ಅಪ್ರಾಪ್ತ ಮಗಳ ಮೇಲೆ ತಂದೆಯಿಂದ ಅತ್ಯಾಚಾರಕ್ಕೆ ಯತ್ನ: ಬಂಧನ, ಪೊಲೀಸರಿಂದ ಮುಂದೆ ತಪ್ಪೊಪ್ಪಿಗೆ

Published : Sep 08, 2022, 10:24 AM IST
ಅಪ್ರಾಪ್ತ ಮಗಳ ಮೇಲೆ ತಂದೆಯಿಂದ ಅತ್ಯಾಚಾರಕ್ಕೆ ಯತ್ನ: ಬಂಧನ, ಪೊಲೀಸರಿಂದ ಮುಂದೆ ತಪ್ಪೊಪ್ಪಿಗೆ

ಸಾರಾಂಶ

Rape attempt: ತಂದೆ ಮತ್ತು ಮಗಳ ಸಂಬಂಧ ಅತ್ಯಂತ ಪವಿತ್ರವಾದ ಬಂಧ. ಆದರೆ ಇಲ್ಲೊಬ್ಬ ಅಪ್ಪ ಮಗಳ ಮೇಲೆಯೇ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಘಟನೆಯ ನಂತರ ಸಂತ್ರಸ್ಥೆ ಪೊಲೀಸರಿಗೆ ದೂರು ನೀಡಿದ್ದು ತಂದೆಯನ್ನು ಬಂಧಿಸಲಾಗಿದೆ. 

ಮಧ್ಯ ಪ್ರದೇಶ: ಮಧ್ಯಪ್ರದೇಶದ ಗ್ವಾಲಿಯರ್‌ ಜಿಲ್ಲೆಯ ಬಹೋದಾಪುರ ಪೊಲೀಸರು ದಿನಸಿ ಅಂಗಡಿ ಮಾಲೀಕರೊಬ್ಬರನ್ನು ಮಗಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಪ್ರಕರಣದಲ್ಲಿ ಬಂಧಿಸಿದ್ದಾರೆ. 17 ವರ್ಷದ ತನ್ನ ಮಗಳ ಮೇಲೆ ಆರೋಪಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಅಪ್ಪ ಮಾಡಿದ ಕೃತ್ಯದಿಂದ ಮನನೊಂದು ಯುವತಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ನಂತರ ಸ್ನೇಹಿತರ ಸಲಹೆಯ ಮೇರೆಗೆ ಪೊಲೀಸರಿಗೆ ದೂರು ನೀಡಿದ್ದಾಳೆ. ಬಹೋದಾಪುರ ಪೊಲೀಸರ ಮಾಹಿತಿ ಪ್ರಕಾರ, ಸಂತ್ರಸ್ಥೆ ತನ್ನ ದೂರಿನಲ್ಲಿ ಹೇಳಿರುವ ಪ್ರಕಾರ ಆಕೆಯ ಅಜ್ಜ ಕೆಲ ದಿನಗಳ ಹಿಂದೆ ಮೃತಪಟ್ಟಿದ್ದರು. ಈ ಕಾರಣಕ್ಕಾಗಿ ಹಲವು ಸಂಬಂಧಿಗಳು ಮನೆಗೆ ಭೇಟಿ ನೀಡಿದ್ದರು. ಆ ವೇಳೆ ರಾತ್ರಿ ಸಂತ್ರಸ್ಥೆ ಒಬ್ಬಳೇ ಮನೆಯ ಹಾಲ್‌ನಲ್ಲಿ ಮಲಗಿದ್ದಳು. ಸಂಬಂಧಿಗಳು ಇದ್ದ ಕಾರಣ, ನಿದ್ದೆ ಬರಲಿಲ್ಲ. ಈ ಕಾರಣಕ್ಕಾಗಿ ಆಕೆ ಮಲಗಲು ತನ್ನ ತಂದೆಯ ಕೋಣೆಗೆ ತೆರಳಿದಳು. ತನ್ನ ತಂದೆ ಮತ್ತು ಸಹೋದರನ ನಡುವೆ ಮಲಗಿದಳು.

