ಜ್ವರ ಎಂದು ಆಸ್ಪತ್ರೆಗೆ ಹೋದ ಯುವಕ ಹೆಣವಾದ: ಶಸ್ತ್ರಚಿಕಿತ್ಸೆ ವೇಳೆ ಎಡವಟ್ಟು

By Sathish Kumar KHFirst Published Feb 26, 2023, 6:05 PM IST
Highlights

ಜ್ವರ ಬಂದಿದೆ ಎಂದು ಆಸ್ಪತ್ರೆಗೆ ಹೋದ ಯುವಕನಿಗೆ ಇಂಜೆಕ್ಷನ್‌ ಮಾಡಿದ ಕ್ಲಿನಿಕ್‌ ವೈದ್ಯರು ಸೆಪ್ಟಿಕ್‌ ಆಗುವಂತೆ ಮಾಡಿದ್ದಾರೆ. ಸೆಪ್ಟಿಕ್‌ನಿಂದ ಪಾರಾಗಲು ಶಸ್ತ್ರಚಿಕಿತ್ಸೆಗೆ ಒಳಗಾದರೆ ತೀವ್ರ ರಕ್ತಸ್ರಾವದಿಂದ ಕೊನೆಯುಸಿರೆಳೆದಿರುವ ದುರ್ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರು (ಫೆ.26): ಜ್ವರ ಬಂದಿದೆ ಎಂದು ಆಸ್ಪತ್ರೆಗೆ ಹೋದ ಯುವಕನಿಗೆ ಇಂಜೆಕ್ಷನ್‌ ಮಾಡಿದ ಕ್ಲಿನಿಕ್‌ ವೈದ್ಯರು ಸೆಪ್ಟಿಕ್‌ ಆಗುವಂತೆ ಮಾಡಿದ್ದಾರೆ. ಸೆಪ್ಟಿಕ್‌ನಿಂದ ಪಾರಾಗಲು ಶಸ್ತ್ರಚಿಕಿತ್ಸೆಗೆ ಒಳಗಾದರೆ ತೀವ್ರ ರಕ್ತಸ್ರಾವದಿಂದ ಕೊನೆಯುಸಿರೆಳೆದಿರುವ ದುರ್ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಎಲ್ಲರಿಗೂ ಸಾಮಾನ್ಯವಾಗಿ ಜ್ವರ, ಕೆಮ್ಮು, ನೆಗಡಿ ಹಾಗೂ ಇತರೆ ಸಣ್ಣಪುಟ್ಟ ಕಾಯಿಲೆಗಳು ಬರುತ್ತವೆ. ಇದಕ್ಕೆ ಹತ್ತಿರದ ಕ್ಲಿನಿಕ್‌ಗೆ ತೆರಳಿ ವೈದ್ಯರಿಂದ ಒಂದು ಇಂಜೆಕ್ಷನ್‌ ಹಾಗೂ ಮಾತ್ರೆಗಳನ್ನು ಪಡೆದು ಆರೋಗ್ಯ ಸುಧಾರಿಸಿಕೊಳ್ಳುತ್ತಾರೆ. ರಾಮಮೂರ್ತಿ ನಗರದ ಯುವಕ ವಿಜೇತ್‌ (24) ಕೂಡ ತನಗೆ ಜ್ವರ ಬಂದಿದೆ ಎಂದು ಹತ್ತಿರದ ಕ್ಲಿನಿಕ್‌ಗೆ ಹೋದ ವೇಳೆ ಎಲ್ಲ ವೈದ್ಯರಂತೆ ಅಲ್ಲಿನ ವೈದ್ಯರೂ ಕೂಡ ಒಂದು ಇಂಜೆಕ್ಷನ್‌ ಮಾಡಿದ್ದಾರೆ. ಆದರೆ, ಈ ಇಂಜೆಕ್ಷನ್‌ ಕೊಟ್ಟ ನಂತರ ಯುವಕನಿಗೆ ರಕ್ತದಲ್ಲಿ ನಂಜು ಉಂಟಾಗಿದೆ. ಇದಕ್ಕೆ ಚಿಕಿತ್ಸೆ ಪಡೆಯಲು ಖಾಸಗಿ ಆಸ್ಪತ್ರೆಗೆ ತೆರಳಿದಾಗ ಶಸ್ತ್ರಚಿಕಿತ್ಸೆ ಮಾಡಬೇಕು ಎಂದು ಹೇಳಿದ್ದಾರೆ.

