Bengaluru Crime News : ಅಂಗವಿಕಲ ಮಗನ ಸಂಪಿಗೆ ಎಸೆದು ಕೊಂದು ತಂದೆ ಆತ್ಮಹತ್ಯೆ

By Kannadaprabha News  |  First Published Dec 14, 2021, 6:25 AM IST
  •  ಅಂಗವಿಕಲ ಮಗನ ಸಂಪಿಗೆ ಎಸೆದು ಕೊಂದು ತಂದೆ ಆತ್ಮಹತ್ಯೆ
  •  ನಿದ್ರೆಯಲ್ಲಿದ್ದ ಮಗನನ್ನು  ಮರಕ್ಕೆ ನೇಣು ಹಾಕಿಕೊಂಡ ಆಟೋ ಚಾಲಕ
     

 ಬೆಂಗಳೂರು (ಡಿ.14): ಜೀವನದಲ್ಲಿ ಜಿಗುಪ್ಸೆಗೊಂಡು ತನ್ನ ಹತ್ತು ವರ್ಷದ ಅಂಗವಿಕಲ ಮಗನನ್ನು ಕೊಂದು (Kill) ಬಳಿಕ ತಂದೆ ಆತ್ಮಹತ್ಯೆಗೆ (Suicide) ಶರಣಾಗಿರುವ ಘಟನೆ ನಗರದಲ್ಲಿ ಸೋಮವಾರ ನಡೆದಿದೆ. ಸಂಪಂಗಿ ರಾಮ ನಗರದ 3ನೇ ಅಡ್ಡರಸ್ತೆ ನಿವಾಸಿ ಸುರೇಶ್‌ (40) ಹಾಗೂ ಅವರ ಪುತ್ರ ಉದಯ್‌ ಸಾಯಿರಾಮ್‌ (10) ಮೃತರು. ಮನೆಯ ನೀರಿನ ಸಂಪ್‌ಗೆ (water Sump) ಎಸೆದು ಬೆಳಗ್ಗೆ ಮಗನನ್ನು ಕೊಂದ ಬಳಿಕ ಸುರೇಶ್‌, ಶೇಷಾದ್ರಿಪುರ ಸಮೀಪದ ರೈಲ್ವೆ (Railway) ಹಳಿಯ ಪಕ್ಕದ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು (Police) ತಿಳಿಸಿದ್ದಾರೆ.

ಹದಿನೈದು ವರ್ಷಗಳ ಜಿಲ್ಲೆ (Hassan)  ಅರಸಿಕೆರೆ ತಾಲೂಕಿನ ಆಟೋ (Auto Driver) ಚಾಲಕ ಸುರೇಶ್‌ ಹಾಗೂ ಲಕ್ಷ್ಮಿ ವಿವಾಹವಾಗಿದ್ದು (Marriage), ದಂಪತಿಗೆ ಓರ್ವ ಪುತ್ರನಿದ್ದ. ಆದರೆ ಸಾಯಿರಾಂಗೆ ಹುಟ್ಟಿನಿಂದಲೂ ಮಾತು ಬರುತ್ತಿರಲಿಲ್ಲ, ಕಣ್ಣು ಕಾಣುತ್ತಿರಲಿಲ್ಲ. ಇದರಿಂದ ದಂಪತಿ ಬೇಸರಗೊಂಡಿದ್ದರು. ಇತ್ತೀಚೆಗೆ ಬೆನ್ನು ಹುರಿ ಸಮಸ್ಯೆಗೆ ತುತ್ತಾದ ಸುರೇಶ್‌, ತಮ್ಮ ವೈದ್ಯಕೀಯ ಚಿಕಿತ್ಸೆ (Treatment) ಭರಿಸಲಾಗದೆ ಸಂಕಷ್ಟಕ್ಕೆ ತುತ್ತಾಗಿದ್ದರು. ಈ ಹತಾಶೆಯಲ್ಲಿ ಸತಿ-ಪತಿ ಮಧ್ಯೆ ಮನೆಯಲ್ಲಿ ಜಗಳಗಳು ನಡೆದಿದ್ದವು ಎಂದು ಪೊಲೀಸರು ಹೇಳಿದ್ದಾರೆ.

