ಹನಿಟ್ರ್ಯಾಪ್‌ ಮಾಡಿದ ಚಾನಲ್‌ ಮಾಲೀಕ: ಮೂವರ ವಿರುದ್ಧ FIR

By Kannadaprabha News  |  First Published Jan 28, 2021, 8:07 AM IST

ಚೆನ್ನೈ ಮೂಲದ ಉದ್ಯಮಿಯ ಹನಿಟ್ರ್ಯಾಪ್‌| 34 ಲಕ್ಷ ಸುಲಿಗೆ| ಬಲವಂತವಾಗಿ ಉದ್ಯಮಿ ಜತೆ ದೈಹಿಕ ಸಂಪರ್ಕ ಬೆಳೆಸಿಕೊಂಡಿದ್ದ ಮಹಿಳೆ| ಉದ್ಯಮಿಯ ಗಮನಕ್ಕೆ ಬಾರದಂತೆ ಮೊಬೈಲ್‌ನಲ್ಲಿ ಖಾಸಗಿ ದೃಶ್ಯದ ವಿಡಿಯೋ ಸೆರೆ ಹಿಡಿದಿದ್ದ ಚಾಲಾಕಿ ಮಹಿಳೆ| 
 


ಬೆಂಗಳೂರು(ಜ.28): ಚೆನ್ನೈ ಮೂಲದ ಉದ್ಯಮಿಯನ್ನು ಹನಿಟ್ರ್ಯಾಪ್‌ ಬಲೆಗೆ ಕೆಡವಿ 34 ಲಕ್ಷ ವಸೂಲಿ ಮಾಡಿದ ಆರೋಪದ ಮೇರೆಗೆ ಖಾಸಗಿ ಸುದ್ದಿ ವಾಹಿನಿ ಮಾಲೀಕ ಸೇರಿ 3ಕ್ಕೂ ಹೆಚ್ಚು ಆರೋಪಿಗಳ ವಿರುದ್ಧ ಸೈಬರ್‌ ಕ್ರೈಂ ಠಾಣೆಯಲ್ಲಿ ದೂರು ದಾಖಲಾಗಿದೆ.

ಚೆನ್ನೈ ಮೂಲದ 50 ವರ್ಷದ ಉದ್ಯಮಿ ನೀಡಿದ ದೂರಿನ ಮೇರೆಗೆ ಖಾಸಗಿ ಸುದ್ದಿವಾಹಿನಿಯೊಂದರ ಮಾಲೀಕ ಎನ್ನಲಾದ ವಿರೇಶ್‌, ಈತನ ಸಹಚರರಾದ ಸುಕನ್ಯಾ, ಶಾಜಿ ಹಾಗೂ ಇತರರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

Tap to resize

Latest Videos

ಮಂಗಳೂರು:  ಗಂಡಸರ ವಿಕ್ನೇಸ್.. ಹನಿ..ಹನಿ..ಸವಿಯಲು ಹೋದವನಿಗೆ ಸಿಕ್ಕಿದ್ದೇನು?

2019 ಸೆಪ್ಟೆಂಬರ್‌ನಲ್ಲಿ ಚೆನ್ನೈ ಉದ್ಯಮಿ ಕೆಲಸದ ನಿಮಿತ್ತ ನಗರಕ್ಕೆ ಬಂದಿದ್ದು, ಖಾಸಗಿ ಹೋಟೆಲ್‌ವೊಂದರಲ್ಲಿ ತಂಗಿದ್ದರು. ಈ ವೇಳೆ ಆರೋಪಿ ಸುಕನ್ಯಾ ಉದ್ಯಮಿ ತಂಗಿದ್ದ ಕೊಠಡಿಗೆ ಬಂದು ಏಕಾಏಕಿ ತನ್ನ ಬಟ್ಟೆ ಕಳಚಿ ಆಶ್ಲೀಲವಾಗಿ ನಿಂತು ಬಲವಂತವಾಗಿ ಉದ್ಯಮಿ ಜತೆ ದೈಹಿಕ ಸಂಪರ್ಕ ಬೆಳೆಸಿಕೊಂಡಿದ್ದಳು. ಉದ್ಯಮಿಯ ಗಮನಕ್ಕೆ ಬಾರದಂತೆ ಮೊಬೈಲ್‌ನಲ್ಲಿ ಖಾಸಗಿ ದೃಶ್ಯದ ವಿಡಿಯೋ ಸೆರೆ ಹಿಡಿದಿದ್ದಳು. 2020 ಮಾರ್ಚ್‌ನಲ್ಲಿ ನಂದಿನಿ ಹೆಸರಿನಲ್ಲಿ ಯುವತಿಯೊಬ್ಬಳು ಉದ್ಯಮಿಗೆ ಕರೆ ಮಾಡಿ ವಾಟ್ಸ್‌ಅಪ್‌ ಪರಿಶೀಲಿಸುವಂತೆ ಸೂಚಿಸಿದ್ದಳು. ವಾಟ್ಸ್‌ಅಪ್‌ ನೋಡಿದಾಗ ಈ ಹಿಂದೆ ಹೋಟೆಲ್‌ ರೂಂನಲ್ಲಿ ಸುಕನ್ಯಾ ಜತೆ ಕಳೆದ ಖಾಸಗಿ ವಿಡಿಯೋವನ್ನು ಆರೋಪಿಗಳು ಕಳುಹಿಸಿದ್ದರು. ಬಳಿಕ ಕರೆ ಮಾಡಿದ್ದ ಯುವತಿ 20 ಲಕ್ಷಕ್ಕೆ ಬೇಡಿಕೆಯಿಟ್ಟಿದ್ದಳು.

ಹಣ ಕೊಡದಿದ್ದರೆ ಕುಟುಂಬದವರಿಗೆ ವಿಡಿಯೋ ಹರಿಬಿಡುವುದಾಗಿ ಬೆದರಿಸಿದ್ದಳು. ಇದಾದ ಕೆಲ ದಿನಗಳ ಬಳಿಕ ಉದ್ಯಮಿ ವಿಡಿಯೋ ಕಳುಹಿಸಿ 80 ಲಕ್ಷಕ್ಕೆ ಆರೋಪಿಗಳ ಗ್ಯಾಂಗ್‌ ಬೇಡಿಕೆ ಇಟ್ಟಿತ್ತು. ಗೌರವಕ್ಕೆ ಅಂಜಿದ ಉದ್ಯಮಿ ಹಂತ- ಹಂತವಾಗಿ ವೀರೇಶ್‌ ಕಚೇರಿಗೆ ತೆರಳಿ 34 ಲಕ್ಷ ನೀಡಿದ್ದರು. ನಂತರ ಮತ್ತೆ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟಾಗ ನೊಂದ ಉದ್ಯಮಿ ಸೈಬರ್‌ ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪಿಗಳು ಇದೇ ರೀತಿ ಹಲವರಿಗೆ ಹನಿಟ್ರ್ಯಾಪ್‌ ನಡೆಸಿ ಸುಲಿಗೆ ಮಾಡಿರುವ ಶಂಕೆ ಇದೆ. ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಸೈಬರ್‌ ಕ್ರೈಂ ಪೊಲೀಸರು ತಿಳಿಸಿದರು.
 

click me!