Latest Videos

ಕತ್ತಲು ಸರಿಯುವ ಮೊದಲೇ ರಸ್ತೆಯಲ್ಲಿ ಹರಿದ ರಕ್ತ : ಒಂದೇ ಕುಟುಂಬದ ನಾಲ್ವರು ಸಾವು

ರಕ್ತ ಸಂಗ್ರಹಣೆ ಇಲ್ಲದೆ ಶಸ್ತ್ರಚಿಕಿತ್ಸೆ: ಕ್ಲಿನಿಕ್‌ನಲ್ಲಿ ಮಾಡಿದ ಇಂಜೆಕ್ಷನ್‌ ಸೆಪ್ಟಿಕ್‌ ಆದ ಬಳಿಕ ರಾಮಮೂರ್ತಿ ನಗರದ ಕೋಷಿಸ್ ಖಾಸಗಿ ಆಸ್ಪತ್ರೆ ಗೆ ದಾಖಲು ಮಾಡಿದ್ದಾರೆ. ಅಲ್ಲಿ ಜ್ವರ ಅಂತ ಹೋದ ಯುವಕ ನಿಗೆ ಸರ್ಜರಿ ಆಗಬೇಕು ಅಂತಾ ತಿಳಿಸಿದ್ದಾರೆ. ಆದರೆ, ಯುವಕನಿಗೆ ಅಗತ್ಯವಿರುವ ರಕ್ತವನ್ನು ಮೊದಲೇ ಸಗ್ರಹಣೆ ಮಾಡಿಟ್ಟುಕೊಳ್ಳದೇ ಶಸ್ತ್ರಚಿಕಿತ್ಸೆ ಮಾಡಲು ಮುಂದಾಗಿದ್ದಾರೆ. ಆದರೆ, ಸರ್ಜರಿ ವೇಳೆ ತೀವ್ರ ರಕ್ತಸ್ತ್ರಾವ ಉಂಟಾಗಿದೆ. ಈ ವೇಳೆ ಆತುರದಲ್ಲಿ ಯುವಕನ ಕುಟುಂಬ ಸದಸ್ಯರಿಗೆ ನೀವು ಹೋಗಿ ಎಲ್ಲಿಯಾದರೂ ರಕ್ತ ತರುವಂತೆ ತಿಳಿಸಿದ್ದಾರೆ. ಆದರೆ, ರಕ್ತ ತರುವಷ್ಟರಲ್ಲಿ ಯುವಕನ ಸಾವು ಉಂಟಾಗಿದೆ.

ಕೋಷಿಸ್ ಆಸ್ಪತ್ರೆ ವಿರುದ್ಧ ಕುಟುಂಬಸ್ಥರ ಆಕ್ರೋಶ: ಇನ್ನು ರಕ್ತದ ಸಂಗ್ರಹಣೆ ಇಲ್ಲದೆಯೇ ಯುವಕನಿಗೆ ಶಸ್ತ್ರಚಿಕಿತ್ಸೆ ಮಾಡಲು ಮುಂದಾದ ಕೋಷಿಸ್ ಆಸ್ಪತ್ರೆಯ ವಿರುದ್ಧ ಮೃತ ಯುವಕನ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಆಸ್ಪತ್ರೆಯ ಗಾಜುಗಳು ಹಾಗೂ ಇತರೆ ಪರಿಕರಗಳನ್ನು ಒಡೆದು ಹಾಕಿದ್ದಾರೆ. ಆದರೆ, ಆಸ್ಪತ್ರೆ ಸಿಬ್ಬಂದಿ ಮಾತ್ರ ತಮ್ಮದು ತಪ್ಪು ಎಂದು ಒಪ್ಪಿಕೊಳ್ಳದೇ ಕುಟುಂಬ ಸದಸ್ಯರು ರಕ್ತವನ್ನು ತರುವಲ್ಲಿ ನಿರ್ಲಕ್ಷ್ಯ ಮಾಡಿದೆ ಎಂದು ಹೇಳಿಕೊಂಡಿದೆ. ಈಗ ಸಾಮಾನ್ಯವಾಗಿ ಜ್ವರ ಬಂದಿದೆ ಎಂದು ಆಸ್ಪತ್ರೆಗೆ ಹೋದ ಯುವಕನ ಜೀವವನ್ನೇ ತೆಗೆಯಲಾಗಿದ್ದು, ಯಾವ ವೈದ್ಯರ ನಿರ್ಲಕ್ಷ್ಯ ಎಂಬುದು ಯಾರೊಬ್ಬರೂ ಒಪ್ಪಿಕೊಳ್ಳುತ್ತಿಲ್ಲ. 