Tap to resize

Latest Videos

ಅನಾರೋಗ್ಯ (Health Issue) ಸಮಸ್ಯೆ ಹಾಗೂ ಮಗನ ಅಂಗವಿಕಲ ಮಗನ ಸಂಕಷ್ಟದಿಂದ ಬೇಸರಗೊಂಡ ಸುರೇಶ್‌, ತಮ್ಮ ಪತ್ನಿಗೆ ‘ನಾನು ಮತ್ತು ನನ್ನ ಮಗ ಸತ್ತು ಹೋಗುತ್ತೇವೆ. ನೀನು ನಿಶ್ಚಿಂತೆಯಿಂದ ಜೀವನ ನಡೆಸಬಹುದು‘ ಎಂದಿದ್ದರು. ಮನೆಯಲ್ಲಿ ಪತ್ನಿ ನಿದ್ರೆ ಮಾಡುವ ವೇಳೆ ಎಚ್ಚರಗೊಂಡ ಸುರೇಶ್‌, ಪತ್ನಿಗೆ ಗೊತ್ತಾಗದಂತೆ ನಿದ್ರೆಯಲ್ಲಿದ್ದ ಮಗನನ್ನು ತಂದು ನೀರಿನ ಸಂಪ್‌ಗೆ ಎಸೆದಿದ್ದಾರೆ. ಬಳಿಕ ಶೇಷಾದ್ರಿಪುರ ರೈಲ್ವೆ ಹಳಿ ಸಮೀಪ ಮರಕ್ಕೆ ಸುರೇಶ್‌ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ನಿದ್ರೆಯಿಂದ ಎಚ್ಚರಗೊಂಡ ಲಕ್ಷ್ಮಿ ಅವರು, ಮನೆಯಲ್ಲಿ ಪತಿ ಮತ್ತು ಮಗ ಕಾಣದೆ ಕಂಗಲಾಗಿದ್ದಾರೆ. ಆಗ ಮನೆ ಸುತ್ತಮುತ್ತ ಹುಡುಕಾಡಿದಾಗ ಅವರಿಬ್ಬರು ಎಲ್ಲಿಯೂ ಪತ್ತೆಯಾಗಿಲ್ಲ. ಕೊನೆಗೆ ನೀರಿನ ಸಂಪ್‌ನ ಮುಚ್ಚಳ ತೆಗೆದಾಗ ಉದಯ್‌ ಮೃತದೇಹ ಪತ್ತೆಯಾಗಿದೆ. ಬಳಿಕ ಸುರೇಶ್‌ ಮೊಬೈಲ್‌ಗೆ (Mobile) ಅವರು ನಿರಂತರವಾಗಿ ಕರೆ ಮಾಡಿದ್ದಾರೆ. ಆದರೆ ಪ್ರತಿಕ್ರಿಯೆ ಬಂದಿಲ್ಲ. ಮಧ್ಯಾಹ್ನ ರೈಲ್ವೆ ಹಳಿ ಸಮೀಪ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಅಪರಿಚಿತ ಮೃತದೇಹ ಕಂಡ ಸಾರ್ವಜನಿಕರು ಪೊಲೀಸರಿಗೆ ತಿಳಿಸಿದ್ದಾರೆ. ಈ ಮಾಹಿತಿ ಮೇರೆಗೆ ಸ್ಥಳಕ್ಕೆ ತೆರಳಿದ ಪೊಲೀಸರು ಪರಿಶೀಲಿಸಿದಾಗ ಮೃತದೇಹದ ಗುರುತು ಸಿಕ್ಕಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಈ ಸಂಬಂಧ ಶೇಷಾದ್ರಿಪುರ ಹಾಗೂ ಸಂಪಂಗಿರಾಮ ನಗರ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.

ಕ್ಷುಲಕ ಕಾರಣಕ್ಕೆ ಐವರ ಕೊಲೆ :  

ಕ್ಷುಲ್ಲಕ ಕಾರಣಕ್ಕೆ ಇಬ್ಬರು ವಿದೇಶಿ ಪ್ರಜೆಗಳ(Foreign Citizens) ಮಧ್ಯೆ ಉಂಟಾದ ಜಗಳವು ಕೊಲೆಯಲ್ಲಿ(Murder) ಅಂತ್ಯವಾಗಿರುವ ಘಟನೆ ಬಾಣಸವಾಡಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ನಡೆದಿದೆ. ಆಫ್ರಿಕಾ(Africa) ದೇಶದ ವಿಕ್ಟರ್‌ (40) ಕೊಲೆಯಾದ ದುರ್ದೈವಿ. ಈ ಘಟನೆ ಸಂಬಂಧ ಮೃತನ ಸ್ನೇಹಿತ ಆಫ್ರಿಕಾ ಪ್ರಜೆಯನ್ನು ಪೊಲೀಸರು(Police) ವಶಕ್ಕೆ(Arrest) ಪಡೆದಿದ್ದಾರೆ. ಕಮ್ಮನಹಳ್ಳಿ ಸಮೀಪದ ಕುಳ್ಳಪ್ಪ ಸರ್ಕಲ್‌ನಲ್ಲಿ ರಾತ್ರಿ 10 ಗಂಟೆಗೆ ಸುಮಾರಿಗೆ ಈ ಹತ್ಯೆ ನಡೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮೃತ ವಿಕ್ಟರ್‌ ಹಾಗೂ ಆರೋಪಿ ಆಫ್ರಿಕಾ ಮೂಲದವರಾಗಿದ್ದು, ಕಮ್ಮನಹಳ್ಳಿ ಸಮೀಪ ಅವರು ನೆಲೆಸಿದ್ದರು. ಇಬ್ಬರು ಕೂಡಾ ಆತ್ಮೀಯ ಸ್ನೇಹಿತರಾಗಿದ್ದರು. ಕುಳ್ಳಪ್ಪ ಸರ್ಕಲ್‌ನಲ್ಲಿ ನಡೆದುಕೊಂಡು ಹೋಗುವಾಗ ಸಣ್ಣ ವಿಚಾರಕ್ಕೆ ಇಬ್ಬರ ಮಧ್ಯೆ ಜಗಳವಾಗಿದೆ. ಆಗ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. ಈ ಹಂತದಲ್ಲಿ ಕೆರಳಿದ ಆರೋಪಿ, ವಿಕ್ಟರ್‌ಗೆ ಚಾಕುವಿನಿಂದ ಇರಿದಿದ್ದಾನೆ. ತೀವ್ರ ರಕ್ತಸ್ರಾವವಾಗಿ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ(Death) ಎಂದು ಅಧಿಕಾರಿಗಳು ತಿಳಿಸಿದ್ದಾರೆ.

click me!