೂರು ದಾಖಲಿಸಿದ್ದಾರೆ. ಬಳಿಕ ಸಚಿನ್ ಗೌಡ ಸಹ ನಲಪಾಡ್ ವಿರುದ್ಧ ದೂರು ನೀಡಿದ್ದಾರೆ.