ಪ್ರೀತಿಸಿದ ಹುಡುಗಿ ಕೈಕೊಟ್ಟಳೆಂದು ವಿಷ ಸೇವಿಸಿದ ಯುವಕ:
ಬೆಂಗಳೂರು (ಫೆ.26): ಪ್ರೇಮ ವೈಫಲ್ಯ ಹಿನ್ನೆಲೆಯಲ್ಲಿ ಬೆಂಗಳೂರಿನ ವಸಂತಪುರದ ಯುವಕನೊಬ್ಬ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ಅರುಣ್ (38) ಆತ್ಮಹತ್ಯೆಗೆ ಯತ್ನಿಸಿದ ಯುವಕ ಆಗಿದ್ದಾನೆ. ಕಳೆದ ಎಂಟು ವರ್ಷಗಳಿಂದ ಒಬ್ಬ ಯುವತಿಯನ್ನ ಪ್ರೀತಿ ಮಾಡ್ತಿದ್ದನು. ಮೂರು ವರ್ಷಗಳಿಂದೆ ಚಾಮುಂಡಿಬೆಟ್ಟ ದೇವಸ್ಥಾನದಲ್ಲಿ  ಮದ್ವೆ ಮಾಡಿಕೊಂಡಿದ್ದ ಬಗ್ಗೆ ಹೇಳಿದ್ದಾನೆ. ಎರಡೂ ಮನೆಯವರನ್ನು ಒಪ್ಪಿಸಿ ಮತ್ತೊಮ್ಮೆ ಮದುವೆ ಮಾಡಿಕೊಳ್ಳಲು ಅರುಣ್‌ ಮುಂದಾಗಿದ್ದನು.

ಉಪವಾಸ ಸತ್ಯಾಗ್ರಹನಿರತ ಅಜೀಂ ಪ್ರೇಮ್‌ಜಿ ವಿವಿ ವಿದ್ಯಾರ್ಥಿ ಸಾವು: ಆಡಳಿತ ಮಂಡಳಿ ವಿರುದ್ಧ ಆಕ್ರೋಶ

ಫೋನ್‌ ಮಾಡಿದರೂ ಸಂಪರ್ಕಕ್ಕೆ ಸಿಗದ ಯುವತಿ: ಅದರಂತೆ ಯುವತಿಯ ಮನೆಗೆ ಹೋಗಿ ಮದುವೆ ಮಾಡಿಕೊಡುವಂತೆ ಅರುಣ್‌ ಕೇಳಿದಾಗ ಯುವತಿ ಪೋಷಕರಿಂದ ವಿರೋಧ ವ್ಯಕ್ತವಾಗಿದೆ. ಜೊತೆಗೆ, ತಾನು ಪ್ರೀತಿಸಿದ ಯುವತಿಗೆ ಬೇರೊಬ್ಬ ಯುವಕನೊಂದಿಗೆ ಮದುವೆ ಮಾಡಲು ಸಿದ್ಧತೆಯನ್ನು ಕೂಡ ಮಾಡಿದ್ದಾರೆ. ಮುಂದುವರೆದು ಯುವತಿ ಪೋಷಕರು ತಮ್ಮ ಸಂಬಂಧಿಕರಿಗೆ ಮದುವೆ ಆಹ್ವಾನ ಪತ್ರಿಕೆ ಹಂಚಿದ್ದಾರೆ. ಈ ಮದುವೆ ಪತ್ರವನ್ನು ನೋಡಿದ ಅರುಣ್ ಯುವತಿಯ ಸಂಪರ್ಕಕ್ಕೆ ಯತ್ನ ಮಾಡಿದ್ದಾನೆ. ಆದರೆ, ಯುವತಿ ಮೊಬೈಲ್ ಸ್ವಿಚ್ ಆಫ್ ಆಗಿರೋದ್ರಿಂದ ಮನನೊಂದು ಆತ್ಮಹತ್ಯೆ ಯತ್ನಿಸಿದ್ದಾರೆ. ಈಗ ಅರುಣ್‌ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಕುರಿತು ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆ ಪ್ರಕರಣ ದಾಖಲು ಆಗಿದೆ.

click me!