ನೀರಿನ ರಭಸಕ್ಕೆ ಕೊಚ್ಚಿ ಹೋದ ತಂದೆ ಮಗ/ ಜಲಪಾತ ನೋಡಲು ಬಂದವರ ದುರ್ಮರಣ/ ಶವಕ್ಕಾಗಿ ಪತ್ತೆ ಕಾರ್ಯ/ ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಗೊಲಪಲ್ಲಿ ಗ್ರಾಮದ ಬಳಿಯ ಗುಂಡಲಬಂಡಾ ಜಲಪಾತದಲ್ಲಿ ದುರ್ಘಟನೆ
ರಾಯಚೂರು(ಜು. 23) ರಾಯಚೂರು ಜಿಲ್ಲೆಯಲ್ಲಿ ಜಲಪಾತ ನೋಡಲು ಬಂದ ತಂದೆ ಮತ್ತು ಮಗ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಗೊಲಪಲ್ಲಿ ಗ್ರಾಮದ ಬಳಿಯ ಗುಂಡಲಬಂಡಾ ಜಲಪಾತದಲ್ಲಿ ದುರ್ಘಟನೆ ಸಂಭವಿಸಿದೆ.
ದೇವದುರ್ಗ ತಾಲೂಕಿನ ಮೂಡಲಗುಂಡ ಗ್ರಾಮದ ನಾಲ್ಕು ಜನರು ಜಲಪಾತ ನೋಡಲು ಆಗಮಿಸಿದ್ದರು. ಈ ವೇಳೆ ಜಲಪಾತ ಮೇಲ್ಭಾಗದಲ್ಲಿ ಭಾರೀ ಮಳೆಯಾಗಿದೆ. ಹೀಗಾಗಿ ಏಕಾಏಕಿ ಜಲಪಾತಕ್ಕೆ ನೀರು ರಭಸವಾಗಿ ಬಂದಿದೆ. ನೀರಿನ ರಭಸದಿಂದ ಜಲಪಾತದಲ್ಲಿ ಸ್ನಾನ ಮಾಡುತ್ತಿದ್ದ 35 ವರ್ಷದ ಕೃಷ್ಣಪ್ಪ ಹಾಗೂ ಆತನ 5 ವರ್ಷದ ಮಗ ಧನುಷ್ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ.
undefined
ವಿಜಯಪುರ: ಲೈಂಗಿಕ ಕ್ರಿಯೆ ನಡೆಸುವಾಗಲೇ ಸಿಕ್ಕಿಬಿದ್ದ ಮಹಿಳೆ... ಆಮೇಲೆ!
ಇನ್ನುಳಿದ ಇಬ್ಬರಲ್ಲಿ ಒಬ್ಬ ನೀರಿನ ರಭಸ ಕಂಡು ಓಡಿ ದಡ ಸೇರಿದ್ರೆ, ಮತ್ತೊಬ್ಬ 18 ವರ್ಷದ ಯುವಕ ಮಾಹಾಂತೇಶ್ ನಡುಬಂಡೆಯ ಮೇಲೆ ನಿಂತುಕೊಂಡು ಬರಲು ಆಗದೇ ಪರದಾಡುತ್ತಿದ್ದನು. ವಿಷಯ ತಿಳಿದು ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಯುವಕನಿಗೆ ಹಗ್ಗ ನೀಡಿ ಬರುವಂತೆ ತಿಳಿಸಿದ್ದರು. ಆದ್ರೆ ನೀರಿನ ರಭಸ ಹೆಚ್ಚಾಗಿರಿಂದ ಯುವಕ ಹಗ್ಗದ ಬರಲು ಹಿಂದೇಟು ಹಾಕಿದ್ದ, ಹೀಗಾಗಿ ಗೊಲ್ಲಪಲ್ಲಿ ಗ್ರಾಮದ ಯುವಕ ಹನುಮಂತ ನಾಯಕ ಎಂಬಾತ ತನ್ನ ಜೀವದ ಹಂಗು ತೊರೆದು ಜಲಪಾತ ನಡುಗಡ್ಡೆಯಲ್ಲಿ ಸಿಲುಕಿದ ಯುವಕನನ್ನ ಸುರಕ್ಷಿತವಾಗಿ ದಡ ಸೇರಿಸಿದ್ದಾರೆ.
ಇನ್ನೂ ನೀರಿನಲ್ಲಿ ಕೊಚ್ಚಿಕೊಂಡು ಹೋದ ತಂದೆ- ಮಗನ ಶವಕ್ಕಾಗಿ ಶೋಧಕಾರ್ಯ ನಡೆದಿದೆ.ಆದ್ರೆ ನೀರಿನ ರಭಸ ಹೆಚ್ಚಾಗಿ ಇರುವುದರಿಂದ ನಾಪತ್ತೆಯಾದವರ ಪತ್ತೆ ಕಾರ್ಯ ಸವಾಲಾಗಿದೆ.