ಸ್ವಲ್ಪ ಹೊತ್ತಿನ ಬಳಿಕ ಆಕೆಯ ಖಾಸಗಿ ಅಂಗಗಳನ್ನು ಯಾರೋ ಮುಟ್ಟುತ್ತಿರುವಂತೆ ಅನಿಸಿದೆ. ತಕ್ಷಣ ಆಕೆ ಎದ್ದು ಯಾರೆಂದು ನೋಡಿದಾಗ ಸ್ವಂತ ತಂದೆಯೇ ಇಂತಾ ಕೆಲಸವನ್ನು ಮಾಡುತ್ತಿರುವುದು ತಿಳಿದುಬಂದಿದೆ. ತಕ್ಷಣ ಯುವತಿ ಕೋಣೆಯಿಂದ ಆಚೆ ಓಡಿ ಹೋಗಿದ್ದಾಳೆ. 

ಇದನ್ನೂ ಓದಿ: ಬಾಲಕಿಯ ಕತ್ತು ಸೀಳಿ ಮುಖಕ್ಕೆ ಆಸಿಡ್ ಎರಚಿದ ಕಿರಾತಕ: ಆಂಧ್ರದಲ್ಲಿ ಭೀಭತ್ಸ ಕೃತ್ಯ

ಸಂತ್ರಸ್ಥೆಯ ದೂರಿನ ಪ್ರಕಾರ ಘಟನೆಯಿಂದ ಮನನೊಂದು ಯುವತಿ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿದಳು. ಆದರೆ ತನ್ನ ಸ್ನೇಹಿತೆಗೆ ಒಮ್ಮೆ ಕರೆ ಮಾಡಿದಳು. ಸ್ನೇಹಿತೆ ಮನೆಯ ಹತ್ತಿರದಲ್ಲೇ ವಾಸವಿದ್ದಳು. ಘಟನೆಯ ಬಗ್ಗೆ ಕೇಳಿದ ನಂತರ ಸ್ನೇಹಿತೆ ಪೊಲೀಸರಿಗೆ ದೂರು ನೀಡುವಂತೆ ಸಲಹೆ ನೀಡಿದಳು. ಅದರಂತೆಯೇ ಯುವತಿ ಪೊಲೀಸ್‌ ಠಾಣೆಗೆ ಭೇಟಿ ನೀಡಿ ಘಟನೆ ಸಂಬಂಧ ದೂರು ನೀಡಿದ್ದಾಳೆ. ನಂತರ ಪೊಲೀಸರು ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ. 
ಆರೋಪಿಯನ್ನು ಪೊಲೀಸರು ಬಂಧಿಸಿದ ನಂತರ ಠಾಣೆಯಲ್ಲಿ ವಿಚಾರಣೆಗೆ ಒಳಪಡಿಸಲಾಗಿದೆ. ವಿಚಾರಣೆ ವೇಳೆ ಪೊಲೀಸರ ಮುಂದೆ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಸಂತ್ರಸ್ಥೆಯ ವೈದ್ಯಕೀಯ ಪರೀಕ್ಷೆ ಕೂಡ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

ಇದನ್ನೂ ಓದಿ: ನೀನ್ ಬೇಡ..ನನಗೆ ಬಾಯ್‌ಫ್ರೆಂಡೇ ಬೇಕು ಎಂದ ಪತ್ನಿ ಗಂಡನನ್ನೇ ಕೊಂದಳು..!

ತಂದೆ ಮತ್ತು ಮಗಳ ಸಂಬಂಧ ಪವಿತ್ರ ಬಂಧವಾಗಿದ್ದು ಮಗಳ ಮೇಲೆಯೇ ವಿಕೃತಿ ಮೆರೆದಿರುವುದು ಹೇಯ ಕೃತ್ಯವಾಗಿದೆ. ಇತ್ತೀಚಿನ ದಿನಗಳಲ್ಲಿ ಸಂಬಂಧಗಳು ಬೆಲೆ ಕಳೆದುಕೊಳ್ಳುತ್ತಿವೆ. ಈ ರೀತಿಯ ಘಟನೆಗಳು ಆಗಾಗ ಬೆಳಕಿಗೆ ಬರುತ್ತಲೇ ಇವೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರು ವಿಜಯ್ ಗುರೂಜಿ ಗ್ಯಾಂಗ್ ಸಮೇತ ಅರೆಸ್ಟ್; ಟೆಕ್ಕಿಗೆ ಲೈಂಗಿಕ ಶಕ್ತಿ ಹೆಚ್ಚಿಸೋದಾಗಿ ₹40 ಲಕ್ಷ ವಂಚನೆ!
ಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ: ಶಿಕ್ಷಕನಿಗೆ ಪೋಷಕರಿಂದ ಧರ್ಮದೇಟು!