ಪತ್ನಿ ಗಂಟಲು ಸೀಳಿ ಎಸ್ಕೇಪ್ ಆಗುವಾಗ ಕ್ರೂರಿ ವೈದ್ಯನ ಕಾರು ಪಲ್ಟಿ

Published : Feb 20, 2021, 10:50 PM IST
ಪತ್ನಿ ಗಂಟಲು ಸೀಳಿ ಎಸ್ಕೇಪ್ ಆಗುವಾಗ ಕ್ರೂರಿ ವೈದ್ಯನ ಕಾರು ಪಲ್ಟಿ

ಸಾರಾಂಶ

ಕ್ರೂರಿ ವೈದ್ಯ/ ಪತ್ನಿಯ ಗಂಟಲು ಸೀಳಿ ಹತ್ಯೆ/ ಹತ್ಯೆ ಮಾಡಿದ್ದು ಅಲ್ಲದೆ ಆಕೆ ಮೇಲೆ ಕಾರು ಹತ್ತಿಸಿದ/ ಮಾವನ ಮೇಲೆ ಹಲ್ಲೆ ಮಾಡಿ ಎಸ್ಕೇಪ್ ಆಗುವಾಗ ಮಾಡಿದ ತಪ್ಪಿಗೆ ಶಿಕ್ಷೆ

ಚೆನ್ನೈ( ಫೆ.  20)   ಈತ ಅಂತಿಂಥ ಕ್ರೂರಿ ವೈದ್ಯನಲ್ಲ.  ಪತ್ನಿಯನ್ನು ಗಂಟಲು ಸೀಳಿ ಆಕೆಯ ಮೇಲೆ ಕಾರು ಹತ್ತಿಸಿ ಕೊಲೆ ಮಾಡಿದ್ದಾನೆ. ಕೀರ್ತನಾ(28)  ಗಂಡನಿಂದಲೇ ಹತ್ಯೆಯಾಗಿದ್ದಾಳೆ.  ಆರೋಪಿ ವೈದ್ಯ ಪತ್ನಿ ಹತ್ಯೆ ಮಾಡಿ ಮಾವನ ಕೊಲೆಗೂ ಯತ್ನಿಸಿದ್ದಾನೆ. ಅಲ್ಲಿಂದ ಪರಾರಿಯಾಗಬೇಕಿದ್ದರೆ ದುಷ್ಟ ವೈದ್ಯನ  ಕಾರು ಅಪಘಾತಕ್ಕೆ  ಗುರಿಯಾಗಿದೆ.

ಕೀರ್ತನಾ ಕಾಂಚಿಪುರಂನ ಆಸ್ಪತ್ರೆಯೊಂದರಲ್ಲಿ ಎಚ್‌ಆರ್ ಆಗಿ ಕೆಲಸ ಮಾಡುತ್ತಿದ್ದರು.  ಲಾಕ್ ಡೌನ್  ಬಳಿಕ ವೈದ್ಯ ಪತಿ ಕೆಲಸಕ್ಕೆ ಹೋಗುವುದನ್ನು  ನಿಲ್ಲಿಸಿದ್ದ.  ಕೀರ್ತನಾ ಹಿರಿಯಕ್ಕ ಮತ್ತು ವೈದ್ಯನ ಅಣ್ಣ ಮದುವೆಯಾಗಿದ್ದರು. ಇದೇ ಮದುವೆಯಲ್ಲಿ ಇಬ್ಬರ ನಡುವೆ ಪ್ರೀತಿ ಚಿಗುರೊಡೆದಿತ್ತು. 

ಸೈನಿಕನ ಹೆಂಡತಿ...ಅಕ್ರಮ ಸಂಬಂಧದ ಬೆಳಗಾವಿ ದುರಂತ ಕತೆ

ಮದುವೆ ಬಳಿಕ ಸಂಸಾರ ಆನಂದ ನಗರದಲ್ಲಿ ವಾಸವಿತ್ತು. ಅಕ್ಕಪಕ್ಕದವರು ಹೇಳುವಂತೆ ದಂಪತಿ ಮಧ್ಯೆ ಪ್ರತಿದಿನ ಜಗಳ ನಡೆಯುತ್ತಿತ್ತು.  ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರೂ ಇಬ್ಬರು ಒಂದೇ ಮನೆಯಲ್ಲಿ ಉಳಿದುಕೊಂಡಿದ್ದರು.

ಶುಕ್ರವಾರ ಇಬ್ಬರ ನಡುವೆ ಮತ್ತೆ ಜಗಳ ಆರಂಭವಾಗಿದೆ. ಸಿಟ್ಟಿಗೆದ್ದ ವೈದ್ಯ ಹೆಂಡತಿಯ ಕತ್ತು ಸೀಳಿದ್ದಾನೆ . ಈ ವೇಳೆ ತಡೆಯಲು ಬಂದ ಕೀರ್ತನಾರ ತಂದೆ ಮೇಲೆಯೂ ದಾಳಿ ಮಾಡಿದ್ದಾನೆ.  ನಂತರ  ಕಾರಿನಲ್ಲಿ ಪರಾರಿಯಾಗಲು ಯತ್ನ ಮಾಡಿದ್ದು ಹೆದ್ದಾರಿಯಲ್ಲಿ ಪೊಲೀಸರು ತಡೆಯಲು ಮುಂದಾದಾಗ ಅಪಘಾತ ಮಾಡಿಕೊಂಡಿದ್ದಾನೆ. ಗಂಭೀರ ಗಾಯಗೊಂಡ ವೈದ್ಯನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಆತನನ್ನು ಬಂಧಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು
ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